Advertisements

ಮಗ ಅಪಘಾತಕ್ಕಿಡಾಗಿ ICU ನಲ್ಲಿದ್ದರೂ, ಕೊರೊನಾ ಕರ್ತವ್ಯ ನಿಷ್ಠೆ ಮೆರೆದ ಆಶಾ ಕಾರ್ಯಕರ್ತೆ.

News

ಮಗ ಅಪಘಾತದಲ್ಲಿ ತೀವ್ರ ಗಾಯಗೊಂಡು ಈ ಸಮಯದಲ್ಲಿ ಆಶಾ ಕಾರ್ಯಕರ್ತೆ ದಾನಮ್ಮ ಎಂಬುವವರು ತಮ್ಮ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಮಗ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಆಶಾ ಕಾರ್ಯಕರ್ತೆ ದಾನಮ್ಮ ಕರ್ತವ್ಯ ಜೊತೆಗೆ ತಮ್ಮ ಮಗನ ಆರೈಕೆ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆ ಪಡುವಂತದ್ದು.

Advertisements

ಆಶಾ ಕಾರ್ಯಕರ್ತೆಯರಾದ ಧಾನಮ್ಮ ಅವರು ತಮ್ಮ ಕುಟುಂಬ ದುಃಖದ ಪರಿಸ್ಥಿತಿಯಲ್ಲಿದ್ದರು ಜನರ ಸೇವೆ ಮಾಡುತ್ತಿದ್ದಾರೆ. ಇವರು ಮೂಲತಃ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕಾಟಮನಹಳ್ಳಿ ಅಶಾ ಕಾರ್ಯಕರ್ತೆಯ ಜೊತೆಗೆ ಅಂಗನವಾಡಿ ಜವಾಬ್ದಾರಿಯನ್ನು ವಹಿಸಿಕೊಂಡು ದಾನಮ್ಮ ತನ್ನಿಂದ ಮತ್ತೊಬ್ಬರಿಗೆ ತೊಂದರೆಯಾಗಬಾರದು, ಕೊರೋನಾ ಲಾಕ್ ಡೌನ್ ಇರುವ ಈ ಸಂದರ್ಭದಲ್ಲಿ ಬಡವರ ಹಾಗೂ ನಿರ್ಗತಿಕರ ಊಟಕ್ಕೆ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದಾರೆ.

ದಾನಮ್ಮ ಕೊರೋನಾ ವೈರಸ್ ಭೀತಿಯಿಂದ ಜಿಲ್ಲೆಗೆ ವೀದೇಶದಿಂದ ವಾಪಸ್ ಬಂದಿರುವ ಮತ್ತು ಕೂಲಿ ಕಾರ್ಮಿಕರಿಗೆ ತಪಾಸಣೆ ಮಾಡಿ ವರದಿ ತಯಾರಿಸುತ್ತಿದ್ದಾರೆ. ಇದರ ಜೊತೆಗೆ ಹಲವು ಹಳ್ಳಿಗಳ್ಳಿಗೆ ತೆರಳಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ದಾನಮ್ಮರ ಮಗ ರಾಹುಲ್ ಕಳೆದ ವಾರ ವಿಜಾಪುರದಿಂದ ಯಾದಗಿರಿಗೆ ಬೈಕಿನಲ್ಲಿ ಬರುತ್ತಿದ್ದ ವೇಳೆ, ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದು ಕಲುಬುರುಗಿ ಆಸ್ವತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆಯನ್ನು ಪಡೆಯುತ್ತಾನೆ. ಈಗ ಸ್ವಲ್ಪ ಚೇತರಿಸಿಕೊಂಡ ರಾಹುಲ್ ಆಸ್ವತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಈಗ ಮನೆಯಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿದ್ದಾನೆ. ದಾನಮ್ಮ ಇಂತಹ ಸಮಯದಲ್ಲೂ ಕರ್ತವ್ಯ ನಿಷ್ಠೆ ತೋರಿದ್ದಾರೆ. ಮಗನ ಆರೈಕೆಯ ಜೊತೆಗೆ ಜನರ ಸೇವೆಯನ್ನು ಮಾಡುತ್ತಿದ್ದಾರೆ. ಆಶಾ ಕಾರ್ಯಕರ್ತೆ ದಾನಮ್ಮ ಅವರ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.