Advertisements

ಆಂಧ್ರದಿಂದ ಬಂದ ಅಕುಲ್ ಬಾಲಾಜಿ ಕನ್ನಡಲ್ಲಿ ಖ್ಯಾತ ಆ್ಯಂಕರ್ ಆಗಿ ಬೆಳೆದಿದ್ದು ಹೇಗೆ ಗೊತ್ತಾ? ಅಕುಲ್ ಬಾಲಾಜಿ ಮನೆ ಮೊದಲ ಬಾರಿಗೆ ನೋಡಿ..

Cinema Entertainment

ನಮಸ್ತೆ ಸ್ನೇಹಿತರೆ, ಅಕುಲ್ ಬಾಲಾಜಿ ಕನ್ನಡ ಕಿರುತೆರೆಯ ಅಪ್ರತಿಮ ನಿರೂಪಕ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು.. ಹಳ್ಳಿ ಹೈದ ಪ್ಯಾಟೇಗ್ ಬಂದ, ಪ್ಯಾಟೆ ಮಂದಿ ಕಾಡಿಗ್ ಬಂದ್ರು. ಅಂತಹ ಶೋಗಳ ಮೂಲಕ ಕನ್ನಡದ ಕಿರುತೆರೆಯಲ್ಲಿ ಸೆನ್ಸೆಷನ್ ಕ್ರಿಯೇಟ್ ಮಾಡಿದ ಅಕುಲ ಬಾಲಾಜಿ ಟೀವಿ ಪರದೆಯ ಮೇಲೆ ಸೂಪರ್ ಸ್ಟಾರ್ ಆ್ಯಂಕರ್ ಆಗಿ ಮಿಂಚಿದ್ದರು.. ಅಷ್ಟೇ ಅಲ್ಲದೇ ಬಿಗ್ ಬಾಸ್ ಮನೆಗೂ ಎಂಟ್ರಿ ಕೊಟ್ಟು ಗೆದ್ದು ಬಂದ್ರು. ಆಗಾದ್ರೆ ಅಕುಲ್ ಬಾಲಾಜಿ ಅವರ ಮನೆ ಹೇಗಿದೆ, ಅವರ ಬಗೆಗಿನ ಸ್ವಾರಸ್ಯಕರ ಸಂಗತಿಗಳೇನು ಎಂದು ನೋಡೊಣ.. ಅಕುಲ್ ಬಾಲಾಜಿ ಹುಟ್ಟಿದ್ದು ಆಂದ್ರ ಪ್ರದೇಶದ ರೈಲ್ವೇ ಕಡೂರು ಅನ್ನುವ ಚಿಕ್ಕ ಪಟ್ಟಣದಲ್ಲಿ.

Advertisements

ತಮ್ಮ 16ನೇ ವಯಸ್ಸಿನಲ್ಲಿ ಬೆಂಗಳೂರಿಗೆ ಬಂದ ಅಕುಲ್ ಇಲ್ಲಿ ಭರತನಾಟ್ಯ ಶಾಲೆಗೆ ಸೇರಿಕೊಂಡರು.. ನಂತರ ಕನ್ನಡವನ್ನ ಕಲಿತು. ಕನ್ನಡ ಮಾತನಾಡೋದ್ರಲ್ಲಿ ಪ್ರವೀಣರಾದರು.. ತಮ್ಮ ಮಾತೃ ಬಾಷೆ ತೆಲುಗು ಆದರೂ. ಕನ್ನಡದ ಭಾಷೆಯಲ್ಲಿ ನಿರೂಪಣೆ ಮಾಡುವಷ್ಟು ಚಾತುರ್ಯ, ಭಾಷೆ ಮೇಲೆ ಹಿಡಿದ ಸಾಧಿಸಿದ್ರೂ.. ಹಾಗೆ ಕನ್ನಡದ ಕಿರುತೆರೆಯ ನಂಬರ್ ಒನ್ ಆ್ಯಂಕರ್ ಆಗಿ ಮಿಂಚುತ್ತಿದ್ದಾರೆ. ಅಕುಲ್ ಅವರು ಜೋತಿಯವರನ್ನ ಮದುವೆಯಾಗಿದ್ದು ಈ ದಂಪತಿಗೆ ಮುದ್ದಾದ ಮಗ ಇದ್ದಾನೆ..

ಇದೇ ನೋಡಿ ಅಕುಲ್ ಬಾಲಾಜಿ ಅವರ ನೆಚ್ಚಿನ ಮನೆ. ಬೆಂಗಳೂರಿನಲ್ಲಿ ತಮ್ಮ ಇಚ್ಛೆಗೆ ಅನುಗುಣವಾಗಿ ಸುಂದರವಾದ ವಿಶಾಲವಾದ ಮನೆಯನ್ನು ಕಟ್ಟುಕೊಂಡಿದ್ದಾರೆ ಅಕುಲ್ ಮತ್ತು ಜ್ಯೋತಿ ಅವರು.. ಬಿಡುವಿದ್ದರೆ ಸಾಕು ಹೆಚ್ಚು ಸಮಯವನ್ನ ತಮ್ಮ ಕುಟುಂಬದ ಜೊತೆ ಕಳೆಯುವ ಅಕುಲ್ ತಮ್ಮ ಮಗನ ಜೊತೆ ಮಗುವಾಗಿ ಆಟಕ್ಕೆ ಇಳಿಯುತ್ತಾರೆ.. ಒಂದು ಭಾಷೆಯನ್ನ ಕಲಿಯೋದು ಬೇರೆ, ಆದರೆ ಆ ಬಾಷೆಯಲ್ಲೇ ನಿರೂಪಣೆ ಮಾಡುವ ಸಾಮರ್ಥ್ಯ ಬೆಳೆಸಿಕೊಳ್ಳೊದು ಅಷ್ಟು ಸುಲಭದ ಮಾತಲ್ಲ.. ಆದರೆ ಇದರಲ್ಲಿ ಗೆದ್ದಿರುವ ಅಕುಲ್ ಬಾಲಾಜಿ ಕನ್ನಡಿಗರ ಮನದಲ್ಲಿ ಉಳಿದಿದ್ದಾರೆ..