Advertisements

ಒಂದು ಕಾಲದಲ್ಲಿ ಅಮ್ಮ ಮತ್ತು ತಮ್ಮನನ್ನ ಸಾಕಲು ಒಂದು ಹೊತ್ತಿನ ಊಟಕ್ಕಾಗಿ ಕೂಲಿ ಕೆಲಸ ಮಾಡಿ ಜೀವನ ನಡೆಸಿದ ಅನುಶ್ರೀ.. ಇಂದು ಕಷ್ಟಪಟ್ಟು ಎಂತಹ ಮನೆ ಕಟ್ಟಿಸಿದ್ದಾರೆ ಗೊತ್ತಾ? ನೋಡಿ..

Cinema Entertainment

ನಮಸ್ತೆ ಸ್ನೇಹಿತರೆ, ಕನ್ನಡದ ನಂಬರ್ ಒನ್ ನಿರೂಪಕಿ ಅನುಶ್ರೀಯವರು ಇಂದು ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ.. ಓದಿದ್ದು ಕಡಿಮೆ. ಬುದಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದರು.. ತಮ್ಮ ಇನ್ನೂ ಚಿಕ್ಕವನು ಅವನನ್ನು ಸಾಕಬೇಕಿತ್ತು. ತಮ್ಮನನ್ನ ಓದಿಸಬೇಕಿತ್ತು‌.. ಈಗೆ ಹಲವಾರು ದೊಡ್ಡ ಜವಾಬ್ದಾರಿಗಳನ್ನ ಬೆನ್ನಿಗೆ ಕಟ್ಟಿಕೊಂಡು.. ಎಲ್ಲಾ ಆಸೆಗಳನ್ನ ಕಟ್ಟಿಕೊಂಡು ಬೆಂಗಳೂರಿಗೆ ಬಂದು ಇಳಿದರು. ಅನುಶ್ರಿ ಅವರು ಮಂಗಳೂರಿನಲ್ಲಿ ತುಳು ಮಾತನಾಡುವ ಕುಟುಂಬದಲ್ಲಿ ಹುಟ್ಟಿದವರು.. ಇವರಿಗೆ ಅಭಿಜಿತ್ ಎಂಬ ತಮ್ಮನಿದ್ದಾನೆ.

Advertisements

ಹೆಂಡತಿ ಮಕ್ಕಳನ್ನು ನೋಡಿಕೊಳ್ಳಲು ಹಾಗದೆ ಅನುಶ್ರೀ ಅವರ ತಂದೆ ಬಿಟ್ಟು ಹೋದರು. ಅನುಶ್ರೀ ಮನೆಯ ಹಿರಿಯ ಮಗಳು.. ಆದ ಕಾರಣ ಚಿಕ್ಕ ವಯಸ್ಸಿನಲ್ಲೇ ಮನೆಯ ಜವಾಬ್ದಾರಿಯೊಂದಿಗೆ ಅಮ್ಮ ಮತ್ತು ತಮ್ಮನನ್ನ ಸಾಕುವ ಜವಾಬ್ದಾರಿಯನ್ನು ಹೊತ್ತಿಕೊಂಡರು.. ಈ ದೊಡ್ಡ ಜವಾಬ್ದಾರಿಯನ್ನು ನಿಭಾಯಿಸಲು ಅನುಶ್ರಿ ಓದನ್ನು ನಿಲ್ಲಿಸ ಬೇಕಾಯಿತು. ಅಮ್ಮ ಮತ್ತು ತಮ್ಮನನ್ನ ಸಾಕಲು ಒಂದು ಹೊತ್ತಿನ ಊಟಕ್ಕಾಗಿ ಕೂಲಿ ಕೆಲಸ ಮಾಡಿ ಜೀವನ ನಡೆಸಿದ್ದು ಇದೆ.‌. ಶಾಲೆಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಸ್ಟೇಜ್ ಮೇಲೆ ಆ್ಯಂಕರ್ ಮಾಡಿ ಸೈ ಎನಿಸಿಕೊಂಡಿದ್ದ ಅನುಶ್ರೀ.

ನಂತರ ಮಾತನ್ನೇ ಬಂಡವಾಳ ಮಾಡಿಕೊಂಡರು.‌. ಅನುಶ್ರೀಯವರು ನಮ್ಮ ಟಿವಿ ಎಂಬ ಮಂಗಳೂರಿನ ಚಾನಲ್ ಒಂದರಲ್ಲಿ ಆ್ಯಂಕರ್ ಶುರು ಮಾಡಿದರು‌. ಅಲ್ಲಿಂದ ಖುಲಾಯಿಸಿದ್ದು ಅನುಶ್ರೀ ಅವರ ಅದೃಷ್ಟ.. ಅಲ್ಲಿಯವರೆಗೂ ಅನುಶ್ರೀ ಅವರ ಸಂಬಳ ಕೇವಲ 250 ರೂಪಾಯಿ. ಇಂದು ಇವರು ಸಂಬಳ ಲಕ್ಷಗಳಲ್ಲಿ ಪಡೆಯುತ್ತಿದ್ದಾರೆ.. ನಂತರ ಇ ಟಿವಿ ಕನ್ನಡದಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡ್ ಕಾರ್ಯಕ್ರಮದ ನಿರೂಪಕಿಯಾದರು.

ಬಿಗ್ ಬಾಸ್ ಸೀಸನ್ ಒಂದರಲ್ಲಿ ಸ್ಪರ್ಧಿಯಾದರು.. ಅಲ್ಲಿ 80 ದಿನಗಳನ್ನು ಕಳೆದರು. ನಂತರ ವಿವಿಧ ಟಿವಿ ಚಾನಲ್ ಗಳಲ್ಲಿ ಕೆಲಸ ಮಾಡುತ್ತಾ ಜೀ ಕನ್ನಡ ಸರಿಗಮಪ ಹೋಸ್ಟ್ ಮಾಡಿದಾಗ.. ಅಲ್ಲಿಂದ ಇವರ ಜೀವನವೇ ಬದಲಾಯಿಸಿತು. ಇವರ ಸಂಭಾವನೆಯೂ ಏರಿ ನಂಬರ್ ಒನ್ ನಿರೂಪಕಿಯಾದರು‌.. ಈಗ ಬೆಂಗಳೂರಿನಲ್ಲಿ ಸ್ವಂತ ಮನೆ ಮಾಡಿಕೊಂಡಿದ್ದಾರೆ. ನಮ್ಮಲ್ಲಿ ಟಾಲೆಂಟ್ ಇದ್ದರೆ ಸಾಕು.. ಹಣದ ಅವಶ್ಯಕತೆ ಇಲ್ಲದೇ ಏನು ಬೇಕಾದರೂ ಸಾಧನೆ ಮಾಡಬಹುದು ಅನ್ನೋದಕ್ಕೆ ಅನುಶ್ರೀಯವರು ಉತ್ತಮ ಉದಾಹರಣೆ. ಅನುಶ್ರೀಯವರು ಹೆಣ್ಣು ಮಕ್ಕಳಿಗೂ ಮಾದರಿಯಾಗಿದ್ದಾರೆ..