Advertisements

ತನ್ನ ಜೀವನದ ಹೊಸ ಹೆಜ್ಜೆಯ ಬಗ್ಗೆ ಹಂಚಿಕೊಂಡ ಅನುಶ್ರೀ.. ಅಭಿಮಾನಿಗಳ ಆಸೆ ಕೊನೆಗೂ ನೆರವೇರಿತು!

Cinema

ಪ್ರಿಯ ವೀಕ್ಷಕರೆ ಬೆಳ್ಳಿತರೆ, ಕಿರುತರೆ ಯಾವುದೇ ಇರಲಿ ಮೈಕ್ ಹಿಡಿದು ಎಲರನ್ನು ಮಾತಿನ‌ ಸೆಳೆತದ‌ ಮೂಲಕ‌ ಸೋಲಿಸುವ ಕಲೆ ಇರುವುದು ಆ್ಯಂಕರ್ ಅನುಶ್ರೀ ಅವರಿಗೆ ಮಾತ್ರ. ಪಟಪಟಾ ಅಂತ ಮಾತನಾಡುತ್ತಾ ಪ್ರತಿಯೊಂದರ ಕಾರ್ಯಕ್ರಮದ ಜವಾಬ್ದಾರಿ ಹೊತ್ತು ನಿರೂಪಣೆ ಮಾಡುವ ಅನುಶ್ರೀ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಸಹಿ ಸುದ್ದಿಯೊಂದನ್ನು ಹಂಚಿಕೊಳ್ಳುವುದರ ಮೂಲಕ‌ ಮತ್ತೆ ಸುದ್ದಿಯಲ್ಲಿದ್ದಾರೆ.

[widget id=”custom_html-3″]

ಹಾಗಿದ್ರೆ ಆ ಸಿಹಿ ಸುದ್ದಿ ಏನು ಅಂತೀರಾ ಹಾಗಿದ್ರೆ ನೋಡಿ..‌ ಮಂಗಳೂರಿನ ಮಧ್ಯಮ ಕುಟುಂಬದಲ್ಲಿ ಜನಿಸಿದ ಅನುಶ್ರೀ ಮೊದಲು ವೇದಿಕೆಯ ಕಾರ್ಯಕ್ರಮಗಳಲ್ಲಿ ಬ್ಯಾಕ್ ಡ್ಯಾನ್ಸರ್ ಆಗಿ‌ ಕೆಲಸ ಮಾಡುತ್ತಿದ್ದು, ಅನಂತರ ದಿನಗಳಲ್ಲಿ ‌ನಿರೂಪಣೆ ಮಾಡುತ್ತಿದ್ದರು. ಈಗ ಜೀ ಕನ್ನಡ ವಾಹಿನಿಯ ಖಾಯಂ ನಿರೂಪಕಿಯಾಗಿ ಸೇವೆ ಸಲ್ಲಿಸುತ್ತಿರವ ಅನುಶ್ರೀ ಹತ್ತು ಹಲವಾರು ಕಾರ್ಯಕ್ರಮಗಳಲ್ಲಿ ರಿಯಾಲಿಟಿ‌ ಶೋಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಆರೇಳು ವರ್ಷಗಳಿಂದ ಅವರು ಸರಿಗಮಪ ಡಿಕೆಡಿ ಶೋ ಹೀಗೆ ಹಲವು ಶೋಗಳಲ್ಲಿ‌ ಸಾಕಷ್ಟು ಬ್ಯುಸಿಯಾಗಿದ್ದು ಇದೀಗ ಸಂತೋಷದ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಮೊದಲಿಗೆ ಗುರುಕಿರಣ ಅವರ ಕಾರ್ಯಕ್ರಮದಲ್ಲಿ ಕೆಲಸ ಮಾಡಿತ್ತಿದ್ದ ಅವರ ಪ್ರತಿಭೆ ಗುರುತಿಸಿ ನಿರೂಪಣೆ ಮಾಡಲು ಅವಕಾಶ ಒದಗಿಸಿಕೊಟ್ಟರು ಎಂದು‌ ಇಂದಿಗೂ‌ ಅನುಶ್ರೀ ಗುರುಕಿರಣ ಅವರಿಗೆ ಕೃತಜ್ಞತೆ ಸಲ್ಲಿಸುತ್ತಾರೆ. ನಿರೂಪಕಿ‌ಯಾಗಿ ಮಾತ್ರವಲ್ಲದೆ ನಿಧಾನವಾಗಿ ಬೆಳ್ಳೆತರೆಯತ್ತ ಮುಖ ಮಾಡಿದ ಅನುಶ್ರೀ ಪ್ರಾರಂಭದಲ್ಲಿ ಚಿಕ್ಕ ಪಾತ್ರಗಳಲ್ಲಿ ಅಭಿನಯಿಸಿದರು. ಇದೆಲ್ಲದರ ನಂತರ ಬಿಗ್ ಬಾಸ್ ರಿಯಾಲಿಟಿ ‌ಶೋಗೆ ಎಂಟ್ರಿ ಕೊಟ್ಟ‌ ನಂತರ ಅನುಶ್ರೀಯ ಬದುಕೆ ಬದಲಾಗಿತ್ತು. ಬಿಗ್ ಬಾಸ್‌ನಿಂದ ಹೊರ‌ಬಂದ‌ ನಂತರ ಬೆಂಕಿಪೂಟ್ಟಣ, ಉಪ್ಪು ಹುಳಿ ಖಾರ, ಸಿನೆಮಾದಲ್ಲಿ ಬಣ್ಣ ಹಚ್ಚಿದರು.

[widget id=”custom_html-3″]

ನಂತರ ಜೀ ಕನ್ನಡದಲ್ಲಿ ನಡೆಯುವ ರಿಯಾಲಿಟಿ ಶೋಗಳಲ್ಲಿ ನಿರೂಪಣೆ‌ ಮಾಡುತ್ತಾ ಬ್ಯಸಿಯಾಗಿದ್ದರು. ಅನೇಕ‌ ಸವಾಲುಗಳನ್ನು ‌ಕಷ್ಟಗಳನ್ನು ಅನುಭವಿಸಿದ್ದ ಅನುಶ್ರೀ ಈಗ ಲಕ್ಷಾಂತರ ರೂಪಾಯಿ ಸಂಭಾವನೆ ಪಡೆಯವಂತಾಗಿದ್ದು ಅವರ ಪರಿಶ್ರಮ ಫಲ. ಇದನ್ನೆಲ್ಲ‌ ಹೊರತು ಪಡಿಸಿ ಅನುಶ್ರೀಯವರ ವೈಯಕ್ತಿಕ‌ ಜೀವನ ನೋಡುವುದಾದರೆ ಅವರ ಮದುವೆಯ ಕುರಿತು ಹಲವು ಸುದ್ದಿಗಳು ಹರಿದಾಡಿದ್ದವು. ಅನುಶ್ರೀ ಹಾಗೂ ಚಿಕ್ಕಣ್ಣ ಅವರ ಮದುವೆ ಕುರಿತಾದ ಗಾಳಿ ಸುದ್ದಿ ಕೇಳಿಬಂದಿದ್ದರು ಅನುಶ್ರೀ ಅವುಗಳೆಲ್ಲವನ್ನು ಉಹೆ ಎಂದು ಹೇಳಿ ಬಿಟ್ಟರು. ಇವರ ಮದುವೆ ಕುರಿತು ಅಭಿಮಾನಿ ಗಳಲ್ಲಿ ಹೆಚ್ಚು ಕುತುಹಲವಿದ್ದು ಅನುಶ್ರೀ ಮಾತ್ರ ತಮ್ಮ ಮದುವೆಯ ಕುರಿತು ಯಾವುದೇ ಪ್ರತಿಕ್ರಿಯೆ ‌ನೀಡಿಲ್ಲ. ಸದ್ಯ ಜೀ ವಾಹಿನಿಯ ಕಾರ್ಯಕ್ರಮದಿಂದ ಕೊಂಚ ದೂರ ಸರಿದಿದ್ದು ತಮ್ಮ ವೃತ್ತಿಜೀವನದ ಮಹತ್ತರ ಕೆಲಸದಲ್ಲಿ ಹೊಸ ಹೆಜ್ಜೆ ಇಡುತ್ತಿದ್ದಾರೆ.

[widget id=”custom_html-3″]

ಕಿರುತೆರೆಯಿಂದ ಚಂದನವನದತ್ತ ಮತ್ತೆ ಮುಖ ಮಾಡಿರುವ ಅನುಶ್ರೀ ಸಿನೆಮಾ ಒಂದರಲ್ಲಿ ನಟಿಯಾಗಿ ಅಭಿನಯಿಸಲಿದ್ದಾರೆ. ಸುಂದರ ಕಥಾ ಹಂದರವನ್ನು‌ ಒಳಗೊಂಡ ಥ್ರಿಲ್ಲರ್ ಸಿನೆಮಾದಲ್ಲಿ ನಟಿಸಲು ರೆಡಿಯಾಗಿದ್ದು ಇದೇ ತಿಂಗಳ ಕೊನೆಯಲ್ಲಿ ‌ಚಿತ್ರೀಕರಣ ಪ್ರಾರಂಭವಾಗಲಿದೆ. ಇನ್ನು‌ ನಾಯಕಿಯಾಗಿ ನಟಿಸುತ್ತಿರುವ ಅನುಶ್ರೀ ಅವರಿಗೆ ಈ‌ ಸಿನೆಮಾ ಮುಂದಿನ ಎಳಿಗೆಯ ಮೆಟ್ಟಿಲಾಗಲಿ. ಮತ್ತೆ‌‌ ಮುಂದಿನ ದಿನಗಳಲ್ಲಿ ನಿರೂಪಕಿಯಾಗಿ ಮುಂದುವರೆಯುತ್ತಾರಾ ಅಥವಾ ಬೆಳ್ಳಿತರೆಯಲ್ಲಿಯೇ ಉಳಿದು ಬೀಡುತ್ತಾರಾ ಕಾದು ನೋಡಬೇಕಿದೆ.

[widget id=”custom_html-3″]