Advertisements

ಅಯೋಧ್ಯೆ ಶ್ರೀ ರಾಮನ ಮಂದಿರ ನಿರ್ಮಾಣಕ್ಕೆ ಕರುನಾಡಿನ ಬೆಟ್ಟದ ಕಲ್ಲಿನ ಬಳಕೆ, ಈ ಬೆಟ್ಟ ಯಾವುದು ಗೊತ್ತಾ?

Temples

ಅಯೋದ್ಯೆಯ ಶ್ರೀ ರಾಮನ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿದ್ದು ಕ್ಷಣಗಣನೆ ಆರಂಭ. ಈ ಸಂದರ್ಭವನ್ನು ನೋಡಲು ತುದಿಗಾಲಿನಲ್ಲಿ ನಿಂತಿದ್ದಾರೆ ಶ್ರೀರಾಮನ ಭಕ್ತರು. ಆಗಸ್ಟ್ 5 ರಂದು ಶ್ರೀ ರಾಮನ ಮಂದಿರದ ಭೂಮಿಯ ಪೂಜೆ ನೆರವೇರಲಿದ್ದು ಈ ಕಾರ್ಯಕ್ರಮಕ್ಕೆ ತಯಾರಿ ಜೋರಾಗಿದೆ.

Advertisements

ಇನ್ನೂ ಅಯೋದ್ಯೆಯ ಶ್ರೀ ರಾಮ‌ನ ಮಂದಿರ ನಿರ್ಮಾಣ ಕಾರ್ಯಕ್ಕೆ ಅಂಜನಾದ್ರಿ ಬೆಟ್ಟದ ಕಲ್ಲನ್ನು ಬಳಕೆ ಮಾಡಲುಗತ್ತದೆ ಎಂದು ತಿಳಿದು ಬಂದಿದೆ. ಇದರ ಬಗ್ಗೆ ಬಳ್ಳಾರಿ ನಗರ ಶಾಸಕರಾದ ಗಾಲಿ ಸೋಮಶೇಖರ್ ರೆಡ್ಡಿ ಅವರು ಸ್ವಷ್ಟನೆ ನೀಡಿದ್ದಾರೆ. ಶ್ರೀರಾಮನ ಪರಮ ಭಕ್ತ ಹನುಮಂತ ಜನಿಸಿದ ಎನ್ನಾಲದ ಸ್ಥಳವು ಇದಾಗಿದ್ದು ಮಂದಿರ ನಿರ್ಮಾಣಕ್ಕೆ ಈ ನೆಲದ ಕಲ್ಲನ್ನು ಬಳಕೆ ಮಾಡುತ್ತಿರುವುದು ಕನ್ನಡಿಗರಿಗೆ ಸಂತಸ ತಂದಿದೆ.

ಶಾಸಕರಾದ ಗಾಲಿ ಸೋಮಶೇಖರ್ ರೆಡ್ಡಿಯವರು ಬಳ್ಳಾರಿ ಹೊರವಲಯದ ಅಲ್ಲೀಪುರ ಕೆರೆಗೆ ಬಾಗಿನವನ್ನು ಅರ್ಪಿಸಿದ ಬಳಿಕ ಸುದ್ದಿಗಾರರ ಜೊತೆ ಶಾಸಕರು ಆಯೋದ್ಯೆಯ ರಾಮ ಮಂದಿರ ನಿರ್ಮಾಣದ ಬಗ್ಗೆ ಮಾತಾನಾಡಿದ್ದು ರಾಮ ಮಂದಿರ ನಿರ್ಮಾಣವಾಗುತ್ತಿರುವುದು ನಮಗೆಲ್ಲ ಖುಷಿಯನ್ನು ನೀಡಿದೆ.

ಅಂಜನಾದ್ರಿ ಬೆಟ್ಟದಲ್ಲಿ ಶ್ರೀರಾಮ, ವಾಯು, ಸುಗ್ರೀವ ನೆಲೆಸಿದ್ದರು ಎಂಬ ಪ್ರತೀತಿಯಿದೆ. ಹೀಗಾಗಿ ಅಂಜನಾದ್ರಿ ಬೆಟ್ಟದಿಂದ ಒಂದು ಕಲ್ಲನ್ನು ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಒಯ್ಯಲಾಗಿದೆ ನಾವು ರಾಮಮಂದಿರದಲ್ಲಿ ಅಂಜನಾದ್ರಿ ಬೆಟ್ಟದ ಕಲ್ಲನ್ನು ನಾವು ನೊಡಬಹುದು ಎಂದು ಸಚಿವರು ಹೇಳಿದ್ದಾರೆ.