Advertisements

ಊಟ ಕೊಡ್ತಾ ಕೊಡ್ತಾ ಬಿಕ್ಷುಕಿನ ಲವ್ ಮಾಡಿದ! ಕೊನೆಗೆ ಏನಾಯ್ತು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಈಗಿನ ಕಾಲದಲ್ಲಿ ಭಿಕ್ಷುಕರಿಗೆ ಒಂದು ರೂಪಾಯಿ ಕೊಡಲು ಹಿಂದೆ ಮುಂದೆ ನೋಡುತ್ತಾರೆ.. ಈಗಿರುವಾಗ ಇಲ್ಲೊಬ್ಬ ವ್ಯಕ್ತಿ ಭಿಕ್ಷುಕಿಗೆ ಮಾಡಿದ ಕೆಲಸ ನೋಡಿದ್ರೆ ನೀವು ಖಂಡಿತವಾಗಿಯೂ ನಂಬೋದಿಲ್ಲ.. ಈ ಒಂದು ವಿಚಿತ್ರ ಘ’ಟನೆ ಖಾನ್ಪುರ್ ಎಂಬ ಸ್ಥಳದಲ್ಲಿ ನಡೆದಿದೆ.‌. ಈ ವ್ಯಕ್ತಿ ಹೆಸರು ಅನಿಲ್ ಇವರ ಉದ್ಯೋಗ ಡ್ರೈವಿಂಗ್.. ಡ್ರೈವಿಂಗ್ ಮಾಡಿ ತನ್ನ ಜೀವನಕ್ಕೆ ಹಣ ಒದಗಿಸಿಕೊಳ್ಳುತ್ತಿದ್ದ.. ಇನ್ನು ಕ’ರೋನ ಕಾರಣದಿಂದ ಲಾಕ್ ಡೌನ್ ಆಗಿದ್ದ ಸಮಯದಲ್ಲಿ ತನ್ನ ಮಾಲಿಕನು ಹೇಳಿದಂತೆ ರಸ್ತೆ ಬದಿಯಲ್ಲಿರುವ ಜನಗಳಿಗೆ ಪ್ರತಿನಿತ್ಯ ಊಟವನ್ನು ತಂದು ಕೊಡುತ್ತಿದ್ದ..

Advertisements

ಈಗೆ ದಿನನಿತ್ಯ ಊಟ ಹಂಚುವ ಸಂದರ್ಭದಲ್ಲಿ ನೀಲಮ್ ಎಂಬ ಭಿಕ್ಷುಕಿಯ ಹುಡುಗಿ ಪರಿಚಯವಾಗುತ್ತಾಳೆ‌.. ಈ ಹುಡುಗಿಗೂ ಸಹ ಅನಿಲ್ ದಿನನಿತ್ಯ ಊಟವನ್ನು ತಂದುಕೊಡುತ್ತಿದ್ದ.. ಈಗೆ  ಊಟವನ್ನು ದಿನನಿತ್ಯ ಈ ಹುಡುಗಿಗೆ ತಂದುಕೊಡುವ ಸಂದರ್ಬದಲ್ಲಿ ಇಬ್ಬರಿಗೂ ಪರಿಚಯವಾಗುತ್ತದೆ.. ಆಗ ಅನಿಲ್ ನಿಲಮ್ ಅವರಿಗೆ ಏಕೆ ನೀನು ಭಿಕ್ಷುಕಿಯಾದೆ ಎಂದು ಕೇಳುತ್ತಾನೆ.. ಆಗ ನೀಲಮ್ ನನ್ನ ತಂದೆ ತುಂಬಾ ವರ್ಷಗಳ ಹಿಂದೆ ನಿ’ಧನರಾದರು. ಇನ್ನು ನನ್ನ ತಾಯಿಗೆ ಆರೋಗ್ಯ ಸ’ಮಸ್ಯೆ.. ಕೆಲವು ದಿನಗಳು ಅಣ್ಣನ ಮನೆಯಲ್ಲಿ ಇದ್ದೆವೂ ಆದರೆ ಅಣ್ಣ ಅತ್ತಿಗೆಯ ಮಾತನ್ನು ಕೇಳಿ ನಮ್ಮಿಬ್ಬರನ್ನು ಆಚೆಗೆ ಹಾಕಿದ..

ಅಂದಿನಿಂದ ಇದುವರೆಗೂ ನನ್ನ ತಾಯಿಯನ್ನು ಸಾಕಲು ರಸ್ತೆಯ ಬದಿಯಲ್ಲಿ ಭಿಕ್ಷೆ ಬೇಡುತ್ತಿದ್ದೇನೆ ಎಂದು ಹೇಳುತ್ತಾರೆ.. ನೀಲಮ್ ಜೀವನದ ಕಥೆ ಕೇಳಿದ ಅನಿಲ್ ಅವರಿಗೆ ಕಣ್ಣಿರು ತುಂಬಿ ಬರುತ್ತದೆ.. ಆಗ ಅನಿಲ್ ಗೆ ಈ ಹುಡುಗಿಯ ಮೇಲೆ ಕರುಣೆ ಹಾಗು ಪ್ರೀತಿ ಹುಟ್ಟಲು ಶುರುವಾಗುತ್ತದೆ.. ಪ್ರತಿದಿನ ಲಾಕ್ ಡೌನ್ ಆದ 60 ದಿನಗಳಲ್ಲಿ ಇಬ್ಬರು ಬೇಟಿಯಾಗುತ್ತಾರೆ.. ಈಗೆ ಇವರಿಬ್ಬರ ನಡುವೆ ಒಂದು ಬಾಂಧವ್ಯ ಮೂಡುತ್ತದೆ ಆಗ ಅನಿಲ್ ನೀಲಮ್ ಅವರಿಗೆ ಭಿಕ್ಷೆ ಬೇಡುವುದನ್ನು ನಿಲ್ಲಿಸು ಎಂದು ಹೇಳುತ್ತಾರೆ.. ಆಗ ನೀಲಮ್ ನಾನು ಭಿಕ್ಷೆ ಬೇಡುವುದನ್ನು ನಿಲ್ಲಿಸಿದರೆ ನಾನು ಮತ್ತು ನನ್ನ ತಾಯಿ ಜೀವನ ಸಾಗಿಸುವುದು ಹೇಗೆ ಎಂದು ಹೇಳುತ್ತಾರೆ..

ಆಗ ಡ್ರೈವರ್ ನಾನು ನಿನ್ನನ್ನು ಮದುವೆಯಾಗುತ್ತೇನೆ.. ನಿನ್ನ ಜೊತೆ ನಿಮ್ಮ ತಾಯಿಯನ್ನು ಕೂಡ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಭಿಕ್ಷುಕಿಯ ಹುಡುಗಿಗೆ ಹೇಳುತ್ತಾನೆ.. ಅನಿಲ್ ಮಾತನ್ನು ಕೇಳಿದ ನೀಲಮ್ ಗೆ ನಂಬಲಾರದಷ್ಟು ಕುಷಿಯಾಗುತ್ತದೆ.. ನೀಲಮ್ ಅವರಿಗೂ ಕೂಡ ಅನಿಲ್ ಮೇಲೆ ತುಂಬಾ ಪ್ರೀತಿ ಇದ್ದ ಕಾರಣ ಇಬ್ಬರೂ ಗುರು ಹಿರಿಯರ ಮುಂದೆ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.. ಇವರಿಬ್ಬರ ನಿಷ್ಕಲ್ಮಶ ಪ್ರೀತಿ ಸದಾಕಾಲ ಈಗೆ ಇರಲಿ ಎಂದು ಎಲ್ಲರೂ ಆರೈಸೋಣ.. ಸ್ನೇಹಿತರೆ ಈ ನಿಜವಾದ ಸ್ಟೋರಿಯ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..