Advertisements

ಪುನೀತ್ ರವರ ಪತ್ನಿ ಅಶ್ವಿನಿ ರವರ ತಂದೆ ತಾಯಿ ಯಾರು.. ಅವರ ಕುಟುಂಬ ಹೇಗಿದೆ! ಇವರು ಎಲ್ಲಿನವರು ಗೊತ್ತಾ?

Cinema

ಪುನೀತ್ ರಾಜಕುಮಾರ್ ಅವರ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ರವರು ಪತಿಯ ಹಿಂದಿನ ಪವರ್ ಆಗಿದ್ದರು. ಪುನೀತ್ ಅವರು ಮಾಡುತ್ತಿದ್ದ ಎಲ್ಲಾ ಕೆಲಸಗಳಿಗೂ ಬೆನ್ನೆಲುಬಾಗಿ ನಿಂತು ಎಲ್ಲದಕ್ಕೂ ಸಪೋರ್ಟ್ ಮಾಡುತ್ತಾ ಅವರ ಯಶಸ್ಸಿನ ಮಹಿಳೆ ಆಗಿದ್ದರು. ಗಂಡನ ಹಾಗೆ ಅವರು ಸಹ ಅತ್ಯಂತ ಸರಳ ಸ್ವಭಾವ ಹೊಂದಿದವರು. ಅಶ್ವಿನಿ ಅವರ ತಂದೆ ತಾಯಿ ಯಾರು ಮತ್ತು ಅವರ ಕುಟುಂಬ ಹೇಗಿದೆ ಮೂಲತಹಃ ಅವರು ಎಲ್ಲಿನವರು ಗೊತ್ತಾ.. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಆಗ ವಾಸಮಾಡುತ್ತಿದ್ದದ್ದು ಬೆಂಗಳೂರಿನಲ್ಲಿ ಆದರೆ ಮೂಲತಃ ಇವರ ಕುಟುಂಬದವರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾಗದ ಮನೆಯ ಗ್ರಾಮದವರು ಎನ್ನಲಾಗಿದೆ.

[widget id=”custom_html-3″]

Advertisements

ಅಶ್ವಿನಿ ಅವರು ಹುಟ್ಟಿದ್ದು ಮಾರ್ಚ್ ಹದಿನಾಲ್ಕು 1981 ರಲ್ಲಿ ಈಗ ಅಶ್ವಿನಿ ಅವರಿಗೆ 40 ವರ್ಷ ವಯಸ್ಸು. ಅಶ್ವಿನಿ ರವರ ಮೊದಲ ಹೆಸರು ಅಶ್ವಿನಿ ರೇವನಾಥ್. ಅಶ್ವಿನಿ ಅವರ ತಂದೆ ಹೆಸರು ರೇವನಾಥ್ ರವರು ಬೆಂಗಳೂರಿನ ಮಹಾನಗರಪಾಲಿಕೆಯಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಇನ್ನು ಅಶ್ವಿನಿ ಅವರ ತಾಯಿ ಬೆಂಗಳೂರಿನ ವಿಜಯ ಕಾಲೇಜಿನ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದರು. ಅಶ್ವಿನಿ ಅವರಿಗೆ ಒಬ್ಬ ತಂಗಿ ಮತ್ತು ತಮ್ಮ ಇದ್ದಾರೆ. ಇವರ ತಂಗಿಯ ಹೆಸರು ಡಿಂಪಲ್ ಹಾಗೂ ತಮ್ಮನ ಹೆಸರು ವಿನಯ್.

[widget id=”custom_html-3″]


ಪುನೀತ್ ರಾಜಕುಮಾರ್ ಅಶ್ವಿನಿಯವರದ್ದು ಪ್ರೇಮ ವಿವಾಹ ಕಾಮನ್ ಫ್ರೆಂಡ್ ಮೂಲಕ ಪುನೀತ್ ರವರಿಗೆ ಅಶ್ವಿನಿಯವರ ಪರಿಚಯವಾಗಿ ಪರಿಚಯ ಪ್ರೀತಿಗೆ ತಿರುಗಿ ಒಬ್ಬರನ್ನೊಬ್ಬರು ಪ್ರೀತಿಸಲು ಶುರುಮಾಡಿದರು. ನಂತರ ಪುನೀತ್ ಅವರ ಮನೆಯಲ್ಲಿ ಒಪ್ಪಿಗೆ ಸಿಕ್ಕರು ಅಶ್ವಿನಿ ಅವರ ಮನೆಯಲ್ಲಿ ಒಪ್ಪಿಸಲು ಕಷ್ಟವಾಗಿತ್ತಂತೆ. ಅಂತೂ ಕುಟುಂಬದವರ ಒಪ್ಪಿಗೆ ಪಡೆದು ಅಶ್ವಿನಿ ಅವರನ್ನು 1999 ರ ಡಿಸೆಂಬರ್ ಒಂದರಂದು ವರಿಸಿದರು ಪುನೀತ್ ರಾಜಕುಮಾರ್ . ಇವರ ಮದುವೆ ಬೆಂಗಳೂರಿನ ರಾಜರಾಜೇಶ್ವರಿನಗರದ ಒಂದು ಕಲ್ಯಾಣ ಮಂಟಪದಲ್ಲಿ ಮದುವೆ ನಡೆದಿತ್ತು..