Advertisements

ದೇಶಿಯ ವಸ್ತುಗಳು ಮಾತ್ರ ಮಾರಾಟ, ಅಮಿತ್ ಶಾ ಆದೇಶ.

Uncategorized

ಕೊರೊನಾ ರೋಗ ಇಡೀ ವಿಶ್ವವೇ ಬೆರಗಾಗುವಂತೆ ಮಾಡಿದೆ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಕೆಲವು ರಾಷ್ಟ್ರಗಳಲ್ಲಿ ಕೊರೊನಾ ಹಿಡಿತಕ್ಕೆ ಸಿಗುತ್ತಿಲ್ಲ ಭಾರತದಲ್ಲಿ ಸೋಂಕಿತರ ಸಂಖ್ಯೆ 74,000 ಕ್ಕೆ ಹೋಗಿದ್ದೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕೊರೊನಾ ನಿಯಂತ್ರಣಕ್ಕೆ ಹಲವು ಸೂತ್ರ ಬಳಸುತ್ತಲೆ ಬಂದಿವೆ.

ಇಡೀ ವಿಶ್ವದ ಕೊರೊನಾ ಸೋಂಕಿತರ ಲೆಕ್ಕಾಚಾರದಲ್ಲಿ ಒಂದು ರೀತಿ ಭಾರತದಲ್ಲಿ ನಿಯಂತ್ರಣದಲ್ಲಿದೆ ದೇಶದ ಆರ್ಥಿಕ ಚಟುವಟಿಕೆಯಲ್ಲಿ ಸ್ವಲ್ಪ ಸಡಿಲಿಕೆ ಯಾಗಿದೆ ಕೆಲವು ಆರ್ಥಿಕ ಚಟುವಟಿಕೆಗಳು ನಡೆಯುತ್ತಿವೆ ನಿನ್ನೆ ನರೇಂದ್ರ ಮೋದಿ ಸರ್ಕಾರ 20ಲಕ್ಷ ಕೋಟಿ ದೊಡ್ಡ ಪ್ಯಾಕೇಜ್ ಅನ್ನು ಬಿಡುಗಡೆ ಮಾಡಿದೆ.

ಈ ಪ್ಯಾಕೇಜ್ ಜೊತೆ ದೇಶ ಸ್ವಾವಲಂಬಿಯಾಗಬೇಕು ಎಂಬ ಕರೆಯನ್ನು ಪ್ರಧಾನಮಂತ್ರಿ ಇಡೀ ದೇಶಕ್ಕೆ ಕೊಟ್ಟಿದ್ದಾರೆ ಇದರ ಅರ್ಥ ವಿದೇಶಿ ವಸ್ತುಗಳನ್ನು ತೊರೆದು ಸ್ವದೇಶಿ ವಸ್ತುಗಳನ್ನು ಬಳಕೆ ಮಾಡುವ ಮೂಲಕ ಭಾರತ ಸ್ವಾವಲಂಬಿಯಾಗಿದೆ ಎಂಬ ಸಂದೇಶವನ್ನು ಇಡೀ ವಿಶ್ವಕ್ಕೆ ಸಾರಲು ಹೊರಟಿದ್ದಾರೆ ಅದಕ್ಕೆ ಇಂದು ಗೃಹ ಮಂತ್ರಿ ಅಮಿತ್ ಶಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.

ದೇಶ ಸ್ವಾವಲಂಬಿಯಾಗಲು ಪ್ರಧಾನಿ ನರೇಂದ್ರಮೋದಿ ಕರೆ ನೀಡಿದ್ದಾರೆ. ದೇಶಿಯ ಉತ್ಪನ್ನ ಬಳಕೆ ಮಾಡಲು ಕರೆ ಕೊಟ್ಟಿದ್ದಾರೆ. ಮುಂಬರುವ ಸವಾಲುಗಳನ್ನು ಎದುರಿಸಲು ದೇಶಸನ್ನಧ್ಧವಾಗಬೇಕಿದ್ದು ಇಂದಿನಿಂದಲೇ ಅಭ್ಯಾಸ ಆಗಬೇಕಿದೆ.‌‌

ಪ್ರಧಾನಿ ದೇಶವನ್ನು ಸ್ವಾವಲಂಭಿಯನ್ನಾಗಿ ಮಾಡಲು ಮತ್ತು ಸ್ಥಳೀಯ ಉತ್ಪನ್ನಗಳನ್ನು (ಭಾರತದಲ್ಲಿ ತಯಾರಿಸಿದ ಉತ್ಪನ್ನಗಳು) ಬಳಸುವಂತೆ ಮನವಿ ಮಾಡಿದ್ದಾರೆ. ಇದು ಮುಂಬರುವ ದಿನಗಳಲ್ಲಿ ಭಾರತ ಜಗತ್ತಿನ ನೇತೃತ್ವ ವಹಿಸಲು ಖಂಡಿತವಾಗಿಯೂ ದಾರಿ ಮಾಡಿಕೊಡಲಿದೆ” ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಅಮಿತ್ ಶಾ, ” ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ದೇಶಾದ್ಯಂತ ಇರುವ ಸುಮಾರು 10 ಲಕ್ಷ CAPF ಸಿಬ್ಬಂದಿಗಳ 50 ಲಕ್ಷ ಕುಟುಂಬಸ್ಥರು ಕೇವಲ ಸ್ವದೇಶಿಯನ್ನೇ ಬಳಸಲಿದ್ದಾರೆ.

ಎಲ್ಲ ಭಾರತೀಯರು ಸ್ವದೇಶಿ ಉತ್ಪನ್ನ ಬಳಕೆಯ ನಿರ್ಧಾರ ಕೈಗೊಂಡರೆ ಮುಂದಿನ 5 ವರ್ಷಗಳಲ್ಲಿ ದೇಶ ಸುಭಿಕ್ಷವಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಎಲ್ಲರೂ ಸ್ವದೇಶಿ ವಸ್ತುಗಳನ್ನು ಉಪಯೋಗಿಸುವುದರ ಮೂಲಕ ನರೇಂದ್ರ ಮೋದಿಯವರ ಕನಸಿನ ಜೊತೆ ಕೈಜೋಡಿಸಬೇಕೆಂದು ಎಲ್ಲರ ಆಶಯ.