Advertisements

ಅದಾಗಲೇ ಮದುವೆಯಾಗಿ ಹೆಣ್ಣು ಮಗುವಾಗಿದ್ದ ಹುಡುಗಿಯನ್ನು ಅನಿಲ್ ಕುಂಬ್ಳೆ ಮದುವೆಯಾದ್ರು! ಕಾರಣ ಏನು ಗೊತ್ತಾ? ಇದು ಅವರ ದೊಡ್ಡತನ ನೋಡಿ..

Sports

ಅನಿಲ್ ಕುಂಬ್ಳೆ ಒಂದು ತೆರೆದ ಪುಸ್ತಕವಿದ್ದಂತೆ. ದೇಶ ವಿದೇಶಗಳಿಗೆ ಹೋದರೂ ಕನ್ನಡ ನಾಡು ನುಡಿಯನ್ನು ಎತ್ತಿ ಹಿಡಿದವರು. ಕ್ರಿಕೆಟ್ ರಂಗದಲ್ಲಿ ಉತ್ತುಂಗಕ್ಕೆ ಏರಿದ ಇವರು ಹೃದಯವಂತಿಕೆಯಲ್ಲಿಯೂ ಅಷ್ಟೇ ಶ್ರೀಮಂತರು. ಇವರು ಮಾಡಿದ ಅದೆಷ್ಟೋ ಒಳ್ಳೆಯ ಕಾರ್ಯಗಳು ತೆರೆಮೇಲೆ ಬರೆದೆ ತೆರೆಮರೆಯಲ್ಲೇ ಇವೆ. ಇವರು ನಿಜಜೀವನದಲ್ಲಿಯೂ ಹೀರೋ ಇವರ ಬಗ್ಗೆ ಒಂದಿಷ್ಟು ಮಹತ್ವದ ವಿಷಯಗಳು ನಿಮ್ಮ ಮುಂದೆ. ಅನಿಲ್ ಕುಂಬ್ಳೆ ಬಿಚ್ಚು ಮನಸ್ಸಿನ ಹೃದಯ ಶ್ರೀಮಂತರು. ಇದಕ್ಕೆ ಉದಾಹರಣೆ ಅವರು ಚೇತನಾ ರನ್ನು ವಿವಾಹವಾಗಿದ್ದು. ಸ್ನೇಹಿತರೆ ಚೇತನ ಅನಿಲ್ ಕುಂಬ್ಳೆ ಅವರ ಧರ್ಮಪತ್ನಿ ಆದರೆ ಅವರು ಮೊದಲು ಒಂದು ವಿವಾಹವಾಗಿ ವಿಚ್ಛೇದನ ಪಡೆದಿದ್ದ ಹೆಣ್ಣುಮಗಳು. ವಿವಾಹವಾಗಿ ಒಂದು ಹೆಣ್ಣು ಮಗುವನ್ನು ಪಡೆದಿದ್ದ ಚೇತನ ಜೀವನದಲ್ಲಿ ತುಂಬಾ ನೊಂದಿದ್ದರು. ಚೇತನ ರಾಮತೀರ್ಥ ಎನ್ನುವವರನ್ನು ವಿವಾಹವಾಗಿದ್ದರು ಅವರಿಂದ ಹೆಣ್ಣುಮಗಳನ್ನು ಸಹ ಪಡೆದಿದ್ದರು. ಆದರೆ ಇವರ ಸಂಸಾರದಲ್ಲಿ ಏರುಪೇರುಗಳ ಹೆಚ್ಚಾಗಿದ್ದು ಸಮಸ್ಯೆಗಳು ಪದೇಪದೇ ಉದ್ಭವಿಸಿದವು.

[widget id=”custom_html-3″]

Advertisements

ಈ ಕಾರಣದಿಂದಲೇ ಇಬ್ಬರು ಸ್ವಇಚ್ಛೆಯಿಂದ ವಿಚ್ಛೇದನ ಪಡೆದಿದ್ದರು. ಈ ಎಲ್ಲ ವಿಷಯಗಳನ್ನು ತಿಳಿದಿದ್ದ ಅನಿಲ್ ಕುಂಬ್ಳೆಯವರು ಚೇತನರಿಗಾಗಿ ಎರಡು ವರ್ಷ ಕಾದರು. ಚೇತನ ಅನಿಲ್ ಕುಂಬ್ಳೆ ಅವರಿಗಿಂತ ಎರಡು ವರ್ಷ ದೊಡ್ಡವರು. ಆದರೂ ಬೇಕು ಎಂದು ಅವರ ಮನವೊಲಿಸಿದರು ಅನಿಲ್ ಕುಂಬ್ಳೆ. ಇದೀಗ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟು 22 ವರ್ಷಗಳು ಕಳೆದಿವೆ. ಇವರಿಬ್ಬರ ಅನನ್ಯ ದಾಂಪತ್ಯಕ್ಕೆ, ಇಬ್ಬರು ಮಕ್ಕಳು ಸಾಕ್ಷಿಯಾಗಿದ್ದಾರೆ. ಹೌದು ಚೇತನ ಅರುಣಿ ನಂತರ ಅನಿಲ್ ಕುಂಬ್ಳೆ ಅವರನ್ನು ವಿವಾಹವಾಗಿ ಮತ್ತೆ ಎರಡು ಮಕ್ಕಳಿಗೆ ಜನ್ಮ ನೀಡಿದರು. ಈಗಲೂ ಇವರೆಲ್ಲರೂ ಒಟ್ಟಿಗೆ ಇದ್ದು ಅನ್ಯೋನ್ಯವಾಗಿ ಮತ್ತು ಸಂತೋಷವಾಗಿದ್ದಾರೆ. ಅನಿಲ್ ಕುಂಬ್ಳೆಯವರು ಮಾತನಾಡುವಾಗ ನನಗೆ ಮೂರು ಮಕ್ಕಳು ಎಂದು ಹೇಳಿಕೊಂಡಿದ್ದಾರೆ. ಮಗಳನ್ನು ಅವಳಿಷ್ಟದಂತೆ ವಿದೇಶದಲ್ಲಿ ಓದಿಸುತ್ತಿದ್ದಾರೆ. ಸ್ವಂತ ಮಗಳಂತೆ ಅರುಣಿಯನ್ನು ಕಾಣುತ್ತಿದ್ದಾರೆ. ಇದು ಅವರ ದೊಡ್ಡ ಗುಣ.

[widget id=”custom_html-3″]

ನಂತರ ಹುಟ್ಟಿದ ಮಾಯಸ್ ಮತ್ತು ಸ್ವಾಸ್ತಿ ಇಬ್ಬರು ತಂದೆ ತಾಯಿಯೊಂದಿಗೆ ಹ್ಯಾಪ್ಪಿಯಾಗಿದ್ದಾರೆ. ಎಲ್ಲೆಡೆ ಅರುಣಿ ನನ್ನ ಅಧಿಕೃತ ಮಗಳು ಎಂದು ಹೇಳಿಕೊಂಡಿದ್ದಾರೆ ಇವಳು ಡಿಗ್ರಿ ಮುಗಿಸಿದಾಗ ಜಾಲತಾಣದಲ್ಲಿ ಫೋಟೋ ಹಾಕಿ ಖುಷಿ ಹಂಚಿಕೊಂಡಿದ್ದರು.
ಪ್ರೀತಿ ಹೆಸರಲ್ಲಿ ಮೋಸ ಮಾಡುವವರಿಗೆ ಈ ದಂಪತಿ ಮಾದರಿಯಾಗಿದ್ದಾರೆ.. ನೊಂದ ಹೆಣ್ಣು ಮಗಳಿಗೆ ಜೀವನ ನೀಡಿ ನಿಜಜೀವನದಲ್ಲಿಯೂ ಹೀರೋ ಆಗಿದ್ದಾರೆ. ಜೀವನದಲ್ಲಿ ಬಂದ ಅದೆಷ್ಟೋ ಕಹಿ ನೋವು ನಲಿವುಗಳಲ್ಲಿ ಜೊತೆಯಾಗಿ ನಿಂತ ಅನಿಲ್ ಕುಂಬ್ಳೆ ಎಲ್ಲರಿಗೂ ಮಾದರಿ. ಇವರ ಬಾಂಧವ್ಯ ಹೀಗೆ ಇರಲಿ. ಇವರಿಬ್ಬರ ಪ್ರೀತಿ ಮೇಲೆ ಯಾವ ಮತ್ತು ಯಾರ ದೃಷ್ಟಿ ಬೀಳದಿರಲಿ..

[widget id=”custom_html-3″]