Advertisements

3 ದಿನಗಳ ಬಳಿಕ ಅಳಿಯನನ್ನ ಕಳೆದುಕೊಂಡ ನೋವನ್ನ ಒಮ್ಮೆಲೇ ಹೊರಹಾಕಿದ ಅರ್ಜುನ್ ಸರ್ಜಾ

Cinema

ತಾನು ಎತ್ತಿ ಆಡಿಸಿ ಬೆಳೆಸಿದ ಮಗು, ತನ್ನ ಮುಂದೆಯೇ ಕಣ್ಮರೆಯಾಗಿ ಹೋದರೆ ಆ ನೋವನ್ನ ಬರಿ ಮಾತುಗಳಿಂದ ಹೇಳಲು ಸಾಧ್ಯವಿಲ್ಲ. ಅನುಭವಿಸಿದವರಿಗಷ್ಟೇ ಅದರ ನೋವು ಗೊತ್ತಿರುತ್ತದೆ. ಹೌದು, ಅಳಿಯ ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣದಿಂದಾಗಿ ಬಹುಭಾಷಾ ನಟ, ಮಾವ ಅರ್ಜುನ್ ಸರ್ಜಾ ಅವರು ಮೂರೂ ದಿನಗಳ ಕಾಲ ಏನೂ ಮಾತನಾಡದೆ ಮೌನವಾಗಿಬಿಟ್ಟಿದ್ದರು. ಚಿರು ಮತ್ತು ಧ್ರುವ ಅರ್ಜುನ್ ಸರ್ಜಾ ಅವರ ಇಬ್ಬರು ಗಂಡುಮಕ್ಕಳಿದ್ದಂತೆ.

Advertisements

ಚೆನ್ನೈನಲ್ಲಿದ್ದ ಅರ್ಜುನ್ ಸರ್ಜಾ ಅವರಿಗೆ ಚಿರು ಹೃದಯಾಘತದಿಂದ ಇಹಲೋಕ ತ್ಯಜಿಸಿದ ವಿಷಯ ತಿಳಿಯುತ್ತಲೇ ತಮ್ಮ ಕುಟುಂಬದೊಂದಿಗೆ ಚೆನ್ನೈನಿಂದ ಬೆಂಗಳೂರಿಗೆ ಹೊರಟರು. ಇನ್ನು ಈದೇ ವೇಳೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಕಾಪು ಬಣ್ಣದ ಫೋಟೋ ಹಾಕುವುದರ ಮೂಲಕ ತಮ್ಮ ದುಃಖವನ್ನ ವ್ಯಕ್ತಪಡಿಸಿದ್ರು. ಬಳಿಕ ಬೆಂಗಳೂರಿಗೆ ಬರುವ ವೇಳೆ ತಮ್ಮ ಫೋನ್ ನ್ನೇ ಸ್ವಿಚ್ ಆಫ್ ಮಾಡಿಕೊಂಡರು ಎಂಬ ಮಾಹಿತಿ ಕೂಡ ಇದೆ. ಅಂದರೆ ಅಳಿಯ ಚಿರು ಸರ್ಜಾ ಅವರನ್ನ ಕಳೆದುಕೊಂಡ ನೋವು ಅವರಲ್ಲಿ ಎಷ್ಟರ ಮಟ್ಟಿಗೆ ಇತ್ತು ಎಂಬುದನ್ನ ನೀವೇ ಊಹಿಸಿ.

ಇನ್ನು ಬೆಂಗಳೂರಿಗೆ ಬರುವ ವೇಳೆಗೆ ತಡರಾತ್ರಿ ಆಗಿದ್ದು, ಚಿರು ಪಾರ್ಥಿವ ಶರೀರವನ್ನ ಇಡಲಾಗಿದ್ದ ಬಾಕ್ಸ್ ನ ಬಳಿ ಬಂದು ಚಿರುವನ್ನೇ ತದೇಕ ಚಿತ್ತದಿಂದ ನೋಡುತ್ತಾ ನಿನ್ನ ಮಾವ ಬಂದಿದ್ದೀನಿ ಎದ್ದೇಳೋ ಚಿರು ಎಂದು ತಲೆ ಚಚ್ಚಿಕೊಂಡು ಕಣ್ಣೀರಿನ ಮಳೆಗೈದರು. ಇನ್ನು ತಮ್ಮ ಅಪಾರ ದುಃಖವನ್ನ ಮನಸಿನಲ್ಲಿಟ್ಟುಕೊಂಡೇ ಹಾಲು ತುಪ್ಪ ಸೇರಿದಂತೆ ಅಂತಿಮ ಸಂಸ್ಕಾರದ ಎಲ್ಲಾ ವಿಧಿ ವಿಧಾನಗಳನ್ನ ನೆರವೇರಿಸಿದ್ರು. ಈಗ ಮೂರೂ ದಿನಗಳ ಬಳಿಕ ಚಿರಂಜೀವಿ ಸರ್ಜಾ ಜೊತೆಗಿರುವ ಫೋಟೋ ಹಾಕಿ ‘ಐ ಮಿಸ್ ಯೂ ಬಾಯ್, ಫೇಟ್ ಹ್ಯಾಸ್ ಬೀನ್ ಸೋ ಕ್ರುಯೆಲ್’ (ವಿಧಿ ತುಂಬಾ ಕ್ರೂರನಾಗಿಬಿಟ್ಟ) ಎಂದು ಪೋಸ್ಟ್ ಮಾಡಿ ತಮ್ಮ ಮನಸಿನಲ್ಲಿ ಹುಡುಗಿಟ್ಟುಕೊಂಡಿದ್ದ ತಮ್ಮ ಎಲ್ಲಾ ನೋವನ್ನ ಹೊರಹಾಕಿದ್ದಾರೆ.

ಇನ್ನು ಅರ್ಜುನ್ ಸರ್ಜಾ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಮತ್ತೊಂದು ಫೋಟೋ ಪೋಸ್ಟ್ ಮಾಡಿದ್ದು, ಆ ಫೋಟೋವನ್ನ ನೋಡುತ್ತಿದ್ದರೆ, ತನ್ನ ಪ್ರೀತಿಯ ಅಳಿಯ ಚಿರುವನ್ನ ಇಷ್ಟು ಬೇಗ ತನ್ನ ಬಳಿಗೆ ಕರೆದುಕೊಂಡ ವಿಧಿಯ ಎದುರು ಆಕ್ರೋಶದಿಂದ ನಿಂತಿರುವಂತೆ ಅನ್ನಿಸುತ್ತದೆ.

Leave a Reply

Your email address will not be published. Required fields are marked *