Advertisements

ಯುಗಾದಿ ಹಬ್ಬದ ದಿನವೇ ತಾಯಿಯ ಆಸೆಯನ್ನು ಇಡೇರಿಸಿದ ಆ್ಯಂಕರ್ ಅನುಶ್ರೀ.. ಮನೆಯಲ್ಲಿ ನಡೆದದ್ದು ಏನು ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ಮಾತಾನಾಡಲು ಶುರು ಮಾಡಿದರೆ ಪಟಪಟ ಅಂತ ಮಾತನಾಡುವ ಆ್ಯಂಕರ್ ಅನುಶ್ರೀ ಮದುವೆಯ ವಿಚಾರದ ಸುದ್ದಿ ಮತ್ತೊಮ್ಮೆ ಕೇಳಿ ಬಂದಿದೆ.. ಯುಗಾದಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದ ಅನುಶ್ರೀ ಅವರು ಗುಡ್ ನ್ಯೂಸ್ ಕೊಡಲಿದ್ದಾರಂತೆ. ಅನುಶ್ರೀಯವರಿಗೆ ಈಗಾಗಲೇ 33 ವರ್ಷ ದಾಟಿದ್ದರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿಲ್ಲ.. ಇತ್ತೀಚಿನ ದಿನಗಳಲ್ಲಿ ಅನುಶ್ರೀ ಅವರು ಮದುವೆ ವಿಚಾರದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು.. ಅನುಶ್ರೀ ಅವರ ತಾಯಿಯೂ ಸಹ ಮಗಳ ಮದುವೆಯ ಬಗ್ಗೆ ಹಂಚಿಕೊಂಡಿದ್ದರು.. ಹೌದು ಮಗಳ ಮದುವೆಯನ್ನು ಮಾಡಬೇಕು..

Advertisements

ಆದರೆ ಚಿತ್ರರಂಗಕ್ಕೆ ಸಂಬಂಧಪಟ್ಟ ಹುಡುಗ ಆಗಿರುವುದಿಲ್ಲ ಎಂಬ ಮಾತನ್ನು ಹೇಳಿದ್ದರು. ಇನ್ನೂ ಈಗ ಮತ್ತೊಮ್ಮೆ ಅನುಶ್ರೀ ಅವರು ಮದುವೆ ವಿಚಾರದಲ್ಲಿ ಸುದ್ದಿಯಾಗುತ್ತಿದ್ದು ಯುಗಾದಿ ಹಬ್ಬದ ದಿನವೇ ಅನುಶ್ರೀ ಅವರನ್ನು ನೋಡಲು ಗಂಡಿನ ಕಡೆಯವರು ಬಂದಿದ್ದಾರೆ ಎಂಬ ಮಾತು ಕೇಳಿ ಬಂದಿದೆ.. ಅನುಶ್ರೀ ಅವರ ತಾಯಿಯ ಹೇಳಿಕೆಯಂತೆ ಹುಡುಗ ಸಿನಿಮಾ ಕ್ಷೇತ್ರಕ್ಕೆ ಸಂಬಂಧಪಟ್ಟಿಲ್ಲ ಬದಲಾಗಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಹಾಗೆ ಇದೇ ವರ್ಷದಲ್ಲಿ ಅನುಶ್ರೀ ಅವರು ಮದುವೆಯಾಗಬಹುದು ಎಂಬದು ಅಭಿಮಾನಿಗಳ ಮಾತಾಗಿದೆ.

ಇನ್ನೂ ಹಬ್ಬದಲ್ಲಿ ಜರ್ದಾರಿ ಸೀರೆಯನ್ನು ಹುಟ್ಟಿಕೊಂಡು ಮೊಗದ ತುಂಬಾ ನಗು ತುಂಬಿಕೊಂಡಿರುವ ಅನುಶ್ರೀ ಅವರು ತನ್ನ ಇನ್ಸ್ಟಾ ಖಾತೆಯಲ್ಲಿ ಪೊಟೊವನ್ನು ಹಂಚಿಕೊಂಡಿದ್ದಾರೆ.. ಈ ಪೊಟೊ ನೋಡಿದ ಕೆಲವು ಅಭಿಮಾನಿಗಳು ಯುಗಾದಿ ಹಬ್ಬಕ್ಕೆ ಶುಭಾಶಯ ಕೋರಿದರೆ ಇನ್ನೂ ಕೆಲವರು ಮದುವೆ ಆಗುವ ಮುನ್ಸೂಚನೆ ಇದೆ ಎಂದು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಇನ್ನೂ ಹಬ್ಬದ ದಿನ ಅನುಶ್ರಿಯನ್ನು ನೋಡಲು ಗಂಡಿನ ಕಡೆಯವರು ಬಂದಿದ್ದಾರೆ ಎಂಬ ಮಾತು ಬಲ್ಲ ಮೂಲಗಳಿಂದ ಬಂದಿದೆ.. ಇದು ನಿಜ ಕೂಡ ಆಗಲಿ, 33 ವರ್ಷ ತುಂಬಿರುವ ಅನುಶ್ರೀ ಅವರು ಆದಷ್ಟು ಬೇಗ ಮದುವೆ ಆಗಲಿ ಎನ್ನುವ ಮಾತು ಅಭಿಮಾನಿಗಳದ್ದು.