Advertisements

ಪುನೀತ್ ಅಭಿಮಾನಿಗಳಿಗೆ ಪತ್ರ ಬರೆದ ಅಶ್ವಿನಿ.. ಏನ್ ಬರೆದಿದ್ದಾರೆ ಗೊತ್ತಾ?

Cinema

[widget id=”custom_html-3″]

ವೀರ ಕನ್ನಡಿಗ ನಗು ಮೊಗದ ಸರದಾರ ಅಭಿಮಾನಿಗಳ‌ ಪಾಲಿನ ಅಪ್ಪು ಎಂದೆ ಮನೆ‌ ಮನದಲ್ಲಿ ಬೆಳೆದು ನಿಂತ ಪುನೀತ ರಾಜ್ ಕುಮಾರ ಅಕಾಲಿಕ ಮ’ರ’ಣದಿಂದಾಗಿ‌ ಕುಟುಂಬ ಮಾತ್ರವಲ್ಲದೆ ಇಡೀ ಕುರುನಾಡೆ ಕಣ್ಣೀರು ಇಟ್ಟಿದ್ದು ಅಕ್ಷರಃ ಸತ್ಯ.. ಇದೀಗ ಅಪ್ಪು ಅಭಿಮಾನಿಗಳ ಕುರಿತು ಪತ್ನಿ ಅಶ್ವಿನಿ ಪತ್ರ ಒಂದನ್ನ ಬರೆದಿದ್ದಾರೆ. ಎನಿದು ಪತ್ರ, ಅಶ್ವಿನಿ ಬರೆದಿದ್ದಾದ್ರು ಎಕೆ.. ಪವರ್ ಸ್ಟಾರ್ ಪುನೀತ ರಾಜ್ ಕುಮಾರ್ ನಮ್ಮೆನ್ನೆಲ್ಲ ಅಗಲಿ ಹಲವು ದಿನಗಳು ಕಳೆದರು ಅವರಿನ್ನು ನಮ್ಮೊಂದಿಗೆ ಇದ್ದಾರೆ ಎಂವ ಭಾವನೆ ಪ್ರತಿ ಅಭಿಮಾನಿಗಳಲ್ಲಿದೆ. ತೆರೆ ಮುಂದೆ ಮಾತ್ರವಲ್ಲದೆ‌ ಎಲೆ ಮರೆಯ ಕಾ’ಯಿ’ಯಂತೆ ಅವರು ಮಾಡಿದ ಸಮಾಜ ಕಾರ್ಯ ಶ್ಲಾಘನೀಯ. ವೃ’ದ್ಧಾ’ಶ್ರಮ, ಅನಾಥಾಶ್ರಮ, ಗೋಶಾಲೆ ಸೇರಿದಂತೆ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ವ್ಯವಸ್ಥೆ ಕಲ್ಪಿಸಿಕೊಟ್ಟ ಪರಮಾತ್ಮ. ಅದಷ್ಟೆ ಅಲ್ಲದೆ‌ ಸಾ’ವಿ’ನ ನಂತರ ಅಂಧರ ಬಾಳಿನ ಬೆಳಕಾದ ಅಪ್ಪುರ ಅಕಾಲಿಕ ನಿ’ಧ’ನ ಅವರ ಅಭಿಮಾನಿಗಳಿಗೆ ಭಾರಿ ಆ’ಘಾ’ತ ನೀಡಿದ್ದು ಇದರಿಂದಾಗಿ ಅನೇಕ‌‌ ಅಭಿಮಾನಿಗಳು ಮಾನಸಿಕ ಖಿ’ನ್ನ’ತೆಗೊಳಗಾಗಿ ರಾಜ್ಯಾದ್ಯಂತ ಆ’ತ್ಮಹ’ತ್ಯೆ ಮಾಡಿಕೊಂಡಿದ್ದಕ್ಕೆ ನೋಂದ ಅಶ್ವಿನಿ ಆ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

[widget id=”custom_html-3″]

Advertisements

ಇನ್ನು ಅಶ್ವಿನಿ ಪುನೀತ ರಾಜ್ ಕುಮಾರ್ ಅವರು ಬರೆದ ಪತ್ರವು ಭಾವನಾತ್ಮಕವಾಗಿದ್ದು ಮನಸ್ಸಿನ ಮಾತುಗಳನ್ನು ಭಾವನಾತ್ಮಕವಾಗಿ ಅಭಿಮಾನಿಗಳ‌ ಮುಂದೆ ಬಿಚ್ಚಿಟ್ಟಿದ್ದಾರೆ ಅಶ್ವಿನಿ. ಪತ್ರದಲ್ಲಿ ಅಶ್ವಿನಿ ಅವರು ಬರೆದಿದ್ದು, ಪುನೀತ್‌ ರಾಜ್‌ಕುಮಾರ್‌ ಅವರ ಅಕಾಲಿಕ ಅಗಲಿಕೆ ನಮಗಷ್ಟೇ ಅಲ್ಲದೇ ಇಡೀ ರಾಜ್ಯಕ್ಕೆ ಆ’ಘಾ’ತಕಾರಿ ವಿಷಯ. ನಿಷ್ಕಲ್ಮಶ ಪ್ರೀತಿಯಿಂದ, ಅಕ್ಕರೆಯ ಅಭಿಮಾನದಿಂದ ಅವರನ್ನು ʼಪವರ್‌ ಸ್ಟಾರ್‌ʼ ಆಗಿ ರೂಪಿಸಿದ್ದ ನಿಮ್ಮೆಲ್ಲರಿಗೆ ಅವರ ವಿ’ದಾ’ಯ ತಂದಿತ್ತ ದುಃಖ ಎಷ್ಟಿರಬಹುದೆಂದು ಊಹಿಸಲು ಸಾಧ್ಯವಿಲ್ಲ. ಆದರೂ ಇಂತಹ ಸಂದರ್ಭದಲ್ಲಿ ನೀವುಗಳು ಎಲ್ಲಿಯೂ ಸಂಯಮ ಕಳೆದುಕೊಳ್ಳದೇ, ಅಹಿತಕರ ಘ’ಟ’ನೆಗಳು ನಡೆಯಲು ಬಡದೇ ಅವರಿಗೊಂದು ಅತ್ಯಂತ ಗೌರವಯುತ ಬೀಳ್ಕೊಡುಗೆ ನೀಡುವಲ್ಲಿ ಸಹಕರಿಸಿದ್ದೀರಿ.

[widget id=”custom_html-3″]

ಸಿನಿಮಾ ಪ್ರೇಮಿಗಳಷ್ಟೇ ಅಲ್ಲದೇ, ವಯೋಮಾನದ ಮಿತಿಯಿಲ್ಲದೇ, ದೇಶ ವಿದೇಶಗಳಿಂದ ಕೋಟ್ಯಾಂತರ ಜನರು ಸಂತಾಪ ಸೂಚಿಸುವುದನ್ನು ಕಂಡಾಗ ಮನಸ್ಸು ಭಾರವಾಗುತ್ತದೆ. ನಿಮ್ಮ ಪ್ರೀತಿಯ ಅಪ್ಪು ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಾ ಸಾವಿರಾರು ಸಂಖ್ಯೆಯಲ್ಲಿ ನೇ’ತ್ರದಾನಕ್ಕೆ ನೋಂದಣಿ ಮಾಡಿಸುವುದನ್ನು ನೋಡಿದಾಗ ಕಣ್ತುಂಬಿ ಬರುತ್ತದೆ. ಅವರನ್ನು ಆದರ್ಶವಾಗಿಟ್ಟುಕೊಂಡು ನೀವುಗಳು ಮಾಡುವ ಸತ್ಕಾರ್ಯಗಳಲ್ಲಿ, ಅವರ ನೆನಪುಗಳು ನಿಮ್ಮಲ್ಲಿ ಮೂಡಿಸುವ ಉತ್ಸಾಹದಲ್ಲಿ ಅವರೆಂದಿಗೂ ಜೀ’ವಂ’ತವಾಗಿರುತ್ತಾರೆ. ವಿಶ್ವದಾದ್ಯಂತ ನಮ್ಮ ಶೋಕವನ್ನು ಹಂಚಿಕೊಂಡು ಬೆಂಬಲಕ್ಕೆ ನಿಂತ ಎಲ್ಲಾ ಸಹೃದಯಿ ಅಭಿಮಾನಿ ದೇವರುಗಳು ಮತ್ತು ಸಾರ್ವಜನಿಕರಿಗೆ ನಮ್ಮ ಇಡೀ ಕುಟುಂಬದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು ಎಂದು ಅಶ್ವಿನಿ ಅವರು ತಮ್ಮ ಪತ್ರ ಬರೆದಿದ್ದಾರೆ.