Advertisements

ಶಾಲೆಗೆ ಲೇಟಾಗಿ ಬಂದ ಕಾರಣ ಸ್ಟೂಡೆಂಟ್ ಗೆ ಶಿಕ್ಷೆ ನೀಡಿದ ಟೀಚರ್, ನಂತರ ಅವನ ಸ್ಥಿತಿ ನೋಡಿ ಆ ಟೀಚರ್ ಮಾಡಿದ್ದೇನು.. ಈ ಹುಡುಗ ಮುಂದೆ ಏನಾದ ಅಂತ ಕೇಳಿದರೆ! ನಿಜಕ್ಕೂ ರೋಚಕ.

Inspire Kannada Mahiti

ಒಂದು ಶಾಲೆ ಆ ಶಾಲೆಯಲ್ಲಿ ಒಬ್ಬರು ಶಿಸ್ತಿನ ಶಿಕ್ಷಕರು. ಒಬ್ಬ ವಿದ್ಯಾರ್ಥಿ ಮಾತ್ರ ಪ್ರತಿದಿನ ಶಾಲೆಗೆ ತಡವಾಗಿ ಬರುತಿದ್ದ . ಅಂದು ಎಂದಿನಂತೆ ಆ ವಿದ್ಯಾರ್ಥಿ ಶಾಲೆಗೆ ತಡವಾಗಿ ಬಂದ. ಇದರಿಂದ ಕೋಪಗೊಂಡ ಶಿಕ್ಷಕರು ಅವನನ್ನು ದಂ’ಡಿಸಿ ತರಗತಿಯ ಹೊರಗೆ ನಿಲ್ಲುವಂತೆ ಹೇಳಿದರು. ಶಾಲೆಯ ಕೊಠಡಿಯ ಹೊರಗೆ ನಿಂತಿದ್ದ ವಿದ್ಯಾರ್ಥಿ ಕಿಟಿಕಿಯಿಂದ ನೋಡುತ್ತಾ ಏನೋ ಬರೆದಿಕೊಳ್ಳುತಿದ್ದ. ಇತ್ತ ಶಿಕ್ಷಕರು ಪಾಠ ಮುಂದುವರೆಸಿದರು. ಸ್ವಲ್ಪ ಸಮಯದ ಬಳಿಕ ಹೊರಗೆ ನಿಂತಿದ್ದ ಆ ವಿದ್ಯಾರ್ಥಿಯನ್ನು ಗಮನಿಸಿದ ಶಿಕ್ಷಕರು ಹೊರಗೆ ಹೋಗಿ ವಿಚಾರಿಸಿದರು.

Advertisements

ಆ ಹುಡುಗ ಕಿಟಕಿಯಿಂದ ಇಣುಕಿ ನೋಡಿಯೇ ಕಪ್ಪು ಹಲಗೆಯ ಮೇಲೆ ಬರೆದಿದ್ದ ಪಾಠವನ್ನು ಎಲ್ಲಾ ವಿದ್ಯಾರ್ಥಿಗಳಿಗಿಂತ ಚೆನ್ನಾಗಿ ಬರೆದುಕೊಂಡಿದ್ದ. ಇದನ್ನು ನೋಡಿ ಶಿಕ್ಷಕರಿಗೆ ಸಂತೋಷವಾಯಿತು. ನೀನು ಇಷ್ಟು ಒಳ್ಳೆಯ ವಿದ್ಯಾರ್ಥಿ ಆದರೆ ಶಾಲೆಗೆ ಏಕೆ ತಡವಾಗಿ ಬರುತ್ತೀಯ ಎಂದು ಪ್ರಶ್ನಿಸಿದರು. ನನ್ನ ತಾಯಿಗೆ ಆರೋಗ್ಯ ಸರಿ ಇಲ್ಲ. ಅಡುಗೆಗೆ ನೀರು ತರಲು ಬಹಳ ದೂರ ಹೋಗಬೇಕು. ಪ್ರತೀ ದಿನ ಬೆಳಗ್ಗೆ ನೀರು ತಂದು ಅಡುಗೆ ಮಾಡಿ ನನ್ನ ತಾಯಿಗೆ ತಿನ್ನಿಸಿ ನಾನೂ ತಿಂದು ಡಬ್ಬಿ ಕಟ್ಟಿಕೊಂಡು ಶಾಲೆಗೆ ಓಡಿ ಬರುತ್ತೇನೆ ಎಂದು ಹುಡುಗ ಉತ್ತರಿಸಿದ.

ಅವನ ಮನೆಗು ಶಾಲೆಗು 6 ಕಿಲೋಮೀಟರ್ ದೂರ. ಅವನು ದಿನವೂ ಓಡುತ್ತಲೇ ಶಾಲೆಗೆ ಬರುತಿದ್ದ . ಆದರಿಂದ ಶಾಲೆಗೆ ಬರಲು ಅವನಿಗೆ ತಡವಾಗುತಿತ್ತು. ಇದನ್ನು ತಿಳಿದ ಶಿಕ್ಷಕರಿಗೆ ಕಣ್ಣಿಂದ ನೀರು ಬಂತು. ಅವರು ಹೇಳಿದರು…ಇನ್ನುಮುಂದೆ ನೀನು ತಡವಾಗಿ ಬಂದರೂ ಪರವಾಗಿಲ್ಲ. ಆದರೆ ದಿನವೂ ಶಾಲೆಗೆ ಬಾ. ಚೆನ್ನಾಗಿ ಓದು. ಜೀವನದಲ್ಲಿ ಏನಾದರೂ ಸಾಧಿಸಿ ಎಂದು ಗುರುಗಳು ಬಾಲಕನಿಗೆ ಹೇಳಿದರು. ಮುಂದೊಂದು ದಿನ ಆ ಹುಡುಗ ಸಾಧಿಸಿದ್ದು ಕಡಿಮೆಯಲ್ಲ.

ನಮ್ಮ ದೇಶದ ಉಪರಾಷ್ಟ್ರಪತಿಯಾದರು, ನಂತರ ರಾಷ್ಟ್ರ ಪತಿ ಹುದ್ದೆ ಅಲಂಕರಿಸಿದರು. ಅವರು ಬೇರೆ ಯಾರೂ ಅಲ್ಲ ನಮ್ಮ ದೇಶದ ಮಾಜಿ ರಾಷ್ಟ್ರ ಪತಿ ಕೆ ನಾರಾಯಣ್ ಅವರು. ಕೇರಳದ ಪುಟ್ಟ ಗ್ರಾಮದಲ್ಲಿ ಜನಿಸಿ, ಬಡತನ ಕಷ್ಟದಲ್ಲಿ ಬೆಳೆದ ಇವರು ಮಾಹನ್ ಸಾಧಕರಾದರು. ಚಿಕ್ಕ ಪುಟ್ಟ ವಿಷಯಕ್ಕೂ ನಮಗೆ ಕಷ್ಟವಿದೆ, ಬಡತನವು ನಮ್ಮ ಸಾಧನೆಗೆ ಅಡ್ಡಿ ಇದೆ ಎಂದುಕೊಳ್ಳುವ ಯುವಕರು ಇವರ ಜೀವನ ಚರಿತ್ರೆ, ಸಾಧನೆ ತಿಳಿಯಬೇಕು.
ಮನಸಿದ್ದರೆ ಮಾರ್ಗ ಎಂಬುದು ಸುಳ್ಳಲ್ಲ. ಶ್ರಮದ ಹಾದಿಯೇ ಸಾಧನೆಯ ತೀರ ಸೇರಿಸಬಲ್ಲದು.