Advertisements

ಅಣ್ಣಯ್ಯ ಚಿತ್ರದ ಈ ನಾಯಕಿ ಈಗ ಎಲ್ಲಿದ್ದಾರೆ, ಹೇಗಿದ್ದಾರೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಸಿನಿಮಾ ಪ್ಯಾಮಿಲಿಗೆ ಸೇರಿದರೂ ಕೂಡ ಕೆಲವರು ದೊಡ್ಡದಾಗಿ ಅವರ ಬಗ್ಗೆ ಏನೂ ಕೂಡ ಹೇಳಿಕೊಳ್ಳುವುದಿಲ್ಲ. ಆ ರೀತಿ ನಟಿ ಮಧುಬಾಲ ಅವರು.. ಅಣ್ಣಯ್ಯ ಚಿತ್ರದ ಮೂಲಕ ಸ್ಯಾಂಡಲ್ವುಡ್ ನಲ್ಲಿ ತನ್ನದೇ ಆದ ಸ್ಟೈಲ್ ಮತ್ತು ನಟನೆಯ ಮೂಲಕ ಹೆಸರುವಾಸಿಯಾದ ನಟಿ ಎಂತಲೂ ಕೂಡ ಹೇಳಬಹುದು. ಜೊತೆಗೆ ರೋಜ ಚಿತ್ರದ ಮೂಲಕ ಇಡೀ ದಕ್ಷಿಣ ಭಾರತಕ್ಕೆ ಪೇಮಸ್ ಆದ ನಟಿ ಅಂದರೆ ಇವರೇ ಮಧುಬಾಲ ಅವರು.. ನಟಿ ಮಧುಬಾಲ ಅವರು 1982 ಮಾರ್ಚ್ 26 ರಂದು ಜನಿಸುತ್ತಾರೆ.

Advertisements

ಇನ್ನೂ ಇವರ ಮಾತೃಭಾಷೆ ತಮಿಳು.. ಆದರೆ ಇವರಿಗೆ ಕನ್ನಡ ಅಂದರೆ ಬಹಳ ಅಚ್ಚುಮೆಚ್ಚು. ಕನ್ನಡ ಸಿನಿಮಾ ಮಾತ್ರವಲ್ಲದೇ ತಮಿಳು, ತೆಲುಗು, ಹಿಂದಿ ಬಾಷೆಗಳಲ್ಲಿ ಅಭಿನಯಿಸಿ ಎಲ್ಲಾ ಚಿತ್ರರಂಗದಲ್ಲಿ ಸೈ ಎನಿಸಿಕೊಂಡಿದ್ದಾರೆ.. ಹೌದು ಅಷ್ಟರ ಮಟ್ಟಿಗೆ ತನ್ನ ಅಭಿನಯದ ಮೂಲಕ ಎಲ್ಲರ ಮನವನ್ನು ಗೆದ್ದಿದ್ದರು. ಇನ್ನೂ ಕನ್ನಡ ಹಿಟ್ ಚಿತ್ರ ಅಣ್ಣಯ್ಯ ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೊತೆ ನಟಿಸಿದ್ದರು.. ಈ ಚಿತ್ರ ಆ ಕಾಲಕ್ಕೆ ಬಹಳ ಪೇಮಸ್ ಆಗಿತ್ತು.

ಜೊತೆಗೆ ರನ್ನ ಚಿತ್ರದಲ್ಲಿ ಸುದೀಪ್ ಅವರ ಅತ್ತೆಯ ಪಾತ್ರದಲ್ಲಿ ಅಭಿನಯಿಸಿ ಮತ್ತೆ ಕನ್ನಡ ಸಿನಿಮಾದಲ್ಲಿ ಮಧುಬಾಲ ಅವರು ಕಾಣಿಸಿಕೊಂಡಿದ್ದರು. ಇನ್ನೂ ಬಾಲಿವುಡ್ ನಲ್ಲಿ ಹೆಗ್ಗಳಿಕೆಯನ್ನು ಗಳಿಸಿಕೊಂಡಿದ್ದ ಜನಪ್ರಿಯ ನಟಿ ಹೇಮಾ ಮಾಲಿನಿಯವರ ಅತ್ತೆ ಮಗಳೇ ನಟಿ ಮಧುಬಾಲ ಅವರು. ಇನ್ನೂ ಇವರು 1999 ರಲ್ಲಿ ಪೆಬ್ರವರಿ 19 ರಂದು ಆನಂದ್ ಶಹಾ ಅವರ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.. ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಕೂಡ ಇದ್ದಾರೆ. ಇನ್ನೂ ಈಗ ಚಿಕ್ಕ ಚಿಕ್ಕ ಪೋಷಕರ ಪಾತ್ರಗಳಲ್ಲಿ ಹಾಗೂ ಸೀರಿಯಲ್ ಗಳಲ್ಲಿ ನಟಿಸುತ್ತಾ ತನ್ನ ಕುಟುಂಬದೊಂದಿಗೆ ಸಂತೋಷದದಿಂದ ಜೀವನ ನಡೆಸುತ್ತಿದ್ದಾರೆ.