Advertisements

ಬಸ್ ನಿಲ್ದಾಣದಲ್ಲೇ ಹುಡುಗಿಯರನ್ನ ರೇಗಿಸುತ್ತಾ ಕಾಲ ಕಳೆಯುತ್ತಿದ್ದ ಹುಡುಗರನ್ನ ಕಾಲೇಜಿಗೆ ಕಳುಹಿಸಲು ಟಿಸಿ ಮಾಡಿದ್ದೇನು ಗೊತ್ತಾ ?

Kannada Mahiti

ಸ್ನೇಹಿತರೇ, ಕಾಲೇಜಿಗೆ ಹೋಗುವ ಎಷ್ಟೋ ಹುಡುಗರು ಕಾಲೇಜಿಗೆ ಹೋಗದೆ ಬಸ್ ಸ್ಟಾಂಡ್, ಪಾರ್ಕ್ ಗಳಲ್ಲಿ ಕಾಲ ಹರಣ ಮಾಡುತ್ತಾ, ವಿಧ್ಯಾರ್ಥಿನಿಯರನ್ನ ಚುಡಾಯಿಸುತ್ತಾ ತಮ್ಮ ಭವಿಷ್ಯವನ್ನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದೇ ರೀತಿ ಕಾಲೇಜಿಗೆ ಹೋಗುತ್ತಿದ್ದೇನೆ ಎಂದು ಮನೆಯಿಂದ ಬರುತ್ತಿದ್ದ ಕಾಲೇಜು ಹುಡುಗರು ಬಸ್ ಸ್ಟಾಂಡ್ ನಲ್ಲೆ ಕುಳಿತು ಬಾರೋ ವಿಧ್ಯಾರ್ಥಿನಿಯರನ್ನ ಚುಡಾಯಿಸುತ್ತಾ. ತಮ್ಮ ಮೊಬೈಲ್ ಗೇಮ್ ಆಡುತ್ತಾ ಕಾಲ ಕಳೆಯುತ್ತಿದ್ದ ಹುಡುಗರಿಗೆ ಅಲ್ಲಿನ ಟಿಸಿಯೊಬ್ಬರು ಬುದ್ದಿ ಹೇಳಿ ಕಾಲೇಜಿಗೆ ಕಳುಹಿಸಿದ ಘ’ಟನೆ ಹಾಸನದಲ್ಲಿ ನಡೆದಿದೆ.

ಹೌದು, ಹಾಸನದ ಅರಸೀಕೆರೆಯ ಕಾಲೇಜಿಗೆ ಊರುಗಳಿಂದ ಬರುತ್ತಿದ್ದ ಕೆಲ ಕಾಲೇಜು ಹುಡುಗರು ಕಾಲೇಜಿಗೆ ಹೋಗದೆ ಬಸ್ ಸ್ಟಾಂಡ್ ನಲ್ಲೆ ಕುಳಿತು ರೋಡ್ ರೋಮಿಯೋಗಳಂತೆ ಹುಡುಗಿಯರನ್ನ ರೇಗಿಸುತ್ತಾ, ಮೊಬೈಲ್ ನೋಡುತ್ತಾ ಬಸ್ ಸ್ಟಾಂಡ್ ನಲ್ಲೇ ಕಾಲ ಹರಣ ಮಾಡುತ್ತಿದ್ದರು. ಇನ್ನು ಈ ಪುಂ’ಡ ಹುಡುಗರಿಂದ ನೋವು ತಿಂದ ಕೆಲ ವಿದ್ಯಾರ್ಥಿನಿಯರು ಇದರ ಬಗ್ಗೆ ಬಸ್ ನಿಲ್ದಾಣದ ಟಿಸಿ ಬಳಿ ಹೇಳಿದ್ದರು. ಟಿಸಿ ಕೂಡ ಸುಮ್ಮನೆ ಬಸ್ ನಿಲ್ದಾಣದಲ್ಲಿ ಕುಳಿತು ಕಾಲ ಕಳೆಯದೆ ಕಾಲೇಜಿಗೆ ಹೋಗಿ ಎಂದು ಎಷ್ಟೇ ಬುದ್ದಿವಾದ ಹೇಳಿದರೂ ಕೂಡ ಈ ಹುಡುಗರು ಟಿಸಿ ಮಾತಿಗೆ ಕವಡೆ ಕಿಮ್ಮತ್ತು ಕೂಡ ಕೊಡಲಿಲ್ಲ. ಇದರಿಂದ ಕೊನೆಗೆ ಐಡಿಯಾವೊಂದನ್ನ ಮಾಡಿದ ಟಿಸಿ ತಮ್ಮ ಮೊಬೈಲ್ ತೆಗೆದು ಕ್ಯಾಮೆರಾ ಆನ್ ಮಾಡಿ ಆ ಹುಡುಗರಿಗೆ ಬುದ್ದಿ ಹೇಳುತ್ತಾ ವಿಡಿಯೋ ಮಾಡಲು ಶುರು ಮಾಡಿದ್ರು.

Advertisements

ಕಾಲೇಜಿಗೆಂದು ಬಂದು ಬಸ್ ನಿಲ್ದಾಣದಲ್ಲೇ ಏಕೆ ಕುಳಿತಿದ್ದೀರಿ..ಕಾಲೇಜ್ ಇಲ್ಲವೇ, ಕಾಲೇಜ್ ಗೆ ಹೋಗುವುದಿಲ್ಲವೆ ಎಂದು ವಿಡಿಯೋ ಮಾಡಲು ಶುರು ಮಾಡಿದ್ರು. ಇನ್ನು ಟಿಸಿ ತಮ್ಮನ್ನ ವಿಡಿಯೋ ಮಾಡುತ್ತಿದ್ದಾರೆ ಎಂದು ಗೊತ್ತಾದ ತಕ್ಷಣ ಆ ಕಾಲೇಜು ಹುಡುಗರು ಬಸ್ ನಿಲ್ದಾಣದಿಂದ ಕಾಲ್ಕಿತ್ತಿದ್ದಾರೆ. ಈ ಪುಂಡ ಹುಡುಗರು ಅಲ್ಲಿಂದ ಕಾಲೇಜ್ ಗೆ ಹೋದರೋ ಇಲ್ಲವೋ ಗೊತ್ತಿಲ್ಲ..ಆದರೆ ಟಿಸಿ ಮಾಡಿದ ವಿಡಿಯೋವಂತೂ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ..