Advertisements

ಅನಂತ್ ನಾಗ್ ಗಾಯತ್ರಿ ಲವ್ ಸ್ಟೋರಿ ಶುರುವಾಗಿದ್ದು ಹೇಗೆ ಗೊತ್ತಾ?

Cinema

ನಮಸ್ತೇ ಸ್ನೇಹಿತರೆ, ಆಲದ ಮರದಂತೆ ಆರಂಭಿಸಿ ಹಬ್ಬದೇ ತೆಂಗಿನ ಮರದಂತೆ ಸರಳವಾಗಿ ನೇರವಾಗಿ ತುಂಬಾ ಎತ್ತರಕ್ಕೆ ಕನ್ನಡ ಚಿತ್ರರಂಗದಲ್ಲಿ ಬೆಳೆದ ಅದ್ಬುತ ನಟ ನಮ್ಮ ಶಂಕ್ರಣ್ಣನ ಅಣ್ಣ ಅನಂತ್ ನಾಗರಕಟ್ಟೆ ಎಂಬ ಮೂಲ ಹೆಸರಿನ ಕನ್ನಡ ಚಿತ್ರರಂಗದ ನಟ ಅನಂತ್ ನಾಗ್.‌. ಬಿಸಿಲಾದರೇನು, ಮಳೆಯಾದರೇನು ಎಂದು ಸುಮ್ಮನೆ ತನ್ನ ಪಾಡಿಗೆ ತಾನು ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಾ ಸಾಗಿದರು ಸಾದನೆಯ ದಾರಿ ಸವೆಸಿದರು‌.. ಒಂದು ಕಾಲದಲ್ಲಿ ಅನಂತ್ ನಾಗ್ ಕನ್ನಡ ಚಿತ್ರರಂಗದ ಯಂಗ್ ಅಂಡ್ ಎನರ್ಜಿಟಿಕ್ ಚಾಕ್ಲೇಟ್ ಹೀರೋ ಆಗಿದ್ದರು. ಅಮ್ಮಿ ನಿನ್ನ ಗಂಡ ಏಗಿರಬೇಕು ಅಂಥ ಕೇಳಿದರೆ ಅದೆಷ್ಟೋ ಯುವತಿಯರು ಅನಂತ್ ನಾಗ್ ತರ ಇರಬೇಕು ಎಂದು ಹೇಳುತ್ತಿದ್ದರು..

[widget id=”custom_html-3″]

Advertisements

ನವರಸಗಳನ್ನು ನಾಜೂಕಾಗಿ ಹೆಚ್ಚು ಕಡಿಮೆ ಇಲ್ಲದೇ ಬ್ಯಾಲೆನ್ಸ್ ಮಾಡಿಕೊಂಡು ನಟಿಸುತ್ತಿದ್ದ ನಟರಲ್ಲಿ ಅನಂತ್ ನಾಗ್ ಕೂಡ ಒಬ್ಬರು. ಅವರ ಕನ್ನಡ ಬಾಷೆಯ ಸ್ಪಷ್ಟತೆ ಹಾಗು ಡೈಲಾಗ್ ಅಂತೂ ಅದ್ಬುತ.. ಇಂದಿನ ಅದೆಷ್ಟೋ ನಟರಿಗೆ ಸ್ಪೂರ್ತಿಯಾಗಿದ್ದಾರೆ ಅನಂತ್ ನಾಗ್‌. ಅವರ ಅದೆಷ್ಟೋ ಸಿನಿಮಾಗಳಲ್ಲಿ ಜನರನ್ನು ಕಣ್ಣು ತುಂಬಾ ಅಳಿಸಿದ್ದಾರೆ.. ಹೊಟ್ಟೆ ತುಂಬಾ ನಗಿಸಿದ್ದಾರೆ. ಅವರ ಹಂಸಗೀತೆಯಂತಹ ಚಿತ್ರಿಸಿ ಜನರ ಮನಸ್ಸನ್ನು ಜಾಗೃತಿ ಗೊಳಿಸಿದ್ದಾರೆ.. ಇಂತಹ ಅನಂತ್ ನಾಗ್ ಅವರಿಗೂ ಒಂದು ಸಣ್ಣ ಲೌವ್ ಸ್ಟೋರಿ ಇದೆ. ಅನಂತ್ ನಾಗ್ ಅವರು ಯಾವುದೋ ಸಿನಿಮಾ ಶೂಟಿಂಗ್ ಗಾಗಿ ನಂದಿ ಬೆಟ್ಟಕ್ಕೆ ಹೋಗಿದ್ದರು.. ಶೂಟಿಂಗ್ ಮುಗಿಸಿಕೊಂಡು ವಾಪಸ್ ಬರುವಾಗ ನಟಿ ಗಾಯತ್ರಿ ಅವರನ್ನು ತಮ್ಮ ಕಾರಿನಲ್ಲಿಯೇ ಕೂರಿಸಿಕೊಂಡರು.

[widget id=”custom_html-3″]

ವಾಪಸ್ ಬರುವಾಗ ಕಾರಿನಲ್ಲಿಯೇ ಗಾಯತ್ರಿ ಅವರನ್ನು ನೀವು ನನ್ನನ್ನು ಮದುವೆ ಆಗುವ ಬಗ್ಗೆ ಅಭಿಪ್ರಾಯವೇನು ಎಂದು ಲೌವ್ ಗಿವ್ ಅನ್ನದೇ ಡೈರೆಕ್ಟ್ ಆಗಿ ಮದುವೆ ಮ್ಯಾಟರ್ ಗೆ ಬಂದು ಬಿಟ್ಟರು ಅನಂತ್ ನಾಗ್.. ನಂತರ ಒಬ್ಬರನೊಬ್ಬರು ಪರಸ್ಪರ ಒಪ್ಪಿ 1987 ರಲ್ಲಿ ನಟಿ ಗಾಯತ್ರಿ ಅವರನ್ನು ಅನಂತ್ ನಾಗ್ ಮದುವೆ ಆದರು‌.. ಮದುವೆ ಆದಮೇಲೆ ಗಾಯತ್ರಿ ಅವರನ್ನು ಅನಂತ್ ನಾಗ್ ಅವರು ಪ್ರೀತಿಸಲು ಕಲಿತಿದ್ದು.

[widget id=”custom_html-3″]

ಮದುವೆ ಆದಮೇಲೆ ನನ್ನನ್ನು ಸಿನಿಮಾಗಳಲ್ಲಿ ನಟಿಸು ಎಂದು ಒತ್ತಾಯ ಮಾಡಬಾರದು ಎಂದು ಗಾಯತ್ರಿ ಅವರು ಅನಂತ್ ನಾಗ್ ಅವರಲ್ಲಿ ಕೇಳಿಕೊಂಡಿದ್ದರು.. ಮದುವೆ ನಂತರ ನಟಿ ಗಾಯತ್ರಿ ಯಾವುದೇ ಚಿತ್ರದಲ್ಲು ನಟಿಸಲಿಲ್ಲಾ. ಅನಂತ್ ನಾಗ್ ಅವರನ್ನು ಗಾಯತ್ರಿ ಅವರು ತುಂಬಾ ಪ್ರೀತಿಸುತ್ತಾರಂತೆ.. ಅನಂತ್ ನಾಗ್ ಅವರಿಗೆ ಎಂತಹ ಪರಿಸ್ಥಿತಿಯಲ್ಲೂ ಬೆಂಬಲವಾಗಿ ನಿಲ್ಲುತ್ತಾರಂತೆ ಪತ್ನಿ ಗಾಯತ್ರಿ. ಈ ಎಲ್ಲಾ ವಿಷಯಗಳನ್ನು ಒಂದು ಖಾಸಗಿ ವಾಹಿನಿಯ ಕಾರ್ಯಕ್ರಮ ಒಂದರಲ್ಲಿ ಹೇಳಿಕೊಂಡಿದ್ದಾರೆ ನಟ ಅನಂತ್ ನಾಗ್..