Advertisements

ಬಿಗ್ ಬಾಸ್ ಮನೆಗೆ ಖ್ಯಾತ ಸೀರಿಯಲ್, ಜೊತೆ ಜೊತೆಯಲಿ ಅನು ಸಿರಿಮನೆ.. ನೋಡಿ..

Entertainment

ನಮಸ್ತೆ ಸ್ನೇಹಿತರೆ, ಕನ್ನಡದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಅಂದರೆ ಅದು ಬಿಗ್ ಬಾಸ್ ಶೋ.. ಇನ್ನೇನು ಸ್ವಲ್ಪ ದಿನದಲ್ಲಿ ಬಿಗ್ ಬಾಸ್ ಪ್ರಾರಂಭವಾಗಲಿದೆ. ಪ್ರತೀ ಬಾರಿ ಬಿಗ್ ಬಾಸ್ ನ ಎಲ್ಲಾ ಸೀಸನ್ ಗಳು ಅತ್ಯುತ್ತಮ ಟಿ.ಆರ್.ಪಿ ಯನ್ನು ಪಡೆದುಕೊಂಡು ಜನರಿಂದ ಉತ್ತಮ ಪ್ರತಿಕ್ರಿಯೆ ಹಾಗೂ ಮೆಚ್ಚುಗೆ ಕೂಡ ಪಡೆದುಕೊಳ್ಳುತ್ತಿದೆ. ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮ ಅತಿದೊಡ್ಡ ಮಟ್ಟದಲ್ಲಿ ಬರೋದಿಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಅದರಲ್ಲಿಯೂ ಅತ್ಯಂತ ಹೆಚ್ಚು ಪೇಮಸ್ ಆಗಿರುವ ಸೆಲೆಬ್ರಿಟಿಗಳೇ ಬಿಗ್ ಬಾಸ್ ಮನೆಗೆ ಹೋಗಲು ಈ ಬಾರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಬಹುದು.

Advertisements

ವೀಕ್ಷಕರನ್ನು ಸೆಳೆಯಲು ಇಂತಹ ದೊಡ್ಡ ಪ್ರಯತ್ನವನ್ನು ಆಯೋಜಕರು ಮಾಡುತ್ತಿದ್ದಾರೆ.. ಕಳೆದ ವರ್ಷ ಬಿಗ್ ಬಾಸ್ ಆಯೋಜಕರು ಮಾಡುತ್ತಿದ್ದಾರೆ. ಕಳೆದ ವರ್ಷ ಬಿಗ್ ಬಾಸ್ ಪ್ರಸಾರ ಆಗಿರಲಿಲ್ಲ.. ಚೀನಾ ಖಾಯಿಲೆ ಹಾಗೂ ಲಾಕ್ ಡೌನ್ ಕಾರಣದಿಂದ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರವಾಗಿರಲಿಲ್ಲ. ಆದರೆ ಈ ಬಾರಿ ಎಲ್ಲಾ ತಯಾರಿ ಮಾಡಿಕೊಂಡು ಎಲ್ಲಾ ಸೆಲೆಬ್ರಿಟಿಗಳು ಕೂಡ ಅತ್ಯಂತ ಉತ್ಸಾಹದಿಂದ ಎಲ್ಲಾ ವೀಕ್ಷಕರ ಗಮನ ಸೆಳೆಯಲು ಮುಂದಾಗಿದ್ದಾರೆ..

ಕಿರುತೆರೆಯಲ್ಲಿ ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿರುವ ಅನೇಕ ಧಾರವಾಹಿಗಳ ತಂಡ ಅನೇಕ ಕಲಾವಿದರಲ್ಲಿ ಹಲವರು ಹೋಗುತ್ತಿದ್ದಾರೆ ಅಂತ ಹೇಳಲಾಗುತ್ತಿದೆ. ಯಾಕೆಂದರೆ ಬಿಗ್ ಬಾಸ್ ಕಾರ್ಯಕ್ರಮವನ್ನು ಸಣ್ಣ ಮಕ್ಕಳಿಂದ ಹಿಡಿದು ಅತ್ಯಂತ ಹಿರಿಯ ವಯಸ್ಸಿನವರು ಕೂಡ ಬಿಗ್ ಬಾಸ್ ಶೋವನ್ನು ನೋಡುತ್ತಿರುತ್ತಾರೆ.. ಈಗಾಗಿ ವೀಕ್ಷಕರನ್ನು ಆಕರ್ಷಿಸಲು ಅತೀ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಹೋಗಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಕಿರುತೆರೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿ ಇರುವಂತಹ ಜೊತೆ ಜೊತೆಯಲ್ಲಿನ ಆರ್ಯವರ್ಧನ್ ಪಾತ್ರಧಾರಿ, ಅನಿರುಧ್ ಅವರು ಈ ಬಾರಿ ಬಿಗ್ ಬಾಸ್ ಮನೆಗೆ ಬರುತ್ತಾರೆ ಎಂದು ಸುದ್ದಿಯೊಂದು ಕೇಳಿ ಬಂದಿತ್ತು.. ಆದರೆ ಈ ಸುದ್ದಿ ಸುಳ್ಳು ಅಂತ ಹೇಳಲಾಗುತ್ತಿದೆ. ಕಾರಣ ಜೊತೆ ಜೊತೆಯಲಿ ಸೀರಿಯಲ್ ನಿಂದ ಅನಿರುಧ್ ಬದಲಾಗಿ ಅನು ಸಿರಿಮನೆ ಖ್ಯಾತಿಯ ಮೇಘ ಶೆಟ್ಟಿ ಅವರು ಬಿಗ್ ಬಾಸ್ ಮನೆಗೆ ಹೋಗುತ್ತಾರೆಂದು ಸುದ್ದಿಯೊಂದು ಕೇಳಿ ಬಂದಿದೆ.. ಇದಕ್ಕೆ ಸಂಬಂಧಪಟ್ಟಂತೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಹಾಗೂ ಸುದ್ದಿ ಕೇಳಿ ಬರುತ್ತಿದೆ.

ಅನು ಸಿರಿಮನೆ ಬಿಗ್ ಬಾಸ್ ಗೆ ಹೋದರೆ ತುಂಬಾ ಚೆನ್ನಾಗಿರುತ್ತೆ ಅಂತ ಪ್ರತಿಕ್ರಿಯೆ ಕೂಡ ಕೇಳಿ ಬರುತ್ತಿದೆ.. ಯಾಕೆಂದರೆ ಅವರ ನಟನೆಯನ್ನು ನೋಡಿ. ಬಹಳಷ್ಟು ಜನರನ್ನು ಇಷ್ಟಪಟ್ಟಿದ್ದಾರೆ, ಈಗ ಅವರ ವ್ಯಕ್ತಿತ್ವ ಬಗ್ಗೆ ಅತಿ ಹೆಚ್ಚು ತಿಳಿದುಕೊಳ್ಳಲು ಜನರು ಇಷ್ಟ ಪಡುತ್ತಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಜೊತೆ ಜೊತೆಯಲಿ ಸೀರಿಯಲ್ ನ ರೀಲ್ ರೋಲ್ ನಲ್ಲಿ ಅಭಿನಯಿಸುತ್ತಿರುವ ಮೇಘಾ ಶೆಟ್ಟಿ ಅವರು ಬ್ರೇಕ್ ತೆಗೆದುಕೊಂಡು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಾರೋ ಇಲ್ಲವೋ ಕಾದು ನೋಡ ಬೇಕಾಗಿದೆ.