Advertisements

ಬೀದಿ ಬದಿ ಸೈಕಲ್ ಮೇಲೆ ಬಟ್ಟೆ ಮಾರುವ ಈ ವ್ಯಕ್ತಿಯ ಮಗ ಇಂದು ಏನಾಗಿದ್ದಾರೆ ಗೊತ್ತಾ? ಇದು ಕಂಡ್ರಿ ನಿಜವಾದ ಸಾಧನೆ ಅಂದ್ರೆ..

Kannada Mahiti

ಪ್ರತಿಭೆ ಯಾರಪ್ಪನ ಸ್ವತ್ತಲ್ಲ.. ಪ್ರತಿಭಾನ್ವಿತರು ಯಾವ ಮನೆತನದಲ್ಲೂ ಹುಟ್ಟಬೇಕೆಂದಿಲ್ಲ,, ಬಡತನ ಸಿರಿತ ಮೇಲು ಕೀಳು ಇದ್ಯಾವುದು ಕೂಡ ಪ್ರತಿಭಾನ್ವಿತನಿಗೆ ಅಡೆತಡೆಯಾಗಲ್ಲ.. ಒಬ್ಬೊಬ್ಬರೊಂದು ಒಂದೊಂದು ಟ್ಯಾಲೆಂಟ್.. ಕೆಲವರು ಓದಿನಲ್ಲಿ ಮುಂದಿದ್ರೆ, ಕೆಲವರು ಕ್ರೀಡೆಯಲ್ಲಿ, ಇನ್ನು ಕೆಲವರು ಸಾಂಸ್ಖೃತಿಕ ಕಾರ್ಯಕ್ರಮದಲ್ಲಿ ಹೀಗೆ ಒಬ್ಬೊಬ್ಬರು ಒಂದೊಂದು ರಂಗದಲ್ಲಿ ಮುಂದಿರುತ್ತಾರೆ.. ಅವರವರ ಪ್ರತಿಭೆಗೆ ತಕ್ಕಂತೆ ಒಂದೊಂದು ಕೆಲಸದಲ್ಲಿ ಮುಂದಿರುತ್ತಾರೆ. ಎಸ್ ಇವತ್ತು ನಾವು ಅಂತಹದ್ದೇ ಒಬ್ಬ ಪ್ರತಿಭಾನ್ವಿತನ ಬಗ್ಗೆ ಹೇಳ್ಥೀವಿ.. ಶಿಕ್ಷಣ, ಕಲಿತ ವಿದ್ಯೆ ಯಾವತ್ತು ನಮ್ಮ ಕೈ ಬಿಡುವುದಿಲ್ಲ.. ಇವತ್ತು ನಾವು ನಿಮಗೆ ಅಂತಹದ್ದೇ ಒಂದು ವಿಚಾರ ಹೇಳ್ತೀವಿ.. ಬದುಕಿನಲ್ಲಿ ಛಲ, ಶ್ರಮ. ಕಲಿಯುವ ಆಸಕ್ತಿಯಿದ್ದ ವ್ಯಕ್ತಿಗೆ ಯಾವುದು ಕೂಡ ಅಡೆತಡೆಯಾಗಲ್ಲ.. ಅನ್ನೋದಕ್ಕೆ ಈ ವ್ಯಕ್ತಿಯೇ ಸಾಕ್ಷಿ..

Advertisements

ಹೌದು ಬೀದಿ ಬದಿ ಸೈಕಲ್ ಮೇಲೆ ಬಟ್ಟೆ ಮಾರುವ ಈ ವ್ಯಕ್ತಿಯ ಮಗ ಯುಪಿಎಸ್ ಸಿ ಯಲ್ಲಿ ಮಾಡಿರುವ ಸಾಧನೆ ನಿಜಕ್ಕೂ ಆಶ್ಚರ್ಯ ಆಗುತ್ತೆ. ಮನೆ ಕೆಲಸ ಹಾಗೂ ಸೈಕಲ್ ಮೇಲೆ ಬಟ್ಟೆ ಮಾರುವ ಕೆಲಸ ಹೀಗೆ ನಾನಾ ಕೆಲಸಗಳನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದ ವ್ಯಕ್ತಿಯ ಮಗ ಈಗ ಇಪ್ಪತ್ತಾರು ವರ್ಷ ವಯಸ್ಸಿನಲ್ಲಿ ಇದೀಗ ಯುಪಿಎಸ್ ಸಿ ಯಲ್ಲಿ ಪಡೆದಿರುವ ರ್ಯಾಂಕ್‌ ಎಷ್ಟು ಎಂದು ತಿಳಿದರೆ ನಿಜಕ್ಕೂ ಹೆಮ್ಮೆಯಾಗುತ್ತೆ. ಈತನ ಹೆಸರು ಅನಿಲ್ ಬಸಕ್.. ವಯಸ್ಸು ಕೇವಲ ಇಪ್ಪತ್ತಾರು.. ಈತ ಮೂಲತಃ ಬಿಹಾರದವನು. ಈತನ ತಂದೆ ಬಿನೋದ್ ಬಸಕ್ ಹಾಗೂ ತಾಯಿ ಮಂಜು ದೇವಿ.‌ ಇವರಿಗೆ ನಾಲ್ಕು ಮಕ್ಕಳು.. ಎರಡನೆಯವನೇ ಅನಿಲ್ ಬಸಕ್..

ಮೊದಲನೆ ಮಗ ಇತ್ತೀಚೆಗೆ ಕೆಲಸಕ್ಕೆ ಸೇರಿಕೊಂಡರೆ ಇತ್ತ ಅನಿಲ್ ಬಸಕ್ ಮಾತ್ರ ತುಂಬಾ ಪ್ರತಿಭಾವಂತನಾಗಿದ್ದು ಯಾವುದೇ ಕೋಚಿಂಗ್ ಇಲ್ಲದೇ ಪ್ರತಿಷ್ಠಿತ ಐಐಟಿ ದೆಹಲಿಯಲ್ಲಿ ಯಲ್ಲಿ ಸಿವಿಲ್ ಇಂಜಿನಿಯರಿಂಗ್ ಓದಲು ಅವಕಾಶ ಗಿಟ್ಟಿಸಿಕೊಂಡ್ರು.
ಆದರೆ ಅನಿಲ್ ಮಾತ್ರ ನಾನು ಸಿವಿಲ್ ಸರ್ವೀಸ್ ಪರೀಕ್ಷೆ ಬರೆಯಬೇಕು ಎಂದನಂತೆ.. ಆಗಲೂ ಅಪ್ಪ ಅಮ್ಮ ಇದು ಕನಸಿನ ಮಾತು ಇದೆಲ್ಲಾ ನಮಗೆಲ್ಲಿ‌ಸಿಗತ್ತೆ ಎಂದುಕೊಂಡು ಎಂದಿನಂತೆ ತಮ್ಮ ಬೀದಿ ಬದಿ ವ್ಯಾಪಾರ ಮುಂದುವರೆಸಿದರಂತೆ..
ಆದರೆ ಛಲದಂಕ ಮಲ್ಲನಾದ ಅನಿಲ್, ಏನಾದ್ರೂ ಆಗ್ಲೀ ನಾನು ಓದಲೇಬೇಕು, ಹಿಡಿದ ಹಠವನ್ನು ಪೂರ್ತಿ ಮಾಡ್ಲೇಬೇಕು ಅಂತ ಪಣ ತೊಟ್ಟಿದ್ದ.

ಅದರ ಫಲವಾಗಿಯೇ ಕಳೆದ ಸಾಲಿನಲ್ಲಿಯೇ ಯುಪಿಎಸ್ ಸಿ ಪರೀಕ್ಷೆ ಉತ್ತೀರ್ಣರಾಗಿ 616ನೇ ಅಂಕ ಪಡೆದು ಅಧಿಕಾರಿಯಾಗಿದ್ದರು. ಆದ್ರೆ ಅದ್ಯಾಕೋ ಅನಿಲ್ ಗೆ ಇನ್ನೂ ಸಹ ಸಮಾಧಾನ ತಂದಿರಲಿಲ್ಲ.. ಆ ಕಾರಣಕ್ಕೆ ಈ ವರ್ಷವೂ ಸಹ ಪರೀಕ್ಷೆಗೆ ಹಾಜರಾಗಿ ದೇಶಕ್ಕೆ ನಲವತ್ತೈದನೇ ರ್ಯಾಂಕ್ ಪಡೆದಿದ್ದಾರೆ. ಈ ಸುದ್ದಿಯನ್ನು ತನ್ನ ಮನೆಯ ಪುಟ್ಟ ಟಿವಿಯಲ್ಲಿ ಕಂಡು ಆ ಹಿರಿಯ ಜೀವಿಗಳು ಪಟ್ಟ ಖುಷಿಗೆ ಪಾರವೇಯಿರಲಿಲ್ಲ.. ತನ್ನ ಮಗನ ದೃಢ ನಿರ್ಧಾರ ಕೆಲಸದ ಮೇಲಿನ ಬದ್ದತೆ, ಕಾರ್ಯಕ್ಷಮತೆ ಎಲ್ಲವನ್ನು ಕಂಡು ಹೆತ್ತವರು ಆನಂದಕ್ಕೆ ಪಾರವೇ ಇರಲಿಲ್ಲ..