Advertisements

ಸ್ವಲ್ಪ ದಿನ ನಾನು ಅಪ್ಪು ಹುಡುಕಿಕೊಂಡು ಹೋಗ್ತೀನಿ ! ಕಣ್ಣೀರು ಹಾಕುತ್ತಾ ರಾಘಣ್ಣ ಹೇಳಿದ್ದೇನು ? ನೋಡಿ

Cinema

ನಟ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರ ಮಾರ್ಚ್ 17 ಅವರ ಹುಟ್ಟುಹಬ್ಬದ ದಿನದಂದೆ ರಿಲೀಸ್ ಆಗಲಿದೆ.. ಚಿತ್ರ ಬಿಡುಗಡೆಗೂ ಮುನ್ನ ಚಿತ್ರತಂಡ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪ್ರೀ ರಿಲೀಸ್ ಇವೆಂಟ್ ಆಯೋಜಿಸಿದ್ದು ಕಾರ್ಯಕ್ರಮದಲ್ಲಿ ದೊಡ್ಮನೆ ಕುಟುಂಬಸ್ಥರು, ಸ್ಯಾಂಡಲ್ ವುಡ್ ತಾರೆಯರು ಹಾಗು, ವಿವಿಧ ಬಾಷೆಯ ನಟರು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ..

Advertisements

ಕಾರ್ಯಕ್ರಮ ಶುರುವಾಗುತ್ತಿದ್ದಂತೆ ಪುನೀತ್ ರಾಜ್ ಕುಮಾರ್ ಹಾಡಿಗೆ ಕಲಾವಿದರು ನೃತ್ಯ ಮಾಡಿದರು. ಇದನ್ನು ಕಂಡು ಪುನೀತ್ ಪತ್ನಿ ಅಶ್ವಿನಿ ಭಾವುಕರಾಗಿ ಹೊರ ನಡೆದರು.. ಬಳಿಕ ಮತ್ತೆ ಬಂದು ಆಸಿನರಾದರು. ಆದರೆ ಎಲ್ಲರಿಗೂ ದೈರ್ಯ ಹೇಳುತ್ತಿದ್ದ ರಾಘಣ್ಣ ಈ ಬಾರಿ ಯಾಕೋ ತೀರ ಕುಗ್ಗಿ ಹೋಗಿದ್ದರು. ಅಪ್ಪು ಬಗ್ಗೆ ಮಾತನಾಡಲು ವೇದಿಕೆ ಮೇಲೆ ಬಂದ ರಾಘವೇಂದ್ರ ರಾಜ್ ಕುಮಾರ್ ಅವರು ನನಗೆ ಅನಿಸಿದ್ದನ್ನು ಹೇಳುತ್ತೇನೆ ದೇವರು ಚೆನ್ನಾಗಿ ಓಡುತ್ತಿದ್ದ ಗಾಡಿಯನ್ನ ನಿಲ್ಲಿಸಿಬಿಟ್ಟ..

ಆದರೆ ನಾನು ಇನ್ನು ಕುಂಟಿಕೊಂಡು ಇದ್ದೇನೆ ಆದರೆ ನನಗೆಲ್ಲಾ ಇದನ್ನು ನೋಡಿಕೊಂಡು ಇರೋದಕ್ಕೆ ಆಗಲ್ಲಾ. ನಾನು ಹೋಗಿಬಿಡ್ತೇನೆ. ನಾನು ಅಪ್ಪು ಅವರನ್ನು ಹುಡುಕಿಕೊಂಡು ಹೋಗುತ್ತೇನೆ.. ನನ್ನ ಕೈಯಲ್ಲಿ ಇರೋದಕ್ಕೆ ಆಗಲ್ಲಾ. ಎಂದು ರಾಘವೇಂದ್ರ ರಾಜ್ ಕುಮಾರ್ ಅವರು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ನೋವಿನಲ್ಲಿರುವ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ನೀವು ಏನನ್ನು ಹೇಳಲು ಭಯಸುತ್ತೀರಾ ಎಂದು ಕಾಮೆಂಟ್ ಮಾಡಿ ತಿಳಿಸಿ.