Advertisements

ಅರಣ್ಯ ಇಲಾಖೆಯ 8437 ಹುದ್ದೆ ಖಾಲಿ! ಆಸಕ್ತಿ ಇದ್ದರೆ ಈ ರೀತಿ ಅರ್ಜಿ ಸಲ್ಲಿಸಿ..

Kannada Mahiti

ಸರ್ಕಾರಿ ಪಡೆಯುವುದು ಪ್ರತಿಯೊಬ್ಬರ ಕನಸ್ಸು. ಭಾರತೀಯ ಆಡಳಿತ ಮುಖ್ಯ ಇಲಾಖೆಯಲ್ಲೊಂದಾದ ಅರಣ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ಇಲಾಖೆಯಿಂದ 2022 ನೇ ಸಾಲಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ. 8437 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ಈ ಅಧಿಸೂಚನೆ ಯಾವುದೆಲ್ಲ ಮಾಹಿತಿ ಒಳಗೊಂಡಿದೆ ಎಂದು ತಿಳಿಯಬೇಕಾದರೆ ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ.. ಅರಣ್ಯ ಇಲಾಖೆಯ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವವರ ವಯೋಮಿತಿ ಮೊದಲನೇದಾಗಿ ಫಾರೆಸ್ಟ್ ಗಾರ್ಡ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18ರಿಂದ 27 ವರ್ಷ ಒಳಗಿನವರಾಗಿರಬೇಕು. ಇವರು ಪಿಯುಸಿ ಪಾಸಾಗಿದ್ದು ಸ್ಥಳೀಯ ಭಾಷೆಗಳನ್ನು ಬಲ್ಲವರಾಗಿರಬೇಕು. ಎರಡನೆಯದಾಗಿ ಫೀಲ್ಡ್ ಸರ್ವೇಯರ್ 30 ವರ್ಷ ವಯೋಮಿತಿ ಹೊಂದಿದ್ದು, ಈ ಹುದ್ದೆಗೆ ಯಾವುದೇ ಪದವಿ ಪಡೆದವರು ಅರ್ಜಿಯನ್ನು ಸಲ್ಲಿಸಬಹುದು.

Advertisements

ಮೂರನೆಯದಾಗಿ ವರ್ಲ್ಡ್ ಲೈಫ್ ಗಾರ್ಡ್ ಹುದ್ದೆಗೆ ಅರ್ಜಿ ಸಲ್ಲಿಸುವವರು 18 ರಿಂದ 27 ವರ್ಷ ಒಳಗಿನವರಾಗಿರಬೇಕು ಮತ್ತು ಹತ್ತನೇ ತರಗತಿ ಪಾಸಾಗಿರಬೇಕು ಈ‌ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ಈ ಹುದ್ದೆಗಳ‌ ಕುರಿತು ಅರ್ಜಿ ಶುಲ್ಕ ನೋಡುವುದಾದರೆ ಜನರಲ್ ಕೆಟಗರಿ, ಓಬಿಸಿ ಮತ್ತು ಇ ಡಬ್ಲ್ಯೂ ಎಸ್ ಅಭ್ಯರ್ಥಿಗಳು 100 ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿಸಬೇಕು ಹಾಗೂ ಎಸ್ಸಿಎಸ್ಟಿ , ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯತಿ ಇದ್ದು ಅರ್ಜಿ ಶುಲ್ಕ ಪಾವತಿಸುವ ಅವಶ್ಯಕತೆಯಿಲ್ಲ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಲ್ಲಿ ಪುರುಷ ಅಭ್ಯರ್ಥಿಗಳು 163 ಸೆಂಟಿಮೀಟರ್ ಎತ್ತರ ಮತ್ತು ಮಹಿಳೆಯರು 150 ಸೆಂಟಿಮೀಟರ್ ಎತ್ತರವಾಗಿರಬೇಕು. ಗಂಡು ಮಕ್ಕಳು 84 ಸೆಂಟಿಮೀಟರ್ ಎದೆ ಸುತ್ತಳತೆ ಹಾಗೂ ಹೆಣ್ಣುಮಕ್ಕಳು 79 ಸೆಂಟಿಮೀಟರ್ ಎದೆ ಸುತ್ತಳತೆ ಹೊಂದಿರಬೇಕು.

ಗಂಡು ಮಕ್ಕಳಿಗೆ ನಾಲ್ಕು ತಾಸಿಗೆ 25 ಕಿಲೋಮೀಟರ್ ಮತ್ತು ಹೆಣ್ಣುಮಕ್ಕಳಿಗೆ ನಾಲ್ಕು ತಾಸಿಗೆ 16 ಕಿಲೋ ಮೀಟರ್ ಓಟ ಇರುತ್ತದೆ. ದೈಹಿಕ ಪರೀಕ್ಷೆಯನ್ನು ಮಾಡಲಾಗುತ್ತದೆ ನಂತರ ಲಿಖಿತ ಪರೀಕ್ಷೆಯ ತೆಗೆದುಕೊಳ್ಳಲಾಗುತ್ತದೆ ನಂತರ ನೇರ ಸಂದರ್ಶನ ಮತ್ತು ದಾಖಲಾತಿ ಪರಿಶೀಲನೆ ಮಾಡುವುದರ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಫೀಲ್ಡ್ ಸರ್ವೇಯರ್ 36900, ಫೋರೆಸ್ಟ್ ಗಾರ್ಡ್ ಗಳಿಗೆ 30200 , ವೈಲ್ಡ್ ಲೈಫ್ ಗಾರ್ಡ್ ಅವರಿಗೆ 28000 ಮಾಸಿಕ ವೇತನ ಇರುತ್ತದೆ. ಈಗಾಗಲೇ ಆನ್ಲೈನ್ ರಿಜಿಸ್ಟ್ರೇಷನ್ ಪ್ರಾರಂಭವಾಗಿದ್ದು 19 ಫೆಬ್ರುವರಿ 2022 ವರೆಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನೀವು ಅರಣ್ಯ ಇಲಾಖೆಯಲ್ಲಿ ಹುದ್ದೆ ಪಡೆಯಬೇಕಾದರೆ ಇಂದೆ ಅರ್ಜಿ ಸಲ್ಲಿಸಿ.