Advertisements

ಈ ಬಾಲ ನಟ ಯಾರೆಂದು ಗೊತ್ತಾಯ್ತಾ ನಿಮಗೆ ? ಈಗ ಎಲ್ಲಿದ್ದಾನೆ ಏನ್ಮಾಡ್ತಿದ್ದಾನೆ ಗೊತ್ತಾ !

Cinema

ನಮಸ್ಕಾರ ಸ್ನೇಹಿತರೇ, 1990ರ ಘಟ್ಟದಲ್ಲಿ ಬಾಲನಟರಾದವರಿಗೆ ತುಂಬಾ ಪ್ರಾಮುಖ್ಯತೆ ಇತ್ತು. ಎಷ್ಟರಮಟ್ಟಿಗೆ ಎಂದರೆ ಬಾಲನಟ, ನಟಿಯರನ್ನೇ ಚಿತ್ರದ ಪ್ರಧಾನ ಪಾತ್ರವನ್ನಾಗಿ ಮಾಡಿ ಜನರ ಮನಸ್ಸಿಗೆ ತಲುಪುವಂತಹ ಚಿತ್ರಗಳನ್ನ ಮಾಡಿ ನಿರ್ಮಾಪಕರು ಜೋಬು ತುಂಬಿಸಿಕೊಳ್ಳುತ್ತಿದ್ದ ಕಾಲಘಟ್ಟ ಅದು. ಮಕ್ಕಳಿಂದ ಹಿಡಿದು ಮುದುಕರವರೆಗೂ ಎಲ್ಲರೂ ಕುಳಿತು ನೋಡುತ್ತಿದ್ದ ಸಿನಿಮಾಗಳು ಅವು. ಬಾಲನಟನಟಿಯರನ್ನ ಬಳಸಿಕೊಂಡು ತುಂಟಾಟ, ಕಾಮಿಡಿ, ಹೃದಯಸ್ಪರ್ಶಿ ಚಿತ್ರಗಳನ್ನ ಮಾಡುತ್ತಿದ್ದರು. ಇನ್ನು ಅದೇ ಕಾಲಘಟ್ಟದಲ್ಲಿ ಬೇಬಿ ಶ್ಯಾಮಲಿ ಸೇರಿದಂತೆ ಮಾಸ್ಟರ್ ಮಂಜುನಾಥ್, ಮಾಸ್ಟರ್ ಆನಂದ್ ದೊಡ್ಡ ಪರದೆಯ ಮೇಲೆ ಹೀರೋಗಳಿಗೆ ಸರಿಸಾಟಿಯಾಗಿ ಮಿಂಚಿದರು.

Advertisements

ಆದರೆ ಸಂಪೂರ್ಣ ಕಮರ್ಷಿಯಲ್ ಮಯಾವಾದ ಸಿನಿಮಾರಂಗದಲ್ಲಿ ಬಾಲನಟನಟಿಯರ ಚಿತ್ರಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಬಂದವು. ಹೀಗೆ ಮಿಂಚಿದ ಬಾಲನಟರಲ್ಲಿ ಈ ಹುಡುಗ ಕೂಡ ಅಂದಿನ ಕಾಲಕ್ಕೆ ಜನರ ಮನಸನ್ನ ಗೆದ್ದು ತುಂಬಾ ಫೇಮಸ್ ಆಗಿದ್ದ. ಹಾಗಾದ್ರೆ ಯಾರು ಆ ಬಾಲನಟ, ಈಗ ಎಲ್ಲಿದ್ದಾನೆ, ಹೇಗಿದ್ದಾನೆ ನೋಡೋಣ ಬನ್ನಿ..ಹೀಗೆ ಮಿಂಚಿದ ಬಾಲನಟನ ಹೆಸರು ಆನಂದ್ ವರ್ಧನ್ ಎಂದು. ಈ ಹುಡುಗ ಅರ್ಜುನ್ ಸರ್ಜಾ ಸೌಂದರ್ಯ ನಟಿಸಿದ್ದ ಕನ್ನಡದ ಶ್ರೀ ಮಂಜುನಾಥ ಚಿತ್ರದಲ್ಲಿ ಅವರ ಮಗನ ಪಾತ್ರದಲ್ಲಿ ಅಭಿನಯಿಸಿ ತನ್ನ ಮುಗ್ದ ನಟನೆಯ ಮೂಲಕ ಜನರ ಮನಗೆಲ್ಲುವಂತೆ ಮಾಡಿದ್ದನು.

ಕನ್ನಡ ಮಾತ್ರವಲ್ಲದೆ ತೆಲುಗು ಮತ್ತು ಹಿಂದಿಯ ಸೂರ್ಯವಂಶ ಚಿತ್ರದಲ್ಲಿಯೂ ಕೂಡ ನಟಿಸಿದ್ದಾನೆ ಈ ಬಾಲನಟ. ೨೫ ಚಿತ್ರಗಳಲ್ಲಿ ಬಾಲನಟನಾಗಿ ಮಿಂಚಿರುವ ಈ ಹುಡುಗ ತೆಲುಗು ಚಿತ್ರವೊದಕ್ಕೆ ರಾಜ್ಯ ಪ್ರಶಸ್ತಿ ಕೂಡ ಪಡೆದುಕೊಂಡಿದ್ದಾನೆ. ಇದೆಲ್ಲದರ ಬಳಿಕ ತನ್ನ ಓದಿನ ಕಡೆ ಹೆಚ್ಚಿನ ಗಮನ ಕೊಟ್ಟಿದ್ದ ಆನಂದ್ ವರ್ಧನ್ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಈಗ ಹೈದರಾಬಾದ್ ನಲ್ಲಿ ವಾಸವಾಗಿರುವ ಆನಂದ್ ವರ್ಧನ್ ಸಿನಿಮಾಗೆ ಬೇಕಾದ ಡ್ಯಾನ್ಸಿಂಗ್, ಆಕ್ಟಿಂಗ್ ಸೇರಿದಂತೆ ಮಾರ್ಷಲ್ ಆರ್ಟ್ಸ್ ಕಲೆಯನ್ನು ಕಲಿತಿರುವ ಆನಂದ್ ವರ್ಧನ್ ಸಿನಿಮಾಗೆ ಹೀರೊ ಆಗಿ ಎಂಟ್ರಿ ಕೊಡಲು ಮುಂದಾಗಿದ್ದು, ಒಂದು ಉತ್ತಮ ಕತೆಗಾಗಿ ಕಾಯುತ್ತಿದ್ದಾನೆ. ಬಾಲನಟನಾಗಿ ತೆರೆ ಮೇಲೆ ಮಿಂಚಿದ್ದ ಆನಂದ್ ವರ್ಧನ್ ಈಗ ಮತ್ತೆ ಬೆಳ್ಳಿ ತೆರೆ ಮೇಲೆ ನಾಯಕ ನಟನಾಗಿ ಮಿಂಚಲು ಮುಂದಾಗಿದ್ದಾನೆ. ಸ್ನೇಹಿತರೆ ನಿಮ್ಮ ನೆಚ್ಚಿನ ಬಾಲನಟ ಯಾರೆಂದು ನಿಮ್ಮ ಅನಿಸಿಕೆ ತಿಳಿಸಿ..