ನಮಸ್ತೆ ಸ್ನೇಹಿತರೆ, ಹೃದಯ ಹೃದಯ ಚಿತ್ರದ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಹೃದಯ ಗೆದ್ದ ಚೆಲುವೆ ನಟಿ ಅನು ಪ್ರಭಾಕರ್.. ತಮ್ಮ ಮುಗ್ದ ಅಭಿನಯದಿಂದ ಕನ್ನಡ ಪ್ರೇಕ್ಷಕರ ಮನಗೆದ್ದರು. ಅನು ಪ್ರಭಾಕರ್ ಅವರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಮೇಶ್ ಅರವಿಂದ್, ರಾಮ್ ಕುಮಾರ್ ಇನ್ನೂ ಮುಂತಾದ ಸ್ಟಾರ್ ಹೀರೋಗಳ ಜೊತೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಇನ್ನೂ ಅನು ಪ್ರಭಾಕರ್ ಅವರು ಮಾಡಿರುವ ಮಾಡೆಲ್, ಹಾಗೂ ನಟ ರಘು ಮುಖರ್ಜಿ ಅವರನ್ನು 2016 ರಲ್ಲಿ ಎರಡನೇ ಮದುವೆಯಾದರು..

ಇಬ್ಬರಿಗೂ ಕೂಡ ಇದು ಎರಡನೆ ಮದುವೆಯಾಗಿದೆ. ಎರಡು ಕುಟುಂಬದವರು ಹಾಗೂ ಅವರ ಆಪ್ತ ಸಮ್ಮುಖದಲ್ಲಿ ಈ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟರು. ಇನ್ನೂ 2018 ಆಗಸ್ಟ್ 15 ರಂದು ಅನು ಪ್ರಭಾಕರ್ ಅವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದರು.. ಇನ್ನೂ ತನ್ನ ಮುದ್ದು ಮಗಳ ಪೊಟೊಗಳನ್ನು ಅನು ಪ್ರಭಾಕರ್ ಹಾಗು ರಘು ಮುಖರ್ಜಿ ದಂಪತಿಗಳು ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಾಗಾಗ ಹಂಚಿಕೊಳ್ಳುತ್ತಾ ಇರುತ್ತಾರೆ.

ಅನು ಪ್ರಭಾಕರ್ ಹಾಗು ರಘು ಮುಖರ್ಜಿ ಅವರು ತುಂಬಾ ಅತ್ಯುನ್ನತ ಪ್ರತಿಭೆಗಳಾಗಿದ್ದು ಸ್ಯಾಂಡಲ್ವುಡ್ ನ ಸುಂದರ ಜೋಡಿಗಳಲ್ಲಿ ಈ ದಂಪತಿ ಜೋಡಿ ಕೂಡ ಒಂದಾಗಿದೆ. ಇನ್ನೂ ಅನು ಪ್ರಭಾಕರ್ ಹಾಗು ರಘು ಮುಖರ್ಜಿ ಅವರು ಪ್ರೀತಿಸಿ ಮದುವೆಯಾಗಿದ್ದು ಈ ದಂಪತಿಯ ಮುದ್ದಾದ ಮಗಳು ನಂದನ.. ಈ ಪೊಟೊದಲ್ಲಿ ನೀವು ಅನು ಪ್ರಭಾಕರ್ ಅವರ ಸುಂದರ ಕುಟುಂಬವನ್ನು ನೋಡಬಹುದು.