Advertisements

ಒಂದು ವಾಟ್ಸಪ್ ಗ್ರೂಪ್ ನಿಂದ ವ್ಯಕ್ತಿಯ ತಾಯಿಯನ್ನು ಕಾಪಾಡಿದ ವಯಸ್ಸಾದ ದಂಪತಿಗಳು.. ವಾಟ್ಸಪ್ ಗ್ರೂಪ್ ಇಟ್ಟುಕೊಂಡು ಈ ದಂಪತಿಗಳು ಮಾಡುತ್ತಿರುವ ಕೆಲಸ ನೋಡಿ.

Inspire Kannada Mahiti

ಕೋಟ್ಯಧಿಪತಿಯ ಮಗನೊಬ್ಬನು ಆಸ್ಪತ್ರೆಗೆ ಓಡಿಬಂದು ಅಲ್ಲಿದ್ದ ವೈದ್ಯರ ಬಳಿ ಕೇಳುತ್ತಾನೆ..ಏನಾಯ್ತು ನನ್ನ ತಾಯಿಗೆ..ಈಗ ಅವರು ಹೇಗಿದ್ದಾರೆ ಡಾಕ್ಟರ್ ಎಂದು. ನನಗೆ ತುಂಬಾ ಭಯದ ಜೊತೆಗೆ ದುಃಖ ಕೂಡ ಆಗುತ್ತಿದೆ. ನಮ್ಮ ತಾಯಿಗೆ ಏನು ತೊಂದರೆ ಇಲ್ಲ ಆಲ್ವಾ..ಈಗ ಅವರು ಪರವಾಗಿಲ್ಲ ಆಲ್ವಾ ಎಂದು ಡಾಕ್ಟರ್ ಬಳಿ ಕೇಳುತ್ತಾನೆ..ಆಗ ವೈದ್ಯರು ಹೇಳುತ್ತಾರೆ..ನೀವು ಚಿಂತೆ ಮಾಡುವ ಅಗತ್ಯವಿಲ್ಲ. ನಿಮ್ಮ ತಾಯಿಯವರಿಗೆ ಸಣ್ಣದಾದ ಪಾ’ರ್ಶ್ವವಾಯು ಹೊಡೆದಿತ್ತು ಅಷ್ಟೇ..ಗಾಬರಿ ಪಡುವ ಅಗತ್ಯವಿಲ್ಲ. ಸರಿಯಾದ ಟೈಮ್ ಗೆ ಆಸ್ಪತ್ರೆಗೆ ಬಂದ ಕಾರಣ ಅವರಿಗೆ ಚಿಕಿತ್ಸೆ ನೀಡಲಾಗಿದ್ದು ಈಗ ಚೇತರಿಕೆ ಕಾಣುತ್ತಿದ್ದಾರೆ. ಸ್ವಲ್ಪ ಸಮಯ ಮೀರಿದ್ದರೂ ನಿಮ್ಮ ತಾಯಿಯನ್ನ ಉಳಿಸಿಕೊಳ್ಳುವುದು ಕಷ್ಟವಾಗುತಿತ್ತು..

Advertisements

ನೋಡಿ ಅಲ್ಲಿ ಹೊರಗಿನ ಹಾಲ್ ನ ಸೋಫಾದಲ್ಲಿ ಕುಳಿರಿತುವ ವಯಸ್ಸಾದ ದಂಪತಿಗಳು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಸಿದ ಕಾರಣ ನಿಮ್ಮ ತಾಯಿಯ ಜೀ’ವ ಉಳಿದಿದೆ ಎಂದು ಡಾಕ್ಟರ್ ಹೇಳುತ್ತಾರೆ. ಆಗ ಮಗ ಕೂಡಲೇ ಆ ವೃದ್ಧ ದಂಪತಿಗಳು ಕುಳಿತಿದ್ದಲ್ಲಿಗೆ, ಹೋಗಿ ಧನ್ಯವಾದಗಳು, ನಮಸ್ಕಾರ ನೀವು ನನ್ನ ತಾಯಿಯನ್ನ ಉಳಿಸಿದ್ದೀರಾ..ಆದರೆ ನೀವು ಯಾರಂತ ತಿಳಿಯಲಿಲ್ಲ ಎಂದು ಮಗ ಹೇಳುತ್ತಾನೆ. ಇನ್ನು ಆ ವಯಸ್ಸಾದ ದಂಪತಿ ಕೂಡ ನೀವು ಕೂಡ ಯಾರಂತ ತಿಳಿಯಲಿಲ್ಲ ಎಂದು ಹೇಳುತ್ತಾರೆ. ಆಗ ಅಚ್ಚರಿಗೊಂಡ ಮಗ ನನ್ನ ತಾಯಿ ನಿಮಗೇಗೆ ಪರಿಚಯ ಎಂದು ಕೇಳುತ್ತಾನೆ. ಇನ್ನು ಇದಕ್ಕೆ ಉತ್ತರಿಸಿದ ಅಜ್ಜ, ನಾವು 60+ ಎಂಬ ವಾಟ್ಸಾಪ್ ಗ್ರೂಪ್ ಒಂದನ್ನ ಮಾಡಿಕೊಂಡಿದ್ದೇವೆ. ೬೦ ವರ್ಷ ದಾಟಿದವರು ಈ ಗ್ರೂಪಿನ ಸದಸ್ಯರು.

ನಿಮ್ಮ ತಾಯಿ ಕೂಡ ಈ ಗ್ರೂಪಿನ ಸದಸ್ಯರೆ. ಇನ್ನು ನಮ್ಮ ಗ್ರೂಪಿನಲ್ಲಿರುವ ಸದಸ್ಯರು ೬೦ ವರ್ಷ ದಾಟಿದ ಅಕ್ಕ ಪಕ್ಕದ ಮನೆಯವರು, ಸ್ನೇಹಿತರು, ಸಂಬಂಧಿಕರನ್ನ 60+ ಎಂಬ ವಾಟ್ಸಾಪ್ ಗ್ರೂಪ್ ಗೆ ಸೇರಿಸುವುದು ಈ ಗ್ರೂಪ್ ನಲ್ಲಿರುವ ಎಲ್ಲಾ ಸದಸ್ಯರ ಕರ್ತವ್ಯ. ಇನ್ನು ಈ ಗ್ರೂಪ್ ನಲ್ಲಿ ಗುಡ್ ಮಾರ್ನಿಂಗ್ ಮತ್ತು ಗುಡ್ ನೈಟ್ ಕಳಿಸುವುದನ್ನ ಬಿಟ್ಟು ಬೇರೆ ಎಲ್ಲಾ ರೀತಿಯ ಸಮಾಚಾರದ ಬಗ್ಗೆ ಚಾಟ್ ಮಾಡಬಹುದಾಗಿದೆ. ಇನ್ನು ಗ್ರೂಪ್ ನ ಯಾವುದೇ ಸದಸ್ಯರಿಂದ ಒಂದು ವೇಳೆ ಚಾಟಿಂಗ್ ಸಮಾಚಾರಗಳು ಬರದಿದ್ದಲ್ಲಿ ಅವರ ಮನೆಯ ಅಕ್ಕ ಪಕ್ಕ ಇರುವ ಸದಸ್ಯರು ಅವರ ಮನೆಗೆ ಹೋಗಿ ವಿಚಾರಿಸುವುದು ನಮ್ಮ ಗ್ರೂಪಿನ ನಿಯಮ. ಇನ್ನು ಎರಡು ಮೂರುದಿನಗಳಿಂದ ನಿಮ್ಮ ತಾಯಿಯವರಿಂದ ಗ್ರೂಪ್ ನಲ್ಲಿ ಯಾವುದೇ ಸಂದೇಶ ಬರಲಿಲ್ಲ. ಹಾಗಾಗಿ ನಾವು ನಿಮ್ಮ ಮನೆಗೆ ಹೋಗಿದ್ದು ಈಗ ಆಸ್ಪತ್ರೆಯಲ್ಲಿ ಇದ್ದೇವೆ.

ವಯಸ್ಸಾದ ತಂದೆ ತಾಯಿಗಳಿಗೆ ದುಡ್ಡಿನಿಂದ ಸಿಗುವ ಸೌಲಭ್ಯಗಳನ್ನ ಒದಗಿಸಿಕೊಟ್ಟರೆ ಸಾಲದು. ವಯಸ್ಸಾದ ಬಳಿಕ ಪ್ರತಿಯೊಬ್ಬರಿಗೂ ಅವರ ಬಾಳಸಂಗಾತಿಯಾಗಲಿ ಇಲ್ಲವೇ ಅವರ ಜೊತೆ ಮಾತನಾಡಲು ಕುಟುಂಬದ ಸದಸ್ಯರ ಅವಶ್ಯಕತೆ ಇರುತ್ತದೆ. ನೀನು ಇದಕ್ಕೂ ಮುಂಚೆ ನಿನ್ನ ತಾಯಿಯನ್ನ ಭೇಟಿಯಾಗಿ ಎಷ್ಟು ದಿನ ಆಯ್ತು ಎಂದು ಆ ವೃದ್ಧ ದಂಪತಿಗಳು ಕೇಳಿದಾಗ, ಮಗನ ಕೈಲಿ ಉತ್ತರ ನೀಡಲು ಸಾಧ್ಯವಾಗಲಿಲ್ಲ. ಆಗ ಆ ವೃದ್ಧ ದಂಪತಿಗಳು, ನಿಮ್ಮಂತಹ ಮಕ್ಕಳು ಹೀಗೆ ಮಾಡುತ್ತಾರೆ ಎಂಬ ಕಾರಣದಿಂದಲೇ ನಾವು 60+ ವಾಟ್ಸಾಪ್ ಗ್ರೂಪ್ ನ್ನ ಮಾಡಿಕೊಂಡಿದ್ದೇವೆ. ೬೦ ದಾಟಿದ ಮೇಲೆ ಒಂಟಿಯಾಗುವ ನಾವು ಟಿವಿ, ಗೋಡೆಗಳ ಬಳಿ ಮಾತನಾಡಲು ಸಾಧ್ಯವೇ..ಎಂದ ಆ ವಯಸ್ಸಾದ ದಂಪತಿಗಳು ತಮ್ಮ ಮನೆಯ ಕಡೆ ಹೊರಟು ಹೋಗುತ್ತಾರೆ.

ಸ್ನೇಹಿತರೇ, ಬಾಲ್ಯದ ನಮ್ಮ ವಯಸ್ಸು ಯೌವನದ ಕಡೆ ಸಾಗುತ್ತಿದ್ದರೆ, ನಮ್ಮ ತಂದೆ ತಾಯಿಗಳ ವಯಸ್ಸು ವೃದ್ಯಾಪ್ಯದ ಕಡೆ ಓಡುತ್ತಿರುತ್ತದೆ. ನಮ್ಮಲ್ಲಿ ಎಷ್ಟೇ ಕೋಟಿ ಹಣ ಇರಲಿ, ವಯಸ್ಸಾದ ತಂದೆ ತಾಯಿಗಳನ್ನ ಒಂಟಿಯಾಗಿ ಬಿಟ್ಟು ಲಕ್ಷಾಂತರ ಹಣ ಖರ್ಚು ಮಾಡಿದ್ರು ಅದು ಲೆಕ್ಕಕ್ಕೆ ಬರೋದಿಲ್ಲ. ಇಂದು ನಾವು ನಮ್ಮ ತಂದೆತಾಯಿಗಳನ್ನ ಒಂಟಿಯನ್ನಾಗಿ ಮಾಡಿದ್ರೆ ನಾಳೆ ನಮಗೆ ವಯಸ್ಸಾದ ಮೇಲೆ ನಾವು ಮಾಡಿದ ಕರ್ಮವೇ ನಮಗೆ ತಿರುಗು ಬಾಣವಾಗಿ ಹೊಡೆಯುತ್ತದೆ ಎಂಬುದನ್ನ ನಾವೆಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು..