Advertisements

ಮದುವೆಯಲ್ಲಿ ಕಾಣಿಸಿಕೊಂಡ ಅಶ್ವಿನಿ ನೆಂಟರ ಜೊತೆ ಎಷ್ಟು ಖುಷಿಯಾಗಿದ್ದಾರೆ ನೋಡಿ..

Cinema

ಅಪ್ಪು ಮಾಮನ ಅಗಲಿಕೆ ನಟ ವಿಜಯ್ ರಾಘವೇಂದ್ರ ಹಾಗೂ ಸ್ಪಂಧನ ದಂಪತಿಗಳಿಗೆ ದೊಡ್ಡ ಆಘಾತವಾಗಿದ್ದು ಈ ನಡುವೆ ಚಿತ್ರರಂಗದ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಪುನೀತ್ ಬಗ್ಗೆ ಭಾವನಾತ್ಮಕವಾದ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. ತೀರದ ಸಂಕಟ. ಮಾಸದ ಮೌನ. ಆರದ ಗಾಯ. ನಿಮ್ಮ ನಗು ಮೊಗದ ನೆನಪುಗಳಿಂದಾಗಲಿ ಎಲ್ಲ ನೋವುಗಳು ಮಾಯ. ನೀವು ಎಲ್ಲಾ ಶಕ್ತಿಯೊಂದಿಗೆ ನಮ್ಮ ನೆನಪುಗಳಲ್ಲಿ ಬದುಕುತ್ತೀರಿ. ನಮ್ಮ ಅಪ್ಪು ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಪುನೀತ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದು ವಿಜಯ್ ರಾಘವೇಂದ್ರ ಅವರು ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮದಲ್ಲಿ ಪುನೀತ್ ಅವರಿಗೆ ಗೌರವ ಸಲ್ಲಿಸಲು ಅಪ್ಪು ನಮನ ಸಂಚಿಕೆಯಲ್ಲಿ ಪಾಲ್ಗೊಂಡಿದ್ದು ಡ್ಯಾನ್ಸಿಂಗ್‌ನಲ್ಲಿ ನನಗೆ ಮೂನ್ ವಾಕ್ ಹೇಳಿಕೊಟ್ಟವರು ಸೈಕಲ್ ತುಳಿಯುವುದನ್ನು ಹೇಳಿಕೊಟ್ಟವರು ನನಗೆ ಸಪೋರ್ಟ್ ಸಿಸ್ಟಮ್ ಆಗಿದ್ದವರು ಅಪ್ಪು ಎಂದು ಅಪ್ಪು ಅವರ ಜೊತೆಗಿನ ಒಡನಾಟದ ಬಗೆಗಿನ ಎಲ್ಲ ವಿಚಾರಗಳನ್ನು ಮೆಲುಕು ಹಾಕುತ್ತಾ ವೇದಿಕೆಯಲ್ಲೇ ಬಿಕ್ಕಿ ಬಿಕ್ಕಿ ಅತ್ತಿದ್ದರು.

Advertisements

ಹೌದು ವಿಜಯ್ ರಾಘವೇಂದ್ರ ರವರು ಇನ್‌ಸ್ಟಾಗ್ರಾಮ್ ನ ಈ ಪೋಸ್ಟ್‌ಗೆ ನೆಟ್ಟಿಗರು ಸಹ ಸಹ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದು ಅಪ್ಪು ಅನ್ನೋ ಪದಕ್ಕೆ ನೂರಾರು ಅರ್ಥ ಹುಟ್ಟು ಹಾಕಿದ ಪುನೀತ್ ರಾಜ್ ಕುಮಾರ್ ಒಳ್ಳೆಯದನ್ನೇ ಮಾಡಿದ್ದರು ಸಹಾಯಕ್ಕಾಗಿ ಅಪ್ಪು ಸ್ನೇಹಕ್ಕಾಗಿ ಅಪ್ಪು ಪ್ರೀತಿಗಾಗಿ ಅಪ್ಪು ವಾತ್ಸಲ್ಯಕಾಗಿ ಅಪ್ಪು ಜೀವನದ ಮೌಲ್ಯ ಅಪ್ಪು ಕುಟುಂಬಕ್ಕಾಗಿ ಅಪ್ಪು ಹೀಗೇ ನೂರಾರು ಅರ್ಥ ಕೊಡುವ ಅಪ್ಪು ನಿಜಕ್ಕೂ ಪುನೀತ. ನಿಮ್ಮ ಜೊತೆಯಲ್ಲಿ ಅಪ್ಪುನ ನೋಡುತ್ತಾ ಇದ್ದರೆ ತುಂಬಾ ಖುಷಿ ಆಗುತ್ತೆ ಆದರೆ ಅಪ್ಪು ಇಲ್ಲ ಅಂತ ಅನಿಸಿ ಒಂದು ಕ್ಷಣ ಮನಸ್ಸಿಗೆ ದುಃಖ ನೋವು ಎರಡು ಆಗುತ್ತದೆ.ಈ ಆತ್ಮಕ್ಕೆ ಪರಮಾತ್ಮ ನೀವು. ನೀವು ಇಲ್ಲ ಅಂತ ನಾನು ಇವತ್ತು ನಂಬಲ್ಲ. ಇನ್ನು ಯಾವತ್ತೂ ನಂಬಲ್ಲ ನನಗೆ ನೆನಪು ಇರುವುದು ನಿಮ್ಮ ನಗು ಅಷ್ಟೇ.

ವಿಶೇಷವಾಗಿ ಪುನೀತ್‌ ರಾಜ್‌ಕುಮಾರ್‌ ರವರ ಸಮಾಧಿ ದರ್ಶನಕ್ಕೆ ಅಭಿಮಾನಿಗಳ ದಂಡು ಹರಿದು ಬರುತ್ತಲೇ ಇದೆ. ಹೌದು ಮಕ್ಕಳು ಮಹಿಳೆಯರು ವೃದ್ಧರು ಕೂಡ ಬಂದು ಪುನೀತ್‌ಗೆ ನಮನ ಸಲ್ಲಿಸುತ್ತಿದ್ದಾರೆ. ಎಲ್ಲರೂ ಶಾಂತಿಯುತವಾಗಿ ಸಮಾಧಿ ದರ್ಶನ ಪಡೆಯಲು ಪೊಲೀಸರು ಸೂಕ್ತ ಭದ್ರತೆ ಕಲ್ಪಿಸಿದ್ದು ಇನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಪು ಹಾಗೂ ಅಶ್ವಿನಿ ಅವರ ಹಲವಾರು ವೀಡಿಯೋಗಳು ವೈರಲ್ ಆಗಿದ್ದು ಇದೀಗ ಇದರ ಬೆನ್ನಲ್ಲೇ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂಧನ ಹಾಗೂ ಅಶ್ವಿನಿ ಅವರು ಜೊತೆಗಿರುವ ವಿಡಿಯೋ ವೈರಲ್ ಆಗಿದ್ದು ಈ ಆದ್ಭುತ ಕ್ಷಣಗಳು ತುಂಬಾನೇ ಖುಷಿ ತಂದಿದೆ.. ಹೌದು ಅಪ್ಪು ತೀರಿಕೊಂಡ ದಿನದಿಂದಲೂ ಕೂಡ ಅಶ್ವಿನಿ ಯಾವುದೇ ಮದುವೆ ಸಮಾರಂಭಗಳಿಗೆ ಭೇಟಿ ಕೊಟ್ಟಿರಲಿಲ್ಲ.. ಆದರೆ ಇಂದು ಮದುವೆಯಲ್ಲಿ ಕಾಣಿಸಿಕೊಂಡ ಅಶ್ವಿನಿ! ನೆಂಟರ ಜೊತೆ ತುಂಬಾನೇ ಖುಷಿಯಾಗಿದ್ದಾರೆ.