Advertisements

23 ವರ್ಷ ಈ ಒಂದು ಹೋಟೆಲ್ ನಲ್ಲೇ ಹುಳಿದುಕೊಂಡಿದ್ದರು ಅಂಬರೀಶ್.. ನಿಜವಾದ ಕಾರಣ ಏನು ಗೊತ್ತಾ?

Cinema

ರೆಬಲ್ ಸ್ಟಾರ್ ಅಂಬರೀಶ್.. ಮಂಡ್ಯದ ಗಂಡು, ಸಿನಿರಂಗದ ದಿಗ್ಗಜನ ಹೆಸರು ಹೇಳಿದ್ರೆ ಸಾಕು ಅದೆಷ್ಟು ಅಭಿಮಾನಿಗಳು ಇಂದಿಗೂ ಸರ‍್ತಾರೆ. ಅಂಬಿ ಅಂದ್ರೆ ಹಾಗೇ ಮಾತು ಒರಟು ಮನಸ್ಸು ಮಗು, ಕಟು ಧನಿಯಿಂದ ಗದರಿಸಿದ್ರು, ಎಲ್ಲರನ್ನು ಪ್ರೀತಿಯಿಂದ ಕಾಣುವ ಶ್ರೀಮಂತ ವ್ಯಕ್ತಿತ್ವ. ಅಂತಹ ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ ರೆಬಲ್ ಸ್ಟಾರ್ ಅಂಬರೀಶ್ ಅವರುಗೆ 23 ವರ್ಷಗಳ ಕಾಲ ಸ್ವಂತ ಮನೆಯಿರಲಿಲ್ವಂತೆ, ಅವರು ಬೆಂಗಳೂರಿನ ಸಂಪಗಿನಗರದ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ರಂತೆ. ಅದಿನ್ನೂ ಅಂಬಿ ರಾಜಕೀಯಕ್ಕೆ ಎಂಟ್ರಿ ಕೊಡದ ಕಾಲ, ಸಿನಿರಂಗದಲ್ಲಿ ಪ್ರಜ್ವಲಿಸ್ತಾಯಿದ್ದಂತಹ ರೆಬಲ್ ಸ್ಟಾರ್ ಅಂಬರೀಶ್ ಅವರನ್ನು ಎಂಪಿ ಪ್ರಕಾಶ್ ಅವರು ಮಗಳ ಮದುವೆಗೆ ಆಹ್ವಾನಿಸಿದ್ರು. ಆ ವೇಳೆ ಅಂಬಿ ಮದುವೆಗೆ ಬಂದ್ರೂ ಸಹ ಉಟ ಮಾಡಿ ಹೋಗಿರುವುದಿಲ್ಲ.

[widget id=”custom_html-3″]

Advertisements

ಇದನ್ನು ಗಮನಿಸಿದ ಎಂಪಿ ಪ್ರಕಾಶ್ ಅವರು ಪ್ರತ್ಯೇಕವಾಗಿ ಅಂಬರೀಶ್ ಅವರಿಗೆ ಭೋಜನ ಕೂಟವನ್ನು ಎರ್ಪಡಿಸ್ತಾರೆ. ತಮ್ಮ ಮನೆಗೆ ಬಂದ ಅಂಬಿಯನ್ನು ಸತ್ಕರಿಸಿ ಬೆಂಗಳೂರಿನಲ್ಲಿ ಎಲ್ಲಿ ಉಳಿದುಕೊಂಡಿದ್ದೀರಾ ಅಂತ ಕುಶಲೋಪರಿಯನ್ನು ವಿಚಾರಿಸ್ತಾರೆ. ಆಗ ಅಂಬರೀಶ್ ಅವರು ನಾನು ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದೇನೆ, ನನಗೆ ಮನೆಯಿಲ್ಲ ಅಂತ ಕೇಳ್ತಾರೆ, ಇದನ್ನು ಕೇಳಿದ ಸಂಸದರಿಗೆ ಶಾ’ಕ್ ಆಗಿ ತಕ್ಷಣ ಬಿಡಿಎ ಅಧಿಕಾರಿಗಳಿಗೆ ಫೋನ್ ಮಾಡಿ ಸೈಟ್ ಅಲೋಟ್ ಮಾಡ್ಲಿಕ್ಕೆ ಹೇಳ್ತಾರೆ. ಅದು ಅಂಬಿ ಸಿನಿಮಾದ ಸಲುವಾಗಿ ಮೈಸೂರಿನಲ್ಲಿ ಶೂಟಿಂಗ್ ನಡೆಸ್ತಿದ್ರು, ಆ ವೇಳೆ ಅಂಬರೀಶ್ ಅವರ ಬಳಿ ಬಂದ ಅಧಿಕಾರಿಗಳು ಸೈಟ್ ನೋಡಲು ಬರಲಿಕ್ಕೆ ಹೇಳಿ ಕರೆದುಕೊಂಡು ಹೋಗ್ತಾರೆ, ಆಗ ಅಧಿಕಾರಿಗಳು ಜೆಪಿನಗರದಲ್ಲಿ ಒಂದು ಖಾಲಿ ಸೈಟ್‌ನ್ನು ತೋರಿಸ್ತಾರೆ..

[widget id=”custom_html-3″]

ಇದನ್ನು ಕಂಡು ಅಂಬರೀಶ್ ಅವರಿಗೆ ಇಷ್ಟವಾಗುವುದಿಲ್ಲ, ಇದೊಳ್ಳೆ ಕಾಡಿದ್ದ ಹಾಗೇ ಯಿದೆ, ಈ ಸೈಟ್ ಬೇಡ ಅಂತ ಹೇಳ್ತಾರಂತೆ, ಆಗ ಪ್ರಕಾಶ್ ಅವರು ಅಂಬರೀಶ್ ಅವರಿಗೆ ಇದು ಒಂದು ಸುಂದರವಾದ ಜಾಗ ಭವಿಷ್ಯದಲ್ಲಿ ಎಲ್ಲ ರೀತಿಯಲ್ಲಿ ಡೆವಲಪ್‌ಮೆಂಟಲ್ ಜಾಗ ಆಗೋದ್ರಲ್ಲಿ ಅನುಮಾನವಿಲ್ಲ, ಇಲ್ಲೇ ಮನೆಕಟ್ಟಿ ಅಂತ ಸಲಹೆ ಕೊಡುತ್ತಾರೆ, ಸಂಸದರ ಸಲಹೆಯನ್ನು ಸ್ವೀಕರಿಸಿದ ಅಂಬಿ ಆ ಜಾಗವನ್ನು ಖರೀದಿಸಿ ಅಲ್ಲೊಂದು ಭವ್ಯ ಮನೆ ಕಟ್ಟುತ್ತಾರೆ. ಈ ಜಾಗವೂ ಸಹ ಈಗ ಚಿನ್ನದಷ್ಟು ಬೆಲೆಬಾಳುವಂತಹ ಅತ್ಯಂತ ಅಮೂಲ್ಯವಾದ ಜಾಗವಾಗಿ ಹೋಗಿದೆ. ಇದು 23 ವರ್ಷಗಳ ಹೋಟೆಲ್‌ನಲ್ಲಿ ಕಾಲ ಕಳೀತಿದ್ದ ಅಂಬಿ ಭವ್ಯ ಮನೆ ಕಟ್ಟಲು ಕಾರಣವಾದ ಕತೆ.