Advertisements

ಇರುವೆಗಳು ಯಾಕೆ ಒಂದೇ ಲೈನ್ ಪ್ರಕಾರ ಜೊತೆಯಾಗಿ ಹೋಗುತ್ತವೆ ಗೊತ್ತಾ?

Kannada Mahiti

ಈ ಇರುವೆಗಳೆಲ್ಲ ಯಾಕೆ ಸಾಲಾಗಿ ಹೋಗ್ತವೆ ಗೊತ್ತಾ? ಇರುವೆಗಳ ಸಾಲಾಗಿ ಹೋಗೋದಕ್ಕೆ ಅಸಲಿ ಕಾರಣವೇನು? ಗೊತ್ತಾ?
ಸಿಹಿ ತಿನಿಸುಗಳಿಗೆ ಮುತ್ತುವ, ಈ ಇರುವೆಗಳಿಗೆ ನಾವು ಎಷ್ಟು ಸಲ ಶಪಿಸಿಕೊಂಡಿಲ್ಲ, ಅಲ್ವಾ? ಸ್ವಲ್ಪದ ಡಬ್ಬಿಯ ಬಾಗಿಲು ತೆಗೆದ್ರು ತಕ್ಷಣ ಪ್ರತ್ಯಕ್ಷವಾಗುವ ಈ ಇವರುಗಳು ಎಲ್ಲಿಂದ ಬರ‍್ತಾವಪ್ಪ, ಅದು ಗುಂಪು ಗುಂಪಾಗಿ ಅಂತ ನಾವೇ ಪ್ರಶ್ನಿಸಿಕೊಂಡು ಇರುವೆ ಗುಂಪಿಗೆ ಶಪಿಸಿದ್ದು ಉಂಟು. ಇನ್ನು ಶಾಲೆಗಳಲ್ಲಿ ಮಾರ್ಚ್ಫಾಸ್ಟ್ ಮಾಡುವಾಗ ಸ್ವಲ್ಪ ಲೈನಲ್ಲಿ ಉಲ್ಟಾ ಪಲ್ಟಾ ನಿಂತರೂ ಪಿಟಿ ಟೀಚರ್ ಬೈಯೋದನ್ನ ನೀವು ಗಮನಿಸರಬೇಕು..

[widget id=”custom_html-3″]

Advertisements

ಜೊತೆಗೆ ಸರದಿ ಸಾಲು ಯಾವಾಗಲೂ ಇರುವೆಗಳು ಸಾಲಾಗಿ ಹೋಗ್ತಿರೋ ಹಾಗೆ ಇರಬೇಕು ಅಂತ ಹೇಳಿರೋದನ್ನು ಗಮನಿಸಿರಬಹುದು.. ಅಷ್ಟಕ್ಕೂ ಈ ಇರುವೆಗಳು ಸಾಲಾಗಿ ಗೆರೆ ಹಾಕಿಕೊಟ್ಟಂತೆ ಹೇಗೆ ಹೋಗ್ತಾವೆ ಗೊತ್ತಾ.. ಕಾರಣವೇನು ಹೇಳ್ತೀವಿ. ಈ ಜೇನಿನಲ್ಲಿ ಹೇಗೆ ರಾಣಿಜೇನು ಎಂತೆಲ್ಲ ಇರುತ್ತೋ ಹಾಗೇ ಇರುವೆಗಳಿಗೂ ಒಂದು ನಾಯಕನಿರುತ್ತಾನಂತೆ, ಆ ಇರುವೆ ಹೋಗ್ತಾ ಒಂದು ದ್ರವ್ಯವನ್ನು ಬಿಡುಗಡೆ ಮಾಡುತ್ತಂತೆ, ಆ ದ್ರವ್ಯದ ಆಧಾರದ ಮೇಲೆ ಉಳಿದ ಇರುವೆಗಳು ಸಹ ಹಿಂಬಾಲಿಸಿಕೊಂಡು ಬರುತ್ತವಂತೆ..

[widget id=”custom_html-3″]

ಈ ದ್ರವ್ಯವನ್ನೇ ಹಿಂಬಾಲಿಸಿ ಇರುವೆ ಹೋಗೋದ್ರಿಂದ ಅವುಗಳು ನೇರವಾದ ಸಾಲಿನಲ್ಲಿ ಹೋಗ್ತಾಯಿರುತ್ತವಂತೆ. ಈ ದ್ರವ್ಯಕ್ಕೆ ಪ್ಯಾರಾಮಾನ್ ಅಂತ ಕರೆಯುತ್ತಾರೆ. ಅಷ್ಟಕ್ಕೂ ನಿಮಗೆ ಈಗ ಈ ಇರುವೆಗಳು ಪ್ಯರಾಮಾನ್‌ನ್ನು ಯಾಕೇ ರಿಲೀಸ್ ಮಾಡ್ತಾವೆ ಅನ್ನೋ ಪ್ರಶ್ನೆ ಮೂಡಿರಬಹುದು,ಯಾಕಂದ್ರೆ ಇರುವೆಗಳು ಆಹಾರ ಅರಸಿ ಹೋಗುತ್ತಲೇ ಇರುವಾಗ ಅವುಗಳಿಗೆ ಆಹಾರ ದೊರಕಿದ ಬಳಿಕ ವಾಪಾಸ್ ತಮ್ಮ ತಮ್ಮ ಗೂಡುಗಳಿಗೆ ಹೋಗಲಿಕ್ಕೆ ನೆರವಾಗಲೀ ಅನ್ನೋ ಕಾರಣಕ್ಕೆ ಈ ಧ್ರವ್ಯವನ್ನು ಬಿಡುಗಡೆ ಮಾಡ್ತೇವೆ, ಅವುಗಳ ಆಧಾರದ ಮೇಲೆ ಪುನಃ ತಮ್ಮ ಗೂಡುಗಳಿಗೆ ಹಿಂತಿರುಗತ್ತವೆಯಂತೆ.