Advertisements

ಕೊನೆಗೂ ದಿವ್ಯಾ ಜೊತೆ ಮದುವೆ ಬಗ್ಗೆ ಮಾತನಾಡಿದ ಅರವಿಂದ್.. ಏನ್ ಹೇಳಿದ್ರು ಮದುವೆ ಯಾವಾಗ ಗೊತ್ತಾ?

Kannada Mahiti

ನಮಸ್ತೇ ಸ್ನೇಹಿತರೆ, ಅರವಿಂದ್ ಮತ್ತು ದಿವ್ಯಾ ಉರುಡುಗ ಕ್ಯೂಟ್ ಜೋಡಿ.. ಬಿಗ್ ಬಾಸ್ ನಲ್ಲಿ ಸ್ನೇಹಿತರಾಗಿ ಒಬ್ಬರಿಗೊಬ್ಬರು ಮಾತನಾಡು ಮೂಲಕ, ಸಹಾಯ ಮಾಡುವ ಮೂಲಕ ಒಟ್ಟಿಗೆ ಇರುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಬಿಗ್ ಬಾಸ್ ಶೋನ ಕೊನೆಯವರೆಗೂ ಸಹ ಇವರ ಬಾಂಧವ್ಯ ಪ್ರೀತಿ ಎಲ್ಲವೂ ಕೂಡ ಅದೇ ರೀತಿ ಇತ್ತು.. ಇನ್ನೂ ಬಿಗ್ ಬಾಸ್ ಮುಗಿದ ನಂತರ ಎಲ್ಲರೂ ಕೂಡ ಅಂದುಕೊಳ್ತಿದ್ದು ಇವರ ಸ್ನೇಹ ಪ್ರೀತಿ ಎಲ್ಲವೂ ಕೂಡ ಬಿಗ್ ಬಾಸ್ ಗೆ ಮಾತ್ರ ಸೀಮಿತ ಹೊರಗಡೆ ಬಂದ್ರೆ ಯಾವುದು ಇರೋದಿಲ್ಲಾ ಅಂಥ.. ಆದರೆ ಅರವಿಂದ್ ದಿವ್ಯಾ ಅವರು ಇದಕ್ಕೆ ಉಲ್ಟಾ ಎನ್ನುವ ರೀತಿಯಲ್ಲಿ ಹೊರಗಡೆ ಬಂದ ನಂತರವೂ ಕೂಡ ಅರವಿಂದ್ ಮತ್ತು ದಿವ್ಯಾ ಉರುಡುಗ ಅವರು ಒಟ್ಟಿಗೆ ಕಾಣಿಸಿಕೊಳ್ತಾಯಿದ್ದಾರೆ. ಎಲ್ಲಾ ಕಾರ್ಯಕ್ರಮಗಳಲ್ಲೂ ಜೋಡಿಯಾಗಿ ಎಂಟ್ರಿ ಕೊಡ್ತಾರೆ, ಲಾಂಗ್ ಡ್ರೈವ್ ಕೂಡ ಹೊಗ್ತಾ ಇರ್ತಾರೆ, ಇನ್ನೂ ದಿವ್ಯಾ ಮನೆಗೆ ಅರವಿಂದ್ ಆಗಾಗ ಹೊಗಿ ಬರ್ತಾರೆ..

Advertisements

ಇದನ್ನೆಲ್ಲ ನೋಡಿದ ಮೇಲೆ ಈ ಜೋಡಿ ನಡುವೆ ಒಳ್ಳೆಯ ಬಾಂಧವ್ಯ ಇದೆ ಎಂದು ತಿಳಿದುಪಟ್ಟಿದೆ. ಇನ್ನೂ ಇವರಿಬ್ಬರು ಮದುವೆ ಯಾವಾಗ ಅಗ್ತಾರೆ ಎಂಬ ವಿಷಯದ ಬಗ್ಗೆ ಕೂಡ ಸಾಕಷ್ಟು ಚರ್ಚೆಗಳು ನಡೆಯುತಿರುತ್ತೆ. ಸಾಕಷ್ಟು ಸಲ ಅರವಿಂದ್ ಮತ್ತು ದಿವ್ಯಾ ಉರುಡುಗ ಅವರಿಗೆ ನಿಮ್ಮ ಮದುವೆ ಯಾವಾಗ ಎಂಬ ಪ್ರಶ್ನೆಗಳು ಎದುರಾಗಿತ್ತು.. ಆದರೆ ನಾವು ಒಳ್ಳೆ ಸ್ನೇಹಿತರು ಎನ್ನುವುದಷ್ಟೇ ಎಂದು ಹೇಳುತ್ತಿದ್ದರು. ಆದರೆ ಇತ್ತೀಚೆಗಷ್ಟೇ ಇವರಿಬ್ಬರು ಅನುಬಂಧ ಅವಾರ್ಡ್ ಗೆ ಬಂದಿದ್ರು. ಅನುಬಂಧ ಅವಾರ್ಡ್ ನ ಬ್ಯಾಕ್ ಸ್ಟೇಜ್ ನಲ್ಲಿ ಅರವಿಂದ್ ಮತ್ತು ದಿವ್ಯಾ ಉರುಡುಗ ಅವರನ್ನು ಮಾತನಡಿಸುವ ವೇಳೆ ಅರವಿಂದ್ ಅವರಿಗೆ ಪ್ರಶ್ನೆ ಎದುರಾಗುತ್ತೆ? ಯಾವಾಗಾ ನೀವು ಮದುವೆ ಆಗುವುದು ಅಂಥ.. ಈ ಸಮಯದಲ್ಲಿ ಅರವಿಂದ್ ಎಲ್ಲವೂ ಕೂಡ ಸರಿಯಾಗಿದೆ ಸಧ್ಯದಲ್ಲೇ ಹೇಳ್ತೆವೆ ಎನ್ನುವ ಮಾತನ್ನ ಮಾತನಾಡ್ತಾರೆ. ಅಂದ್ರೆ ಇಲ್ಲಿ ಗೊತ್ತಾಗಿದ್ದು ಏನೆಂದರೆ ಮದುವೆ ಆಗ್ತಾಯಿದ್ದಾರೆ..

ಅದಕ್ಕೆ ಸಂಬಂಧ ಪಟ್ಟಾಗೆ ಅರವಿಂದ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಇನ್ನೊಂದು ಕಾರ್ಯಕ್ರಮದಲ್ಲಿ ದಿವ್ಯಾ ಅವರಿಗೆ ಒಂದು ಪ್ರಶ್ನೆ ಎದುರಾಗುತ್ತೆ.. ನಿಮಗೆ ಬಿಗ್ ಬಾಸ್ ನಲ್ಲಿ ಪರಿಚಯ ಆದಂತಹವರಲ್ಲಿ ಯಾರು ಅತಿ ಹೆಚ್ಚು ಕಾಲ್ ಮಾಡ್ತಾರೆ, ತುಂಬಾನೆ ಯಾರು ಸಂಪರ್ಕದಲ್ಲಿ ಇದ್ದಾರೆ ಅಂಥ.. ಈ ಪ್ರಶ್ನೆಗೆ ದಿವ್ಯಾ ಅವರು ತಕ್ಷಣ ಅರವಿಂದ್ ಹೆಸರು ಹೇಳ್ತಾರೆ.. ಇಲ್ಲಿ ಗೊತ್ತಾಗುತ್ತೆ ಅರವಿಂದ್ ಮತ್ತು ದಿವ್ಯಾ ಉರುಡುಗ ನಡುವೆ ಒಂದು ಒಳ್ಳೆ ಬಾಂಧವ್ಯ, ಪ್ರೀತಿ ಎಲ್ಲವೂ ಕೂಡ ಇದೆ.. ಇವರಿಬ್ಬರು ಮದುವೆ ಆಗೋದ್ರಲ್ಲಿ ಡೌಟೆ ಇಲ್ಲಾ.. ಮುಂದೆ ಯಾವಾಗ ಯಾವ ಸಮಯದಲ್ಲಿ ಮದುವೆ ಆಗ್ತೇವೆ ಎನ್ನುವಂತಹ ವಿಚಾರ ಹೊರ ಹಾಕ್ತಾರೆ ಎನ್ನುವುದುನ್ನು ಕಾದು ನೋಡ್ಬೇಕಾಗಿದೆ..