Advertisements

ಹೊಸ ಆದೇಶ ಹೊರಡಿಸಿ ಚೀನಾಗೆ ಶಾಕ್ ಕೊಟ್ಟ ಜಗತ್ತಿನ ದೊಡ್ಡಣ್ಣ !

Uncategorized

ಚೀನಾದಲ್ಲಿ ಹುಟ್ಟಿದ ಕರೋನಾ ಇಡೀ ಜಗತ್ತನ್ನ ಆವರಿಸಿ ಲಕ್ಷಾಂತರ ಸಂಖ್ಯೆಯಲ್ಲಿ ಸಾವು-ನೋವುಗಳು ಸಂಭವಿಸಿವೆ. ಇದೇ ಕಾರಣದಿಂದಲೇ ಚೀನಾ ಮೇಲೆ ಭಾರತ ಅಮೆರಿಕ ಸೇರಿದಂತೆ ಜಗತ್ತಿನ ಅನೇಕ ದೇಶಗಳು ಕೆಂಗಣ್ಣು ಬೀರುತ್ತಿವೆ. ಈಗಾಗಲೇ ಚೀನಾದಲ್ಲಿ ಇದ್ದ ಬೇರೆ ಬೇರೆ ದೇಶದ ಕಂಪನಿಗಳು ಅಲ್ಲಿಂದ ಕಾಲ್ಕಿತ್ತಿವೆ. ಇದರ ನಡುವೆಯೇ ಚೀನಾ ಮತ್ತು ಅಮೆರಿಕದ ನಡುವೆ ಶೀತಲ ಸಮರ ಜೋರಾಗಿದೆ.

Advertisements

ಇನ್ನು ಮೊದಲಿನಿಂದಲೂ ಚೀನಾ ಭಾರತಕ್ಕೆ ಹೇಗೆ ಶತ್ರು ರಾಷ್ಟ್ರವೋ, ಹಾಗೆಯೇ ಅಮೇರಿಕಾಕ್ಕೇ ಚೀನಾ ಕಂಡರೆ ಆಗೋದಿಲ್ಲ. ಇನ್ನು ಜಗತ್ತಿಗೆ ಚೀನಾದಿಂದ ಕೊರೋನಾ ವೈರಾಣು ಹರಡಿದ ಮೇಲೆಂತೂ ಅಮೆರಿಕಾ ಚೀನಾ ದೇಶದ ಮೇಲೆ ಉರಿದುಬೀಳುತ್ತಿದೆ. ಇದರ ನಡುವೆಯೇ ಚೀನಾ ದೇಶದ ಎಲ್ಲ ವಿಮಾನಗಳನ್ನು ಇದೇ ತಿಂಗಳು ಜೂನ್ 16ರಿಂದ ರದ್ದುಪಡಿಸುವುದಾಗಿ ಅಮೆರಿಕಾ ನಿರ್ಧಾರ ಮಾಡಿದೆ ಎಂದು ಹೇಳಲಾಗಿದೆ. ಇನ್ನೂ ಜಗತ್ತಿನ ದೊಡ್ಡಣ್ಣ ಅಮೆರಿಕಾ ಚೀನಾ ದೇಶದ ಮೇಲೆ ಮುನಿಸಿಕೊಂಡಿರುವ ಕಾರಣ ಎರಡು ದೇಶಗಳ ನಡುವಿನ ವ್ಯಾಪಾರ ಸೇರಿದಂತೆ ಸಾರಿಗೆ ಕ್ಷೇತ್ರದಲ್ಲಿ ಬಿಕ್ಕಟ್ಟು ಸಂಭವಿಸಲಿದೆ ಎಂದು ಹೇಳಲಾಗಿದೆ

ಇದೆ ವಾರದಿಂದಲೇ ಅಮೆರಿಕಾ ಚೀನಾದಿಂದ ತನ್ನ ದೇಶಕ್ಕೆ ವಿಮಾನಯಾನ ಆರಂಭಿಸಲು ಮುಂದಾಗಿತ್ತು. ಆದರೆ ಚೀನಾ ಇದಕ್ಕೆ ಅನುಮತಿ ಕೊಟ್ಟಿರಲಿಲ್ಲ. ಇನ್ನು ಅಮೆರಿಕಾ ವಿಮಾನಯಾನಕ್ಕೆ ಚೀನಾ ಅನುಮತಿ ನಿರಾಕರಿಸಿದ ಬೆನ್ನಲ್ಲೇ , ಅಮೆರಿಕಾ ಜೂನ್ ೧೬ರಿಂದ ಚೀನಾದ ನಾಲ್ಕು ವಿಮಾನಯಾನ ಕಂಪನಿಗಳ ಪೂರ್ಣ ಸಂಚಾರವನ್ನ (ಆಗಮನ ಮತ್ತು ನಿರ್ಗಮನ) ರದ್ದುಗೊಳಿಸಿದೆ ಎಂದು ಹೇಳಲಾಗಿದೆ. ಇನ್ನು ಕರೋನಾ ಹಬ್ಬುವ ಕಾರಣದಿಂದ ವರ್ಷದ ಆರಂಭದಲ್ಲೇ ಅಮೆರಿಕಾ ಸರ್ಕಾರವು ಚೀನಾ ದೇಶಕ್ಕೆ ತನ್ನ ವಿಮಾನ ಸಾರಿಗೆಯನ್ನ ನಿಲ್ಲಿಸಿತ್ತು. ಭಾರತದ ಗಡಿಯಲ್ಲಿ ಸದಾ ಕಿರಿಕಿರಿ ಮಾಡುವ ಚೀನಾ ದೇಶಕ್ಕೆ ಅಮೆರಿಕಾ ಸರಿಯಾದ ಕೆಲಸವೇ ಮಾಡಿದೆ. ತನ್ನನ್ನೇನು ಮಾಡುವುದಕ್ಕೆ ಆಗುವುದಿಲ್ಲ ಎಂದು ಮೆರೆಯುತ್ತಿರುವ ಚೀನಾಕ್ಕೆ ಅಮೆರಿಕಾ ತಕ್ಕ ಪಾಠವನ್ನೇ ಕಲಿಸುತ್ತಿದೆ.