Advertisements

ದುರ್ಯೋಧನ ಹಾಗೂ ಕಂಸ ಪಾತ್ರದಲ್ಲಿ ಅಬ್ಬರಿಸಿದ ಈ ನಟ ಯಾರು ಗೊತ್ತಾ ? ಈ ಎರಡೂ ಪಾತ್ರಕ್ಕೂ ಕನ್ನಡಲ್ಲಿ ಅದ್ಭುತವಾಗಿ ದ್ವನಿ ಕೊಟ್ಟವರು ಇವರೇ ನೋಡಿ..

Entertainment

ನಮಸ್ತೇ ಸ್ನೇಹಿತರೇ, ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಖಳನಾಯಕ ಎಂದೇ ಹೆಸರಾಗಿದ್ದ ಗಾಂಧಾರಿ ಪುತ್ರ ದುರ್ಯೋಧನ ಪಾತ್ರ ಕೂಡ ಬಹಳ ಪ್ರಮುಖವಾದದ್ದು. ಕುರುಕ್ಷೇತ್ರದಂತಹ ಮಹಾಯು’ದ್ಧಕ್ಕೆ ಮೂಲ ಕಾರಣ ಕರ್ತನಾಗಿದ್ದು ದುರ್ಯೋಧನ ಎಂದರೆತಪ್ಪಾಗೋದಿಲ್ಲ. ಸಿಂಹಾಸನದ ಆಸೆಗಾಗಿ ತನ್ನ ಚಿಕ್ಕಪ್ಪನ ಮಕ್ಕಳಾದ ಪಾಂಡು ಪುತ್ರರಿಗೆ ಮಾನಸಿಕವಾಗಿ, ದೈ’ಹಿಕವಾಗಿ ಹಿಂ’ಸೆ ಕೊಡುತ್ತಾನೆ. ಭೀಷ್ಮ, ದ್ರೋಣ, ಕರ್ಣನಂತಹ ಮಹಾರಥಿಗಳೇ ಇವನ ಜೊತೆಗಿದ್ದರೂ ಪಾಂಡವರ ಮೇಲೆ ಜಯಸಾಧಿಸಲು ಸಾಧ್ಯವಾಗುವುದಿಲ್ಲ. ಇಂತಹ ಅಮೋಘ ಪಾತ್ರವನ್ನ ಸಾಕ್ಷಾತ್ ದುರ್ಯೋಧನನೇ ನಟಿಸುತ್ತಿದ್ದಾನೆ ಎಂಬಂತೆ ಸುಯೋಧನನ ಪಾತ್ರದಲ್ಲಿ ಅಬ್ಬರಿಸಿದವರು ೩೭ ವರ್ಷದ ನಟ ಅರ್ಪಿತ್ ರಂಕಾ. ನಟನೆಯ ಜೊತೆಗೆ ಮಾಡೆಲಿಂಗ್ ನಲ್ಲೂ ಖ್ಯಾತಿ ಗಳಿಸಿದವರು. ಇವರ ಪತ್ನಿಯ ಹೆಸರು ನಿಧಿ ಸೋಮಾನಿ ರಂಕಾ ಎಂದು. ಇವರಿಗೆ ಮುದ್ದಾದ ಹೆಣ್ಣು ಮಗಳಿದ್ದಾಳೆ.

Advertisements

೨೦೧೩ರಲ್ಲಿ ಹಿಂದಿಯಲ್ಲಿ ತೆರೆಕಂಡ ಮಹಾಭಾರತ ಧಾರಾವಾಹಿಯಲ್ಲಿ ದುರ್ಯೋಧನನಾಗಿ ಅದ್ಭುತವಾಗಿ ನಟಿಸಿದ್ದಾರೆ. ಆವಾಗಲೇ ಬಿಗ್ ಬಜೆಟ್ ನಲ್ಲಿ ತಯಾರಾಗಿದ್ದ ಈ ಪೌರಾಣಿಕ ಧಾರವಾಹಿ ಮಹಾಭಾರತ ಅದ್ಭುತ ಜನಪ್ರಿಯತೆಯನ್ನ ಗಳಿಸಿತ್ತು. ಇನ್ನು ಲಾಕ್ ಡೌನ್ ವೇಳೆ ಕನ್ನಡಕ್ಕೂ ಡಬ್ ಆಗಿ ಯಾರು ನಿರೀಕ್ಷೆ ಮಾಡದಂತಹ ಮಟ್ಟಿಗೆ ಇಲ್ಲಿಯೂ ಕೂಡ ಯಶಸ್ಸು ಪಡೆಯಿತು. ಮಹಾಭಾರತ ಪ್ರಸಾರವಾಗಿ ಮುಗಿದುಹೋಗಿದ್ದರೂ ಮತ್ತೆ ಪ್ರೇಕ್ಷಕರ ಒತ್ತಾಯದ ಮೇರೆಗೆ ಸುವರ್ಣ ವಾಹಿನಿಯವರು ಪ್ರತೀ ದಿನ ಮಧ್ಯಾನ್ಹ ೧.೩೦ಕ್ಕೆ ಮರು ಪ್ರಸಾರ ಮಾಡುತ್ತಿದ್ದಾರೆ, ಅಷ್ಟರ ಮಟ್ಟಿಗೆ ಕನ್ನಡ ಕಿರುತೆರೆಯಲ್ಲಿ ಸಂಚಲನ ಸೃಷಿಸಿದ್ದ ಧಾರವಾಹಿ ಮಹಾಭಾರತ.

ಇನ್ನು ಅರ್ಪಿತ್ ರಂಕಾ ಅವರು ದುರ್ಯೋಧನ ಪಾತ್ರವಲ್ಲದೆ ಕನ್ನಡಕ್ಕೆ ಡಬ್ ಆಗಿ ಜನಮನ್ನಣೆ ಪಡೆದಿರುವ ಮತ್ತೊಂದು ಪೌರಾಣಿಕ ಧಾರವಾಹಿ ರಾಧಾ ಕೃಷ್ಣ ದಲ್ಲಿ ಕಂಸನಾಗಿಯೂ ಆರ್ಭಟಿಸಿದ್ದಾರೆ. ಇನ್ನು ದುರ್ಯೋಧನ ಮತ್ತು ಕಂಸ ಈ ಎರಡೂ ಪಾತ್ರಕ್ಕೂ ಕನ್ನಡದಲ್ಲಿ ಅದ್ಭುತವಾಗಿ ಧ್ವನಿ ಕೊಟ್ಟು ಆ ಪಾತ್ರಗಳಿಗೆ ನ್ಯಾಯ ಒದಗಿಸಿದವರು ಪುನೀತ್ ಬಾಬು. ಇವರು ಬೇರೆ ಯಾರೂ ಅಲ್ಲ. ಕನ್ನಡದ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿಯಯಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಚಂದ್ರಿಕಾ ಅವರ ಜೊತೆ ಗರುಡನ ಪಾತ್ರದಲ್ಲಿ ವಿಲನ್ ಆಗಿ ನಟಿಸಿದವರು ಪುನೀತ್ ಬಾಬು. ದುರ್ಯೋಧನ ಹಾಗು ಕಂಸನ ಪಾತ್ರಗಳ ಕನ್ನಡದ ಧ್ವನಿಗಳ ಹಿಂದೆ ಇರುವುದು ಇದೆ ಅರ್ಪಿತ್ ಬಾಬು.