ಮಹಾಭಾರತದ ಅಶ್ವತ್ಥಾಮ ಇನ್ನು ಬದುಕಿದ್ದಾರಾ, ಅಲ್ಲಲ್ಲಿ ಅಶ್ವತ್ಥಾಮನನ್ನು ನಾವು ನೋಡಿದ್ದೇವೆ ಎಂದು ಜನರು ಹೇಳೋದೇಕೆ, ಕರ್ನಾಟಕಕ್ಕೂ ಬಂದಿದ್ರಾ ಅಶ್ವತ್ಥಾಮ. ಕೃಷ್ಣ ಅಶ್ವತ್ಥಾಮನಿಗೆ ನೀಡಿದ ಶಾಪವೇನು, ಎಲ್ಲವನ್ನು ತಿಳಿಯೋಣ ಬನ್ನಿ. ಮಹಾಭಾರತದ ಅಶ್ವತ್ಥಾಮ ನಿಮಗೆಲ್ಲರಿಗೂ ಗೊತ್ತೇ ಇದೆ ಗುರು ದ್ರೋಣಾಚಾರ್ಯರ ಮಗ ದುರ್ಯೋಧನ ಜೊತೆ ಸೇರಿ ಕೌರವರ ಸ್ನೇಹ ಮಾಡಿ ಮಹಾಭಾರತದಲ್ಲಿ ಕೌರವ ಪರವಾಗಿ ಹೊರಡುತ್ತಾನೆ. ಅಷ್ಟೇ ಅಲ್ಲದೆ ತಂದೆ ದ್ರೋಣ ಚಾರ್ಯರನ್ನು ಕೂಡ ಒತ್ತಾಯ ಮಾಡಿ ಕೌರವರ ಪರವಾಗಿ ಹೋರಾಡುವಂತೆ ಮಾಡುತ್ತಾನೆ. ಅಶ್ವತ್ಥಾಮ ಹಣೆಯಲ್ಲಿ ಒಂದು ಮಣಿ ಇರುತ್ತದೆ ಆ ಮಣಿ ಅಶ್ವತ್ಥಾಮನ ಪೂರ್ವಜರಿಂದ ಸಿಕ್ಕ ಸಂಜೀವಿನಿ ಆಗಿರುತ್ತದೆ. ಅದು ಇರುವಾಗ ಅನಾರೋಗ್ಯವೇ ಕಾಡುತ್ತಿರಲಿಲ್ಲ.

ಕೃಷ್ಣನ ಶಾಪಕ್ಕೆ ತುತ್ತಾದ ಅಶ್ವತ್ಥಾಮ. ಹೌದು ಮಹಾಭಾರತ ಯುದ್ಧ ಮುಗಿದು ಕೊನೆಯ ಹಂತಕ್ಕೆ ತಲುಪಿರುತ್ತದೆ, ಭೀಮ ದುರ್ಯೋಧನನ ತೊಡೆ ಮುರಿದು ಹಾಕಿರುತ್ತಾನೆ ಇದರಿಂದ ಸಾವಿಗೆ ಹತ್ತಿರವಾಗಿದ್ದ ದುರ್ಯೋಧನ ಅಶ್ವತ್ಥಾಮನನ್ನ ಕರೆದು ಪಾಂಡವರ ತಲೆಗಳನ್ನು ತಂದುಕೊಡುವಂತೆ ಹೇಳುತ್ತಾನೆ. ಆಗ ಕತ್ತಲಲ್ಲಿ ಪಾಂಡವರ ಕುಟೀರಕ್ಕೆ ಹೋದ ಅಶ್ವತ್ಥಾಮ ಪಾಂಡವರ ಬದಲಾಗಿ ನಿದ್ದೆ ಮಾಡುತಿದ್ದ ಅವರ ಐವರ ಪುತ್ರರ ತಲೆ ಕಡೆದು ತಂದು ದುರ್ಯೋಧನನಿಗೆ ನೀಡುತ್ತಾನೆ. ವಿಷಯ ತಿಳಿದು ಪಾಂಡವರು ಅಶ್ವತ್ಥಾಮ ವಿರುದ್ಧ ಸೇಡು ತೀರಿಸಿಕೊಳ್ಳಲು ಹೋಗುತ್ತಾರೆ. ಆಗ ಕ್ರಷ್ಣನು ಕೂಡ ಬರುತ್ತಾರೆ.
ಆದರೆ ಕೌರವರ ಜೊತೆ ಸೇರಿ ದುಷ್ಟ ಬುದ್ದಿ ಕಲಿತುಕೊಂಡಿದ್ದ ಅಶ್ವತ್ಥಾಮ ಅಭಿಮನ್ಯು ಪತ್ನಿ ಉತ್ತರೆ ಗರ್ಭಕ್ಕೆ ಬ್ರಹ್ಮಸ್ತ್ರ ಪ್ರಯೋಗಿಸುತ್ತಾನೆ. ಆದರೆ ಬ್ರಹ್ಮಸ್ತ್ರ ದಿಂದ ಕೃಷ್ಣ ಉತ್ತರೆಯನ್ನ ರಕ್ಷಣೆ ಮಾಡುತ್ತಾನೆ. ಆದರೆ ಅದೇ ಕೋಪದಲ್ಲಿ ಅಶ್ವತ್ಥಾಮನ ಹಣೆಯಲ್ಲಿದ್ದ ಮಣಿಯನ್ನು ಕಿತ್ತು ಭಯಾನಕ ಶಾಪವನ್ನು ಕೊಡುತ್ತಾನೆ ಶ್ರೀ ಕೃಷ್ಣ. ಕಲಿಯುಗದ ಅಂತ್ಯದವರೆಗೂ ನಿನಗೆ ಸಾವೇ ಬರಬಾರದು ನಿನ್ನ ಹಣೆ ಮತ್ತು ರೋಮ ರೋಮದಲ್ಲೂ ಕೊನೆಯವರೆಗೂ ರಕ್ತ ಸುರಿಯುತ್ತಿರುತ್ತದೆ. ಅನ್ನ ನೀರಿಲ್ಲದೆ ತನ್ನ ದೇಹದ ಗಾಯಕ್ಕೆ ಚಿಕೆತ್ಸೆಯೂ ಇಲ್ಲದೆ ಒದ್ದಾಡುತ್ತೀಯ ಆದರೆ ನಿನಗೆ ಯಾರು ಸಹಾಯ ಮಾಡುವುದಿಲ್ಲ. ಕಲಿಯುಗದ ಅಂತ್ಯದವರೆಗೂ ನೀನು ಹೀಗೆ ನರಳಾಡುತ್ತ ಬದುಕುತ್ತೀಯ ಎಂದು ಶಾಪವನ್ನು ಕೊಡುತ್ತಾನೆ ಶ್ರೀ ಕೃಷ್ಣ.

ಹಾಗಾದ್ರೆ ಅಶ್ವತ್ಥಾಮ ಇನ್ನೂ ಬದುಕಿದ್ದಾರಾ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಅದಕ್ಕೆ ಉತ್ತರ ಹೌದು ಈಗಂತ ನಾವು ಹೇಳುತ್ತಿಲ್ಲ ಹಲವರಿಗೆ ಈ ಬಗ್ಗೆ ಅನುಭವ ಹಾಗಿದೆ ಹಲವರು ನೋಡಿದ್ದಾರೆ ಇನ್ನೂ ಕೆಲವರ ಬಳಿ ಅಶ್ವತ್ಥಾಮನೇ ಬಂದು ಔಷಧಿ ಕೇಳಿದ್ದಾನಂತೆ. ಹಾಗಾದರೆ ಯಾರು ನೋಡಿದ್ದಾರೆ. ಎಲ್ಲೆಲ್ಲಿ ಕಾಣಿಸಿಕೊಂಡಿದ್ದ ಅಶ್ವತ್ಥಾಮ. ಮಧ್ಯಪ್ರದೇಶದ ಡಾಕ್ಟರ್ ಮನೆಗೆ ಬಂದಿದ್ದನಂತೆ ಅಶ್ವತ್ಥಾಮ ಹೌದು ಸ್ನೇಹಿತರೆ ಮಧ್ಯಪ್ರದೇಶದಲ್ಲಿ ಓರ್ವ ವ್ಯಕ್ತಿ ಡಾಕ್ಟರ್ ಮನೆ ಬಡಿದಿದ್ದ. ಬಾಗಿಲು ತೆರೆದು ನೋಡಿದರೆ ಎತ್ತರದ ಕಪ್ಪು ಬಣ್ಣದ ಓರ್ವ ವ್ಯಕ್ತಿ ನಿಂತಿದ್ದನಂತೆ ಆತನ ಹಣೆ ಮತ್ತು ದೇಹದ ಅಲವೆಡೆ ರ,ಕ್ತ ಸುರಿಯುತಿತ್ತು ವೈದ್ಯರು ಆತನನ್ನು ಹೊಳಗೆ ಕರೆದೊಯ್ದು ರಕ್ತ ನಿಲ್ಲಿಸಲು ತುಂಬಾ ಪ್ರಯತ್ನ ಪಟ್ಟರು ಆದರೆ ಅದು ಸಾಧ್ಯ ಆಗಲಿಲ್ಲ. ಈ ವೇಳೆ ವೈದ್ಯರು ಔಷಧಿ ತರಲು ಹೊಳಗೆ ಹೋಗುತ್ತಾರೆ ಹಾಗೆ ಹೋಗುವಾಗ ಏನು ಮಾರಾಯ ಇದೆಂತ ಗಾಯ ನಿಂದು ರಕ್ತ ನಿಲ್ಲುತ್ತಲೇ ಇಲ್ಲ ನೀನೇನು ಮಹಾಭಾರತದ ಅಶ್ವತ್ಥಾಮನಾ ಅಲ್ಲ ತಾನೇ ಎಂದು ತಮಾಷೆಯಾಗಿ ಕೇಳಿದ್ರು ನಂತರ ವೈದ್ಯರು ವಾಪಸ್ ಬಂದು ನೋಡುವಾಗ ಅಲ್ಲಿ ಗಾಯಗೊಂಡಿದ್ದ ವ್ಯಕ್ತಿ ಇರಲೇ ಇಲ್ಲ. ಇನ್ನೊಂದು ವಿಷಯ ಏನೆಂದ್ರೆ ವೈದ್ಯರು ಹೊಳಗಿನಿಂದ ಲಾಕ್ ಮಾಡಿದ್ದೂ ಕೂಡ ಹಾಗೆ ಇತ್ತು.
ಉತ್ತರಪ್ರದೇಶದಲ್ಲಿ ಅಶ್ವತ್ಥಾಮನಿಂದ ಶಿವ ಪೂಜೆ, ಸ್ನೇಹಿತರೆ ಉತ್ತರಪ್ರದೇಶದ ಲಕ್ಕಿಮ್ ಪುರದಲ್ಲಿ ಒಂದು ದೇವಸ್ಥಾನವಿದೆ ಅದರಲ್ಲಿ ಒಂದು ಶಿವಲಿಂಗವಿದೆ ಪ್ರತಿದಿನ ರಾತ್ರಿ ದೇವಸ್ಥಾನದ ಪೂಜಾರಿ ದೇವಸ್ಥಾನಕ್ಕೆ ಬೀಗ ಹಾಕಿಕೊಂಡು ಹೋಗುತ್ತಾರೆ ಆದರೆ ಬೆಳಗ್ಗೆ ಬಂದು ನೋಡುವಾಗ ಶಿವಲಿಂಗದ ಮೇಲೆ ಯಾರೋ ನೀರು ಹಾಕಿ ಜಲ ಅಭಿಷೇಕ ಮಾಡುತ್ತಿದ್ರೂ ಆದ್ರೆ ದೇವಸ್ಥಾನದ ಬಾಗಿಲಿಗೆ ಹಾಕಿದ ಬೀಗ ಮಾತ್ರ ಹಾಗೆ ಇರುತ್ತೆ ಈ ಘಟನೆ ಪ್ರತಿದಿನ ನಡೆತಿರುತ್ತದ್ದೆ. ದೇವಸ್ಥಾನದ ಪೂಜಾರಿ ಈ ವಿಚಾರವನ್ನ ಮಿಡಿಯಾದವರಿಗೆ ಹೇಳಿದ್ರು ಅದೇ ರೀತಿ ಒಂದು ದಿನ ಮಾಧ್ಯಮಗಳ ಮುಂದೆಯೇ ಬಾಗಿಲು ಹಾಕಿ ಮಾಧ್ಯಮದವರ ಮುಂದೇ ಬಾಗಿಲನ್ನು ತೆಗೆಯುತ್ತಾರೆ. ಆಗ ಪೂಜಾರಿ ಹೇಳಿದ್ದು ನಿಜವಾಗಿತ್ತು. ಬೆಳಗ್ಗೆ ಇವರು ಬಾಗಿಲನ್ನು ತೆಗೆಯುವ ಮುನ್ನವೇ ಯಾರೋ ಬಂದು ಜಲ ಅಭಿಷೇಕ ಮಾಡಿ ಹೋಗಿದ್ದರು. ಶಿವಲಿಂಗಕ್ಕೆ ಬಂದು ಪೂಜೆ ಮಾಡೋದು ಬೇರೆ ಯಾರೋ ಅಲ್ಲ ಅದು ಅಶ್ವತ್ಥಾಮ ಅನ್ನೋ ಜನರ ನಂಬಿಕೆ.

ಮಧ್ಯಪ್ರದೇಶದ ಅಸೀರಗಢದ ಕೋಟೆಯಲ್ಲಿ ವಾಸ. ಹೌದು ಮಧ್ಯಪ್ರದೇಶದ ಅಸೀರಗಢದಲ್ಲಿ ಒಂದು ಕೋಟೆ ಇದೆ ಅಲ್ಲಿ ಒಂದು ಶಿವಲಿಂಗವಿದೆ. ಆ ಶಿವಲಿಂಗಕ್ಕೆ ಪ್ರತಿದಿನ ಯಾರೋ ಹೂ ಇಟ್ಟು ಪೂಜೆ ಮಾಡುತ್ತಾರೆ ಆದ್ರೆ ಅದು ಯಾರು ಅನ್ನೊದು ಮಾತ್ರ ಇನ್ನೂ ಗೊತ್ತಾಗಿಲ್ಲ. ಇಲ್ಲಿ ಒಂದು ಕೋಳ ಇದೆ ದ್ವಾಪರಯುಗದಲ್ಲಿ ಇದೆ ಕೊಳದಲ್ಲಿ ಅಶ್ವತ್ಥಾಮ ಸ್ನಾನ ಮಾಡಿ ಶಿವಲಿಂಗಕ್ಕೆ ಪೂಜೆ ಮಾಡುತಿದ್ರು. ಈಗಾಗಿಯೇ ಈಗಲೂ ಇದನ್ನು ಮುಂದುವರಿಸುತಿದ್ದಾರೆ ಎಂಬುದು ಜನರ ನಂಬಿಕೆ. ಅಶ್ವತ್ಥಾಮ ದೇಶದ ಐದು ಶಿವನ ದೇವಸ್ಥಾನಗಳಿಗೆ ಹೋಗುತ್ತಾರೆ ಅದ್ರಲ್ಲಿ ಇದು ಕೂಡ ಒಂದು ಎಂದು ಜನ ಮಾತಾಡುತ್ತಾರೆ. ಇಲ್ಲಿಯೂ ಸಹ ಮಾಧ್ಯಮಗಳು ರಿಯಾಲಿಟಿ ಚೆಕ್ ನಡೆಸಿದ್ರು ಕೂಡ ಸತ್ಯವನ್ನು ಭೇದಿಸಲು ಸಾಧ್ಯವಾಗಲಿಲ್ಲ ಅಲ್ಲದೇ ಈ ಗ್ರಾಮದಲ್ಲಿ ಆಗಾಗ ಉದ್ದಕ್ಕೆ ಇರುವ ಓರ್ವ ವ್ಯಕ್ತಿ ಬಂದು ನನ್ನ ಹಣೆಗೆ ಗಾಯವಾಗಿದೆ ಹಳದಿ ಕೊಡಿ ಅಂತ ಕೇಳುತ್ತಾರಂತೆ. ಅದು ಅಶ್ವತ್ಥಾಮ ಅನ್ನೊದು ಜನರ ನಂಬಿಕೆ.
ಕರ್ನಾಟಕಕ್ಕೂ ಬಂದಿದ್ರಾ ಅಶ್ವತ್ಥಾಮ. ಸ್ನೇಹಿತರೆ ಇದು ಸ್ವಲ್ಪ ಅಳೆಯ ಘಟನೆ ಕರ್ನಾಟಕದ ನಾರಾಯಣ ಎಂಬಸಂತ ಅಶ್ವತ್ಥಾಮನನ್ನ ಗುರುತು ಹಿಡಿದಿದ್ರು ಅಲ್ಲದೇ ಮನೆಗೆ ಕರೆದ್ಕೊಂಡು ಹೋಗಿ ಮಹಾಭಾರತದ ಕಥೆ ಹೇಳುವಂತೆ ಪಟ್ಟು ಹಿಡಿದಿದ್ರು ಆಗ ಅಶ್ವತ್ಥಾಮ ಒಂದು ಕಂಡೀಷನ್ ಹಾಕಿದ್ರು. ನನ್ನ ಬಳಿ ಇದ್ದ ಬಟ್ಟೆಯನ್ನ ಒದ್ದೆ ಮಾಡಿ ಒಣ ಹಾಕುತ್ತೇನೆ ಪ್ರತಿದಿನ ಆ ಬಟ್ಟೆ ಒಣಗುವಷ್ಟು ಸಮಯ ಎಷ್ಟು ಹಾಗುತ್ತೋ ಅಷ್ಟು ಕಥೆಯನ್ನು ಹೇಳುತ್ತೇನೆ ಅಂದ್ರು, ಅದ್ಕಕೆ ನಾರಾಯಣ ಸಂತರು ಒಪ್ಪಿದ್ರು ಪ್ರತಿದಿನ ಅಶ್ವತ್ಥಾಮ ಬಂದು ಬಟ್ಟೆ ಒದ್ದೆ ಮಾಡಿ ಒಣ ಹಾಕಿ ಮಹಾಭಾರತದ ಕಥೆಯನ್ನು ಹೇಳುತ್ತಾಯಿದ್ದ ಆದರೆ ಒಂದು ದಿನ ಅಶ್ವತ್ಥಾಮ ದುರ್ಯೋಧನನ ಕಥೆ ಹೇಳುವಾಗ ಜೋರಾಗಿ ಅತ್ತುಬಿಟ್ಟ ಇದೆ ಸಮಯಕ್ಕೆ ಸರಿಯಾಗಿ ತಾವು ಒಣ ಹಾಕಿದ್ದ ಬಟ್ಟೆ ಒಣಗಿದ್ದರಿಂದ ಅಲ್ಲಿಂದ ಹೊರಟು ಹೋದರು. ಅಶ್ವತ್ಥಾಮನ ವರ್ತನೆಯಿಂದ ಎದರಿದ ನಾರಾಯಣ ಸಂತರು ಈ ವಿಚಾರವನ್ನು ತಮ್ಮ ಪತ್ನಿಗೆ ಹೇಳಿದ್ದರು ಈ ವಿಚಾರ ತಿಳಿದ ಅಶ್ವತ್ಥಾಮ ಬರುವುದನ್ನೆ ಬಿಟ್ಟುಬಿಟ್ಟ ಇದೆ ಕಾರಣಕ್ಕೆ ನಾರಾಯಣ ಸಂತರು ಬರೆದ ಮಹಾಭಾರತ ಅರ್ಧದಷ್ಟು ಮಾತ್ರವೇ ಇದೆ. ಸಂಪೂರ್ಣವಾಗಿ ಇಲ್ಲ ಎನ್ನುವುದು ನಂಬಿಕೆ ಕೂಡ ಇದೆ. ಇದು ಅಶ್ವತ್ಥಾಮ ಬದುಕಿದ್ದಾನೆ ಅನ್ನೊದಕ್ಕೆ ಇರೋ ಕುರುಹುಗಳು. ನಂಬಿಕೆಗಳು ಇದರ ಬಗ್ಗೆ ನಿಮಗೆ ಏನು ಅನಿಸುತ್ತೆ ಅಂತ ಕಾಮೆಂಟ್ ಮಾಡಿ ತಿಳಿಸಿ.