Advertisements

ಕರ್ನಾಟಕ ಸಿಂಗಂ ಎಂದೇ ಪ್ರಖ್ಯಾತರಾಗಿದ್ದ ಮಾಜಿ ಐಪಿಎಸ್ ಅಣ್ಣಾಮಲೈ ಗೆ ಈಗ ಎಂಥ ಪೋಸ್ಟ್ ಸಿಕ್ಕಿದೆ ಗೊತ್ತಾ?

Kannada Mahiti

ಕರ್ನಾಟಕದ ಸಿಂಗಂ ಎಂದೇ ಪ್ರಖ್ಯಾತರಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈಗೆ ಸಿಕ್ತು ಭರ್ಜರಿ ಪೋಸ್ಟ್ ಏನು ಗೊತ್ತಾ?
ಅಣ್ಣಾಮಲೈ ಅಂದ್ರೆ ದುಷ್ಟರ ಪಾಲಿನ ಸಿಂಹಸ್ವಪ್ನವಾಗಿದ್ದರು, ಕರಾವಳಿ ಭಾಗದಲ್ಲಿ ಖಡಕ್ ಅಧಿಕಾರಿ ಎನಿಸಿಕೊಂಡು ಮಲೆನಾಡಿನಲ್ಲಿ ದಕ್ಷ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕರ್ನಾಟಕ ಸಿಂಗಂ ಇನ್ಮುಂದೆ ತಮಿಳುನಾಡು ಬಿಜೆಪಿಯ ರಾಜ್ಯಧ್ಯಕ್ಷರಾಗಿ ಕಾರ್ಯನಿರ್ವಹಿಸ್ತಾರೆ. ಎಸ್ ಅಣ್ಣಾಮಲೈ ಅವರು ಪೊಲೀಸ್ ಹುದ್ದೆಗೆ ಗುಡ್‌ಬೈ ಹೇಳಿ ರಾಜಕೀಯ ಪ್ರವೆಶ ಮಾಡಿದ್ದು ಹೊಸ ವಿಚಾರವೇನಲ್ಲ, ಕರ್ನಾಟಕದಲ್ಲಿ ಸ್ಪರ್ಧಿಸಬಹುದು ಎಂಬ ನಿರೀಕ್ಷೆಗಳಿದ್ದರೂ ಅವರು ಕೊನೆಗೆ ತಮಿಳುನಾಡಿನಲ್ಲಿ ಬಿಜೆಪಿ ಪ್ರವೇಶಿಸಿದ್ರು..

[widget id=”custom_html-3″]

Advertisements

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ವಿಧಾನಸಭಾ ಕ್ಷೇತ್ರವನ್ನು ಸ್ಪರ್ಧಿಸಿದ್ರು. ಆದ್ರೆ ಅಣ್ಣಾಮಲೈ ಭರ್ಜರಿಯಾಗಿ ಗೆಲ್ತಾರೆ ಅಂತ ಅಂದುಕೊಂಡಿದ್ದ ಬಿಜೆಪಿಯ ಲೆಕ್ಕಾಚಾರ ತಲೆಕೆಳಗಾಯ್ತು. ಹೌದು ಅರವಕುರಿಚಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಣ್ಣಾಮಲೈ ಪರಾಜಿತರಾದರು. ಆದರೂ ಕೂಡ ಅಣ್ಣಾಮಲೈ ಅವರ ವರ್ಚಸ್ಸು, ಸ್ವಲ್ಪವೂ ಕಡಿಮೆಯಾಗಿಲ್ಲ ಈ ಹಿನ್ನಲೆ ಅಣ್ಣಾಮಲೈ ಅವರನ್ನು ಈಗ ತಮಿಳುನಾಡಿನ ಬಿಜೆಪಿ ರಾಜ್ಯಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈ ಹಿಂದೆ ಡಾ. ಎಲ್ ಮುರುಗನ್ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು..

[widget id=”custom_html-3″]

ಆದರೆ ಮೋದಿ ಕ್ಯಾಬಿನೆಟ್‌ಗೆ ಎಲ್ ಮುರುಗನ್ ಅವರು ಆಯ್ಕೆಯಾಗಿದ್ದರಿಂದ ಅವರ ಸ್ಥಾನ ತೆರವಾಗಿದೆ. ಈ ಹಿನ್ನಲೆ ಈ ಸ್ಥಾನವನ್ನು ಅಣ್ಣಾಮಲೈ ಅವರು ತುಂಬಲಿದ್ದಾರೆ ಅಂತ ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾ ಅವರು ಸೂಚಿಸಿದ್ದಾರೆ. ಹೀಗಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಅರುಣ್ ಸಿಂಗ್ ಅವರು ತಮಿಳುನಾಡಿನ ನೂತನ ಬಿಜೆಪಿ ರಾಜ್ಯಧ್ಯಕ್ಷರಾಗಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕಾರ್ಯನಿರ್ವಹಿಸಲಿದ್ದಾರೆ ಅಂತ ಆದೇಶ ಹೊರಡಿಸಿದ್ದಾರೆ.