Advertisements

ಅರ್ಜುನ್ ಸರ್ಜಾ ಅವರು ತಮ್ಮ ಫಾರ್ಮ್ ಹೌಸ್ ನಲ್ಲಿ ಹೇಗಿರುತ್ತಾರೆ ಒಮ್ಮೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಅರ್ಜುನ್ ಸರ್ಜಾ.. ಇವರು ಜನಿಸಿದ್ದು ಆಗಸ್ಟ್ 15, 1962 ಮಧುಗಿರಿಯಲ್ಲಿ. ತಂದೆ ಶಕ್ತಿ ಪ್ರಸಾದ್‌.. ಇವರು ಕೂಡ ನಟರು, ತಾಯಿ ಲಕ್ಷ್ಮೀ.. ಇವರು ಶಿಕ್ಷಕಿ. ಅಣ್ಣ ಕಿಶೋರ್ ಸರ್ಜಾ ನಿರ್ಮಾಪಕರು. ಇವರು ಪ್ರಸಿದ್ಧ ಕಲಾವಿದರಾದ ಶಕ್ತಿ ಪ್ರಸಾದ್ ಅವರ ಮಗ. ಕನ್ನಡ ಚಿತ್ರರಂಗದಲ್ಲಿ ಬಾಲನಟ ನಾಯಕರಾಗಿ ಪಾತ್ರ ನಿರ್ವಹಿಸಿದ್ದಾರೆ.. ಆದರೆ ಇವರಿಗೆ ಅವಕಾಶಗಳು ತಮಿಳು ಚಿತ್ರರಂಗದಲ್ಲಿ ಹೆಚ್ಚಾಗಿ ದೊರೆತ ಕಾರಣ. ಅಲ್ಲೇ ಜನಪ್ರಿಯ ನಾಯಕ ನಟ ಮತ್ತು ನಿರ್ದೇಶಕರಾಗಿ ಹೆಸರು ಗಳಿಸಿದ್ದಾರೆ.

Advertisements

1981 ರಲ್ಲಿ ತೆರೆಕಂಡ ಸಿಂಹದ ಮರಿ ಸೈನ್ಯ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶ ಮಾಡಿದ್ದಾರೆ. ಅಲ್ಲದೇ ಅರ್ಜುನ್ ಸರ್ಜಾ ಅವರು ನಾಯಕನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.. ಇವರು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹೀಗೆ ಹಲವಾರು ಬಾಷೆಗಳಲ್ಲಿ ನಟಿಸಿದ್ದಾರೆ. ಇವರ ಪುತ್ರಿ ಐಶ್ವರ್ಯ ಅವರನ್ನ ಪ್ರೇಮ ಬರಹ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು..

ಅರ್ಜುನ್ ಸರ್ಜಾ ಅವರು ಬಾಲ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಅಂದಿನಿಂದ ಇಂದಿನವರೆಗೂ ಚಿತ್ರರಂಗದಲ್ಲಿ ಹಿಂತಿರುಗಿ ನೋಡಲೇ ಇಲ್ಲ‌. ಇನ್ನೂ ಅರ್ಜುನ್ ಸರ್ಜಾ ಅವರ ಪತ್ನಿ ಆಶಾರಾಣಿ ಅವರು ಒಂದು ಕಾಲದಲ್ಲಿ ನಾಯಕ ನಟಿಯಾಗಿ ಮಿಂಚಿದವರು. ಅರ್ಜುನ್ ಸರ್ಜಾ ಅವರು ಚೆನ್ನೈನಲ್ಲಿ ವಾಸವಾಗಿದ್ದು ಅಲ್ಲಿಯೇ ದುಬಾರಿ ಬೆಲೆ ಬಾಳುವಂತಹ ಲಕ್ಸುರಿ ಮನೆಯನ್ನು ಹೊಂದಿದ್ದಾರೆ‌.. ಹಾಗೆ ಫಾರ್ಮ್ ಹೌಸ್ ಇದ್ದು ಇದರಲ್ಲಿ ಸಾಕು ಪ್ರಾಣಿಗಳನ್ನು ಸಾಕುತ್ತಿದ್ದಾರೆ..