Advertisements

ಭಾವುಕವಾಗಿ ತನ್ನ ತಂದೆಗೆ ಅಪ್ಪಂದಿರ ದಿನದ ಶುಭಾಶಯ ಕೋರಿದ ಅನಂತ್ ಕುಮಾರ್ ಪುತ್ರಿ..

Uncategorized

ತಾಯಂದಿರ ದಿನಕ್ಕಿರುವಷ್ಟೇ ಮಹತ್ವ ಅಪ್ಪಂದಿರ ದಿನಕ್ಕೂ ಇದೆ. ತಾಯಿಯ ರೀತಿಯಲ್ಲಿಯೇ ತಂದೆ ಕೂಡ ತನ್ನ ಮಕ್ಕಳಿಗಾಗಿ ಜೀವನ ಪರ್ಯಂತ ದುಡಿಯುತ್ತಾರೆ. ತನ್ನ ಸುಖಗಳನ್ನ ಬದಿಗಿಟ್ಟು, ಯಾವಾಗ್ಲೂ ತನ್ನ ಮಕ್ಕಳನ್ನ ಸುಖ, ಸಂತೋಷವಾಗಿರುಸುವುದಕ್ಕೆ ದುಡಿಯುತ್ತಾರೆ, ಅಂತ ಅಪ್ಪಂದಿರ ಸ್ಮರಿಸುವ ವಿಶೇಷ ದಿನವಿದು. ಇನ್ನು ತಮ್ಮ ಅಪ್ಪಂದಿರನ್ನ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವಿಶಿಷ್ಟವಾಗಿ ನೆನಯುತ್ತಾ ಗೌರವಿಸುತ್ತಾರೆ.

Advertisements

ಈಗ ಮಾಜಿ ಕೇಂದ್ರಸಚಿವರಾಗಿದ್ದ ದಿವಂಗತ ಅನಂತ್ ಕುಮಾರ್ ರವರ ವಿಜೇತ ತನ್ನ ತಂದೆಯ ಜೊತೆಗಿರುವ ಅಪರೂಪದ ಫೋಟೋವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ವಿಭಿನ್ನವಾಗಿ ಸ್ಮರಿಸಿದ್ದಾರೆ.ತನ್ನ ತಂದೆ ತಾಯಿ ಜೊತೆಗಿರುವ ಹಳೆಯದಾದ ಫೋಟೋವೊಂದನ್ನ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿಜೇತ ಅಪ್ಪಾ ಇದು ನಿನಗಾಗಿ..ನೀವು ಎಲ್ಲರನ್ನು, ಎಲ್ಲವನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಿದ್ದ ರೀತಿ ಯಲ್ಲೇ ನನ್ನ ನೆನಪಲ್ಲು ನೀವು ಚಿರಸ್ಥಾಯಿಯಾಗಿದ್ದೀರಿ. ನಿಮ್ಮ ಜೊತೆಗಿನ ಎಲ್ಲಾ ಸವಿನೆನಪುಗಳಿಗೆ ನನ್ನ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ.

ಅಪ್ಪಾ..ನಾನು ನಿನ್ನ ನೆನಪಿನಲ್ಲಿ ನಿಮ್ಮಂತಯೇ ಯಾವುದೇ ಸ್ವಾರ್ಥವಿಲ್ಲದೆ, ದೇಶ ಭಕ್ತಳಾಗಿ ಎಲ್ಲರೂ ಮೆಚ್ಚುವನಂತೆ ಇರಲು ಶ್ರಮ ಪಡುತ್ತೇನೆ. ನನಗೆ ಗೊತ್ತಿದೆ..ಇದು ನಿಮಗೆ ಖುಷಿ ಕೊಡುತ್ತೆ ಅಂತ. ಅಪ್ಪಂದಿರ ದಿನದ ಶುಭಾಶಯಗಳು ಎಂದು ತಮ್ಮ ಮನದಾಳದ ಮಾತನ್ನ, ತನ್ನ ಪ್ರೀತಿಯ ತಂದೆ ಅನಂತ್ ಕುಮಾರ್ ಅವರಿಗೆ ಅರ್ಪಿಸುತ್ತಾ ಪುತ್ರಿ ವಿಜೇತಾ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.