Advertisements

ಅನಿರುದ್ಧ್ ನಂತರ ಜೀ ಕನ್ನಡಕ್ಕೆ ಮತ್ತೊಬ್ಬ ಕನ್ನಡದ ಖ್ಯಾತ ನಟನ ಆಗಮನ! ಯಾರು ಆ ನಟ?

Cinema

ನಮಸ್ಕಾರ ವೀಕ್ಷಕರೇ ಕನ್ನಡ ಕಿರುತೆರೆ ಅನ್ನೋದು ಹೊಸ ಪ್ರತಿಭೆಗಳಿಗೆ ಮಾತ್ರವಲ್ಲ ಕನ್ನಡ ಚಿತ್ರರಂಗದ ನೂರಾರು ಹಿರಿಯ ಕಲಾವಿದರು ಗಳಿಗೆ ಜೀವನಕ್ಕೆ ಆಧಾರವಾಗಿದೆ! ಎಷ್ಟೋ ಪೋಷಕ ನಟ ನಟಿಯರು ಕನ್ನಡದ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಜೀವನ ನಿರ್ವಹಣೆ ಮಾಡುತ್ತಿರೋದು ಸುಳ್ಳಲ್ಲ ಹಾಗೆಯೇ ಈಗಿನ ಎಷ್ಟೋ ನಟ-ನಟಿಯರು ಸಹ ಸಿನಿಮಾ ಇಂಡಸ್ಟ್ರಿ ಕೈ ಹಿಡಿಯದಿದ್ದಾಗ ಕಿರುತೆರೆಗೆ ಬಂದು ಹೊಸ ಆರಂಭವನ್ನು ಮಾಡಿದ್ದು ಉಂಟು ಅದೇ ರೀತಿ ಕಳೆದ ಎರಡು ವರ್ಷದ ಹಿಂದೆ ನಟ ಅನಿರುದ್ಧ್ ಅವರು ಕನ್ನಡದ ಕಿರುತೆರೆಗೆ ಕಾಲಿಟ್ಟು ಕಿರುತೆರೆಯ ಸೆನ್ಸೇಷನಲ್ ಹೀರೋ ಎನಿಸಿಕೊಂಡರು ಇದೀಗ ಸ್ಯಾಂಡಲ್ ವುಡ್ ನ ಮತ್ತೊಬ್ಬ ಯುವ ನಟ ಕನ್ನಡದ ಕಿರುತೆರೆಗೆ ಕಾಲಿಟ್ಟಿದ್ದು ಹೊಸ ಆರಂಭವನ್ನು ಮಾಡಿದ್ದಾರೆ ಎನ್ನಬಹುದು ಅದು ಯಾರು ಅಂತ ಸಂಪೂರ್ಣ ಮಾಹಿತಿ ಓದಿ ನೋಡಿ

Advertisements

ಹೌದು ಇದೀಗ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಪ್ರಯತ್ನ ಪಟ್ಟರೂ ಸಹ ನಿರೀಕ್ಷೆ ಮಾಡಿದಷ್ಟು ಸಕ್ಸಸ್ ಸಿಗದ ಕಾರಣ ಕಿರುತೆರೆಗೆ ಯುವ ನಟರೊಬ್ಬರು ಕಾಲಿಡುತ್ತಿದ್ದಾರೆ ಹೌದು ಆ ನಟ ಮತ್ತ್ಯಾರು ಅಲ್ಲ ಎಸ್ ನಾರಾಯಣ್ ಅವರ ಪುತ್ರ ಪಂಕಜ್ ಹೌದು ಎಸ್ ನಾರಾಯಣ್ ಅವರು ಸ್ಯಾಂಡಲ್ ವುಡ್ ನ ದೊಡ್ಡ ಸ್ಟಾರ್ ನಿರ್ದೇಶಕನಾಗಿ ಹೆಸರು ಮಾಡಿದ್ದು ನಟನಾಗಿಯೂ ಕೂಡ ಗುರುತಿಸಿಕೊಂಡಿದ್ದಾರೆ ಇತ್ತ ಶುರುವಿನಲ್ಲಿ ಮಗನಿಗಾಗಿ ಸಾಕಷ್ಟು ಸಿನಿಮಾಗಳನ್ನು ತಾವೇ ಮಾಡಿದ್ದರೂ ಸಹ ಕೆಲವೊಂದು ಹೆಸರು ಮಾಡಿದರು ಪಂಕಜ್ ಭದ್ರವಾಗಿ ಸ್ಯಾಂಡಲ್ ವುಡ್ ನಲ್ಲಿ ವೃತ್ತಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಲಿಲ್ಲ ಬಹಳಷ್ಟು ಸೋಲುಗಳನ್ನು ಕಾಣುವಂತಾಯಿತು ನಂತರ ಕೆಲ ವರ್ಷದ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಒಡೆಯ ಸಿನಿಮಾದಲ್ಲಿ ತಮ್ಮನ ಪಾತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಂಬ್ಯಾಕ್ ಮಾಡಿದರು

ಆದರೆ ಇದೀಗ ಕಿರುತೆರೆಗೆ ಮುಖ ಮಾಡಿದ್ದಾರೆ ಹೌದು ಕೆಲವು ತಿಂಗಳ ಹಿಂದಷ್ಟೇ ಮೈಸೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಪಂಕಜ್ ಅವರು ಇದೀಗ ಕಿರುತೆರೆ ಮೂಲಕ ತಮ್ಮ ವೃತ್ತಿ ಬದುಕನ್ನು ಮತ್ತೆ ಪುನರಾರಂಭ ಮಾಡಿದ್ದಾರೆ ಹೌದು ಜೀ ಕನ್ನಡ ವಾಹಿನಿಯಲ್ಲಿ ಅದಾಗಲೇ ಹಿಟ್ ಆಗಿರುವ ಪಾರು ಧಾರವಾಹಿಯಲ್ಲಿ ವೈದ್ಯನ ಪಾತ್ರದ ಮೂಲಕ ಧಾರವಾಹಿಗೆ ಎಂಟ್ರಿ ನೀಡಿರುವ ಪಂಕಜ್ ಗಮನ ಸೆಳೆದಿದ್ದಾರೆ ಮುಂಬರುವ ದಿನಗಳಲ್ಲಿ ಹೊಸ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಸಹ ಕೇಳಿಬರುತ್ತಿವೆ ಒಟ್ಟಿನಲ್ಲಿ ಕಿರುತೆರೆ ಮೂಲಕ ಮತ್ತೆ ಕಲಾ ಬದುಕನ್ನು ಶುರುಮಾಡಿರುವ ಪಂಕಜ್ ಅವರಿಗೆ ಸ್ನೇಹಿತರು ಶುಭಕೋರಿದ್ದಾರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ..