Advertisements

ಭಾರತ ಚೀನಾ ಆ್ಯಪ್​ಗಳ ಬ್ಯಾನ್ ಮಾಡಿದ ಬೆನ್ನಲ್ಲೇ, ಅಮೇರಿಕ ತೆಗೆದುಕೊಂಡ ನಿರ್ಧಾರ ಏನು ಗೊತ್ತಾ?

News

ಭಾರತದಲ್ಲಿ ಚೀನಾ ಆ್ಯಪ್ ಗಳನ್ನು ಬ್ಯಾನ್ ಮಾಡಿದ ನಂತರ ಈಗ ಅಮೇರಿಕಾದಲ್ಲಿಯೂ ಸಹ ಚೀನಾ ಆ್ಯಪ್ ಗಳನ್ನು ನಿಷೇದ ಮಾಡಲು ಚಿಂತನೆ ಮಾಡಿದೆ.

Advertisements

ಹೌದು ಸ್ನೇಹಿತರೆ ಭಾರತ ನಂತರ ಇದೀಗ ಅಮೇರಿಕವು ಟಿಕ್ ಟಾಕ್ ಸೇರಿದಂತೆ ಚೀನಾದ ಇನ್ನೂ ಹಲವು ಆ್ಯಪ್ ಗಳನ್ನು ಬ್ಯಾನ್ ಮಾಡುವ ಪ್ರಾಸ್ತಾವಣೆ ನಮ್ಮ ಮುಂದೆ ಇದೆ ಎಂದು ಹೇಳಿಕೆಯನ್ನ ನೀಡಿದ್ದಾರೆ. ಅಮೇರಿಕಾದ ಸಚಿವ ಮೈಕ್ ಪಂಪಿಯ ಅವರು ಚೀನಾ ಆ್ಯಪ್ ಗಳನ್ನು ಬ್ಯಾನ್ ಮಾಡುವ ಸುಳಿವನ್ನು ನೀಡಿದ್ದಾರೆ. ಈಗ ಅಮೇರಿಕಾದ ಸಚಿವ ಹೇಳಿಕೆ ನೀಡಿರುವ ಪ್ರಕಾರ ಚೀನಾವನ್ನು ಸಂಕಷ್ಟಕ್ಕೆ ತಲುಪಿಸುವ ಲಕ್ಷಣಗಳು ಕಾಣುತ್ತಿವೆ.

ಈ ಹಿಂದೆ ಭಾರತದಲ್ಲಿ ಸಹ ಚೀನಾ ಹ್ಯಾಪ್ ಹಾಗೂ ಚೀನಾ ವಸ್ತುಗಳನ್ನು ಬಳಕೆ ಮಾಡಬೇಡಿ ಎಂದು ಜನರು ಸಾಮಾಜಿಕ ಜಾಲಾತಾಣಗಳಲ್ಲಿ ಫೊಸ್ಟ್ ಗಳ ಹಾಗೂ ಕಾಮೆಂಟ್ ಗಳ ಮುಖಾಂತರ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದರು ಅದೇ ರೀತಿ ಭಾರತ ಕೈಗೊಂಡ ಈ ನಿರ್ದಾರ ಜನರಿಗೆ ಸಂತಸವನ್ನು ಉಂಟುಮಾಡಿದೆ.

ಭಾರತ ಟಿಕ್ ಟಾಕ್, ಹಲೋ, ಶೇರ್ ಇಟ್, ಬ್ಯೂಟಿ ಪ್ಲಸ್ ಸೇರಿದಂತೆ ಒಟ್ಟಾಗಿ 59 ಆ್ಯಪ್ ಗಳನ್ನು ಬ್ಯಾನ್ ಮಾಡಿದೆ‌. ಹಾಗೆ ದೇಶದ ಉದ್ದಿಮೆದಾರರು ಸಹ ಚೀನಾದ ಜೊತೆಗೆ ತಮ್ಮ ವ್ಯವಹಾರಗಳ ಒಪ್ಪಂದಗಳನ್ನು ಮುರಿದುಕೊಂಡು ಭಾರತಕ್ಕೆ ಕೈ ಜೋಡಿಸಿದ್ದಾರೆ. ಚೀನಾ ಆ್ಯಪ್ ಗಳ ನಿಷೇಧದ ನಂತರ ಸ್ವದೇಶದ ಆ್ಯಪ್ ಗಳ ಬಳಕೆ ಹೆಚ್ಚಾಗಿದೆ. ಮಿತ್ರೋಂ, ಚಿಂಗಾರಿ, ರೊಪೊಸೊ ಸೇರಿದಂತೆ ಇನ್ನೂ ಹಲವು ಆ್ಯಪ್ ಗಳ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ.