Advertisements

ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ ಅಮೂಲ್ಯ ಜಗದೀಶ್ ದಂಪತಿ..ಎಷ್ಟು ಹಣ ಕೊಟ್ಟಿದ್ದಾರೆ ಗೊತ್ತಾ ?

Cinema

ನಮಸ್ತೇ ಸ್ನೇಹಿತರೇ, ಕೋಟ್ಯಾಂತರ ಹಿಂದೂಗಳ ಹಲವಾರು ವರ್ಷಗಳ ಕನಸಾಗಿದ್ದ ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀ ರಾಮಚಂದ್ರನ ಭವ್ಯ ಮಂದಿರ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿದೆ. ಇನ್ನು ಇದಕ್ಕಾಗಿ ದೇಶದಾದ್ಯಂತ ಭಕ್ತರಿಂದ ದೇಣಿಗೆ ಸಂಗ್ರಹ ಮಾಡಲಾಗುತ್ತಿದ್ದು, ರಾಮ ಭಕ್ತರು, ರಾಜಕಾರಣಿಗಳು, ಉದ್ಯಮಿಗಳು ಹಾಗೂ ನಟ ನಟಿಯರು ಸೇರಿದಂತೆ ಸಾಮಾನ್ಯ ಜನರು ಕೂಡ ನಮ್ಮ ಸೇವೆ ಕೂಡ ಶ್ರೀರಾಮನಿಗೆ ತಲುಪಲೆಂದು ತಮ್ಮ ಕೈಲಾದಷ್ಟು ಹಣವನ್ನ ದೇಣಿಗೆಯಾಗಿ ನೀಡುತ್ತಿದ್ದಾರೆ. ಇನ್ನು ದೇಶದ ಮೊದಲ ಪ್ರಜೆಯಾಗಿರುವ ರಾಷ್ಟ್ರಪತಿ ರಮಾನಾಥ ಕೋವಿಂದ್ ಅವರೂ ಕೂಡ ಈಗಾಗಲೇ ರಾಮಮಂದಿರಕ್ಕೆ 5 ಲಕ್ಷದ ನೂರು ರೂಪಾಯಿಗಳನ್ನ ದೇಣಿಗೆಯಾಗಿ ನೀಡಿದ್ದಾರೆ. ಇತ್ತೀಚೆಗಷ್ಟೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಸಹ ದೇಣಿಗೆ ನೀಡುವಂತೆ ಕರೆ ಕೊಟ್ಟಿದ್ದರು.

Advertisements

ಇನ್ನು ಎರಡು ದಿನಗಳ ಹಿಂದಷ್ಟೇ ನಟಿ ಅಮೂಲ್ಯ ಜಗದೀಶ್ ದಂಪತಿ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆಯನ್ನ ನೀಡಿದ್ದು ಇದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈಗಾಗಲೇ ಅನೇಕ ಸಾಮಾಜಿಕ ಕಾರ್ಯಗಳಿಗೆ ಸಹಾಯದ ಹಸ್ತ ಚಾಚಿರುವ ಅಮೂಲ್ಯ ಜಗದೀಶ್ ಅವರು ಈಗಾಗಲೇ ಇಡೀ ದೇಶದಾದ್ಯಂತ ನಡೆಯುತ್ತಿರುವ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುತ್ತಿದ್ದು, ಈ ದಂಪತಿ ಕೂಡ ಶ್ರೀರಾಮ ಮಂದಿರಕ್ಕೆ ದೇಣಿಗೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಇನ್ನು ನಟಿ ಅಮೂಲ್ಯ ಪತಿ ಜಗದೀಶ್ ಅವರು ದೇಣಿಗೆಯಾಗಿ 1.5 ಲಕ್ಷ ನೀಡಿದ್ದು, ನಾವು ಪ್ರತಿವರ್ಷ ನಮ್ಮ ಹುಟ್ಟು ಹಬ್ಬದ ಆಚರಣೆಗೆ ಬಳಸುತ್ತಿದ್ದ ಹಣಕ್ಕೆ ಮತ್ತಷ್ಟನ್ನ ಸೇರಿಸಿ ಪ್ರಭು ಶ್ರೀರಾಮನ ಮಂದಿರದ ನಿರ್ಮಾಣಕ್ಕೆ ಅರ್ಪಣೆ ಮಾಡುತ್ತಿದ್ದೇವೆ..ಇದು ನಮಗೆ ಸಾರ್ಥಕದ ಕ್ಷಣವೆಂದೆನಿಸಿದೆ. ಜೈ ಶ್ರೀರಾಮ್ ಎಂದು ಹೇಳಿ ಪೋಸ್ಟ್ ಮಾಡಿದ್ದಾರೆ.

ಇನ್ನು ಇಷ್ಟೇ ಅಲ್ಲದೆ ಜಗದೀಶ್ ಅವರ ತಂದೆ ರಾಮಚಂದ್ರ ಅವರೂ ಕೂಡ ತಮ್ಮ ಹೆಸರಿನಲ್ಲಿ ಒಂದು ಲಕ್ಷ ದೇಣಿಗೆ ಹಣ ನೀಡಿದ್ದು ಇದರ ರಶೀದಿಗಳನ್ನ ಅಮೂಲ್ಯ, ಇದು ಪ್ರಭು ರಾಮನ ಮಂದಿರಕ್ಕೆ ನೀಡುತ್ತಿರುವ ಕಿರು ಕಾಣಿಕೆ ಎಂದು ಬರೆದು ತಮ್ಮ ಸೋಷಿಯಲ್ ಮಿಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಇವರ ಜೊತೆಗೆ ಜಗ್ಗೇಶ್ ಸೇರಿದಂತೆ ಅನೇಕ ನಟ ನಟಿಯರು ತಮ್ಮ ಕೈಲಾದಷ್ಟು ಹಣ ನೀಡುತ್ತಿದ್ದಾರೆ. ಇನ್ನು ತೆಲುಗಿನ ಸ್ಟಾರ್ ನಟ ಹಾಗೂ ಜನಸೇನಾ ಪಕ್ಷದ ಸ್ಥಾಪಕರು ಆಗಿರುವ ಪವನ್ ಕಲ್ಯಾಣ್ ಅವರು ರಾಮ ಮಂದಿರದ ನಿರ್ಮಾಣಕ್ಕೆ ಬರೋಬ್ಬರಿ 30 ಲಕ್ಷ ದೇಣಿಗೆಯನ್ನ ತಿರುಪತಿಗೆ ಭೇಟಿ ಕೊಟ್ಟ ಸಮಯದಲ್ಲಿ ಸಂಬಂಧಪಟ್ಟವರಿಗೆ ನೀಡಿದ್ದಾರೆ.