Advertisements

ಅಪ್ಪು ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್.. ಅಶ್ವಿನಿ ರವರು ಹೇಳಿದ್ದೇನು ಗೊತ್ತೇ!

Cinema

ಉತ್ತರ ಕನ್ನಡ ಅಂದ್ರೆ ಅಪ್ಪುವಿಗೆ ಅಪಾರ ಪ್ರೀತಿಯಿತ್ತು. ಅಭಿಮಾನವಿತ್ತು. ಉತ್ತರ ಕನ್ನಡದ ಕಾಡುಮೇಡುಗಳಲ್ಲಿ, ನಿಸರ್ಗಧಾಮಗಳಲ್ಲಿ ಅಲೆದಾಡಿದ ಅಪ್ಪು ಒಂದು ವಿಭಿನ್ನವಾದ ಸಾಕ್ಷ್ಯ ಚಿತ್ರವನ್ನು ತಯಾರಿಸಿದ್ರು. ಸಾಕಷ್ಟು ಪ್ರೀತಿಯಿಂದ ಉತ್ಸುಕರಾಗಿ ಆ ಸಾಕ್ಷ್ಯ ಚಿತ್ರ ನಿರ್ಮಾಣ ಮಾಡಿದ್ರು. ಡಾಕ್ಯುಮೆಂಟ್ರಿ ರಿಲೀಸ್​ಗೆ ಡೇಟ್ ಕೂಡ ಫಿಕ್ಸ್ ಮಾಡಿದ್ರು. ನವೆಂಬರ್ ಒಂದರಂದು ಡಾಕ್ಯುಮೆಂಟ್ರಿ ರಿಲೀಸ್ ಆಗಬೇಕಿತ್ತು. ಆದ್ರೆ ಯಾರು ಊಹಿಸಲಾಗದ ದು’ರಂ’ತ ರಾಜ್ಯದಲ್ಲಿ ನಡೆದದ್ದರಿಂದ ಆ ದಿನ ಆ ಕ್ಷಣ ಮರೆಯಲಾಗದ ಒಂದು ಕಹಿ ದಿನವಾಗಿದ್ದರಿಂದ ಡಾಕ್ಯುಮೆಂಟ್ರಿ ರಿಲೀಸ್ ಕೂಡ ಆಗಲಿಲ್ಲ. ನಿಮಗೆಲ್ಲ ಗೊತ್ತಿರೋ ಹಾಗೇ ಅಪ್ಪು ಅ’ಗ’ಲಿದ ಕಾರಣ ಆ ಅಗಲಿಕೆಯ ನೋವಿನಿಂದ ಕುಟುಂಬ ಹೊರಬರಲಾರದೇ ಇದ್ದದ್ದರಿಂದ ನವೆಂಬರ್ ಒಂದರಂದು ಅಪ್ಪು ಸಾಕ್ಷ್ಯ ಚಿತ್ರ ಬಿಡುಗಡೆಯಾಗಿರಲಿಲ್ಲ,.

[widget id=”custom_html-3″]

Advertisements

ಆದ್ರೆ ಈಗ ದಿನಗಳು ಉರುಳಿ ಹೋಗಿದೆ. ಅಪ್ಪು ಇಲ್ಲ ಅಂದ್ರೂ ಸಹ ಅವರು ಕಷ್ಟಪಟ್ಟು ಶ್ರಮ ವಹಿಸಿ ಮಾಡಿದ ಆ ಪ್ರಾಜೆಕ್ಟ್ ಸ್ಥಗಿತವಾಗಲು ಅಶ್ವಿನಿ ಪುನೀತ್ ರಾಜ್​ಕುಮಾರ್ ಅವಕಾಶ ಕೊಟ್ಟಿಲ್ಲ. ತನ್ನ ಅಭಿಮಾನಿಗಳಿಗೆ ಅಪ್ಪುವನ್ನು ಆರಾಧಿಸುವ ಪ್ರೀತಿಯ ಫ್ಯಾನ್ಸ್​​ಗೆ ಶ್ರೀಮತಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಗುಡ್​​ನ್ಯೂಸ್ ಕೊಟ್ಟಿದ್ದಾರೆ. ಅಪ್ಪು ಅವರ ಕನಸೊಂದು 2021 ದಿಸೆಂಬರ್ 1ರಂದು ಬೆಳಕಿಗೆ ಬರಬೇಕಿತ್ತು. ಆದರೆ ಆ ಕನಸಿಗಿದು ಅಲ್ಪವಿರಾಮವಷ್ಟೇಯಾಗಿದೆ. ಅದನ್ನು ಅವರಿಷ್ಟದಂತೆಯೇ ನಿಮ್ಮೆದುರು ನನಸಾಗಿಸುವ ಜವಾಬ್ದಾರಿ ನಮ್ಮದು. ಇಲ್ಲಿಯವರೆಗೆ ನೀವು ತೋರಿಸಿದ ಸಂಯಮ ಮತ್ತು ಸಹಕಾರಕ್ಕೆ ನಾವು ಆಭಾರಿಯಾಗಿದ್ದೇವೆ ಎಂದು ಬರೆದುಕೊಂಡು..

[widget id=”custom_html-3″]

ಇನ್‍ಸ್ಟಾಗ್ರಾಮ್‍ನಲ್ಲಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಪೋಸ್ಟ್ ಮಾಡಿದ್ದಾರೆ. ಈ ಹಿಂದೆ ಅಪ್ಪು ಬದುಕಿದ್ದಾಗ ಈ ಬಗ್ಗೆ ಅಪ್ಪು ಸಹ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದರು. ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ’ ಎಂದಷ್ಟೇ ನೇತ್ರಾಣಿಯಲ್ಲಿ ಮಾಡಿದ ಸ್ಕೂಬಾ ಡೈವಿಂಗ್‍ನ ಫೋಟೊವೊಂದರ ಜೊತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಡಾಕ್ಯಮೆಂಟರಿ ಬಿಡುಗಡೆಯ ಬಗ್ಗೆ ಕ್ಲೂ ಕೊಟ್ಟಿದ್ರು.

[widget id=”custom_html-3″]