Advertisements

24 ದಿನಗಳ ಬಳಿಕ ಎಲ್ಲರ ಒಪ್ಪಿಗೆಯಂತೆ ಸಿಹಿ ಸುದ್ದಿ ಕೊಟ್ಟ ಅಶ್ವಿನಿ.. ಅದೇನು ಗೊತ್ತೇ!

Cinema

ಪ್ರಿಯ ವೀಕ್ಷಕರೆ ಸಮಯ ಅದೆಷ್ಟೆಲ್ಲವನ್ನು ಕೂಡಿಸಿ‌ ಕಳೆದು ಬೀಡುತ್ತದೆ ಗೊತ್ತಾಗೊದೆ‌ ಇಲ್ಲ. ಈ ಕಾಲ‌ ಚಕ್ರ ಅನ್ನೊದೆ ಹಾಗೆ ಎಲ್ಲವನ್ನು ‌ ಉರುಳಿಸಿ ಸುಮ್ಮನಾಗಿ ಹೋಗುತ್ತೆ. ನಿತ್ಯ ಜಗತ್ತನಲ್ಲಿ ಎನೆಲ್ಲಾ ನಡೆದರು‌ ಮತ್ತೆ ವಾಸ್ತವದ ಸ್ಥಿತಿ‌ ತಲುಪುವುದು ಸಹಜ. ಇಂದು ಇರೊರು ನಾಳೆ ಇರಲ್ಲ. ನಾಳೆ ಎಂಬುವುದು ಮತ್ತೆ ಇಂದಿನ ದಿನಕ್ಕೆ ಸಮನಾಗಿ ಹೋಗುತ್ತೆ ಎನ್ನುವುದು ವಾಸ್ತವದ ಸತ್ಯ. ವಾಸ್ತವಕ್ಕೆ‌ ಇನ್ನು ಹತ್ತಿರ ಅಪ್ಪು‌ ನಮ್ಮನ್ನೆಲ್ಲ ಅಗಲಿ ಅದಾಗಲೇ 20 ದಿನಗಳು ಕಳೆದು ಹೋಗಿವೆ. ವಾಟ್ಸ್ ಆ್ಯಪ್ ಸ್ಟೇಟಸ್, ಡಿಪಿ, ಫೇಸ್ ಬುಕ್, ಇನ್ ಸ್ಟಾಗ್ರಾಮ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಪುನೀತ್ ಅವರ ಫೋಟೊ‌ ವಿಡಿಯೋಗಳನ್ನು ಕಂಡರೆ ಸಾಕು‌ ಮನಸ್ಸು ಅದೆಷ್ಟೊ‌ ನೋವು ನುಂಗುತ್ತೆ. ರಾಜ್ ಕುಟುಂಬ ಅಭಿಮಾನಿ‌‌ ಬಳಗ ನೋಡಿದರೆ ಸಾಕು ಅದೇಗೆ ಅಪ್ಪು ನಮ್ಮನ್ನೆಲ್ಲ ಅ’ಗ’ಲಿದರು. ಆದರೆ ಆಗಿಹೋಗಿದ್ದ ಘ’ಟ’ನೆಯನ್ನೆ ನೆ’ನೆ’ದು ಕುಳಿತರೆ ವಾಸ್ಯವ ಬದುಕು ಇನ್ನು ವಿಭಿನ್ನವಾಗಿದ್ದು ಹಲವು ಸವಾಲುಗಳನ್ನು ಎದುರಿಸಬೇಕಾಗಿರುವುದು ಸಹಜ. ಅದೇ ರೀತಿ ಅಶ್ವಿನಿ ಕೂಡ‌ ಈ 20 ದಿನಗಳ‌ ಬಳಿಕ ಮಹತ್ವ ನಿರ್ಧಾರ ಕೈಗೊಂಡಿದ್ದಾರೆ ಅದೇನು ಗೊತ್ತೇ..

Advertisements

ಪುನೀತ್ ರಾಜ್ ಕುಮಾರ್ ಸಮಾಜ ಸೇವೆಯ ಜೊತೆಗೆ ಕುಟುಂಬ,‌ ಮಕ್ಕಳೆಂದರೆ ಹೆಚ್ಚು ಇಷ್ಟ. ಒಬ್ಬ ಮಗನಾಗಿ, ತಂದೆಯಾಗಿ, ಅಣ್ಣನಾಗಿ,‌ ತಮ್ಮನಾಗಿ ಎಲ್ಲ ಸಂಬಂಧಗಳನ್ನು ಅಪ್ಪು ಚನ್ನಾಗಿ ನಡೆಸಿಕೊಂಡು ಹೋಗುತ್ತಿದ್ದರು. ಇದಷ್ಟೆ ಅಲ್ಲದೆ ಪುನೀತ ಕುಟುಂಬಕ್ಕಾಗಿ ಸಮಾಜಕ್ಕಾಗಿ ಹಲವು ಅಭಿವೃದ್ಧಿ ಕಾರ್ಯಗಳನ್ನು‌ ಮಾಡಿದ್ದು ಇಡೀ ಕರುನಾಡಿನ ಮನೆ ಮನಗಳಲ್ಲಿ ಚಿರುರುಣಿಯಾಗಿದ್ದಾರೆ. ಕನ್ನಡದ ಕೋಟ್ಯಾಧಿಪತಿ ನಡೆಸಿಕೊಡುವಾಗಲು ಅವರು ಭಾಗಿಯಾದ ಸ್ಪರ್ಧಾಳುಗಳಿಗೆ ಕುಟುಂಬಕ್ಕೆ ಮೊದಲ‌ ಆದ್ಯತೆ ನೀಡಬೇಕೆಂದು ಹೇಳುತಿದ್ದರು. ಅವರು ಕೆಲಸದಲ್ಲಿ ಎಷ್ಟೆ ಬ್ಯುಸಿಯಾಗಿದ್ದರು ಕುಟುಂಬದ ಕುರಿತಾಗಿ ಅವರಿಗಿದ್ದ ಕಾಳಜಿ ನಿಜಕ್ಕೂ ಶ್ಲಾಘನೀಯ. ಇಂತಹದ್ದರಲ್ಲಿ ಅಪ್ಪುವಿನ ಅಕಾಲಿಕ ನಿ’ಧ’ನ ಅವರ ಕುಟುಂಬಕ್ಕೆ ಭರಿಸಲಾಗದ ನೋವು. ಕುಮಾರ್ ಮನೆತನದ ಸೊಸೆ ಅಶ್ವಿನಿಗೆ ಮಕ್ಕಳ ಕುಟುಂಬದ ಸಂಪೂರ್ಣ ಜವಾಬ್ದಾರಿ ಅವರ ಹೇಗಲೆರಿದೆ. ಅಪ್ಪು ಇರುವಾಗ ಯಾವಾಗಲಾದರೂ ಒಮ್ಮೆ ಮಾಧ್ಯಮಗಳ‌ ಮುಂದೆ‌ ಕಾಣಿಸಿಕೊಳ್ಳುತ್ತಿದ್ದ ಅಶ್ವಿನಿ ಅಪ್ಪು ಇಲ್ಲದ ಈ ಕ್ಷಣಗಳನ್ನು‌, ಎಲ್ಲ‌ ದುಖಃಗಳನ್ನು ಒಡಲಾಳದಲ್ಲಿ ಇಟ್ಟುಕೊಂಡು ಎಲ್ಲರಿಗೂ‌ ಸ್ಪಂದಿಸಿರುವ ರೀತಿ‌ ನಿಜಕ್ಕೂ‌ ಕಷ್ಟ.

ಇಂದಿನ ಕಾಲದಲ್ಲಿ ತಮ್ಮ‌ ದಿನನಿತ್ಯದ ಅಗುಹೋಗುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಸೆಲೆಬ್ರಿಟಿಗಳ‌ ಮಧ್ಯ ಅಶ್ವಿನಿ ಪುನೀತ್ ರಾಜ್‍ಕುಮಾರ್ ಮಾತ್ರ ತಾವಾಯ್ತು ತಮ್ಮ ಕುಟುಂಬ ಆಯ್ತು ಅಂತ ಇದ್ದರೂ. ಯಾವತ್ತಿಗೂ ಸಾಮಾಜಿಕ ಜಾಲತಾಣದಲ್ಲಿ ‌ಕಾಣಿಸಿಕೊಂಡವರಲ್ಲ. ಅಶ್ವಿನಿ ಹಾಗೂ ಅವರಿಬ್ಬರು ಮಕ್ಕಳು ಸಾಮಾಜಿಕ ಜಾಲತಾಣಗಳಿಂದ ದೂರವಿರುವುದೆ ಅವರ ಸರಳ‌ ಜೀವನಕ್ಕೆ ದೊಡ್ಡ ಉದಾಹರಣೆ. ಆದರೆ ಈಗ ಕಾಲ‌ ಬದಲಾಗಿದೆ, ಜವಾಬ್ದಾರಿಗಳು ಹೇಗಲೆರಿದಾಗ ನಿಭಾಯಿಸಲೆಬೇಕಾಗುತ್ತದೆ. ಕಳೆದ ಆರು ವರ್ಷಗಳಿಂದ ಧಾರಾವಾಹಿ‌ ಹಾಗೂ ಸಿನೆಮಾ ನಿರ್ಮಾಣದ ಜವಾಬ್ದಾರಿಗಳನ್ನು ‌ಹೊತ್ತಿದ್ದ ಅಶ್ವಿನಿ ಇವುಗಳ‌ ಕುರಿತು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಅಭಿಮಾನಿಗಳಿಗೆ ಯಾವುದಾದರೂ ವಿಷಯದ ಕುರಿತು ತಿಳಿಸಬೇಕಾದರೆ ಪುನೀತ್ ರಾಜ್‍ಕುಮಾರ್ ಮೂಲಕವೇ ತಿಳಿಸುತ್ತಿದ್ದರು..

ಈಗ ಅಪ್ಪು ನಮ್ಮ ಮಧ್ಯ ಇಲ್ಲ ಹಾಗಾಗಿ ಎಲ್ಲವು ಅಶ್ವಿನಿ ಜವಾಬ್ದಾರಿ, ವಾಸ್ತವನ್ನು ಅರಿತು ನಡೆಯುವುದೇ ಬದುಕು. ಹೀಗಿರುವಾಗ ಅಭಿಮಾನಿಗಳಿಗೆ ‌ಎನನ್ನಾನಾದರೂ ತಿಳಿಸಬೇಕಾದರೆ ಅದು‌ ಸಾಮಾಜಿಕ ಜಾಲತಾಣದಿಂದ ಮಾತ್ರ ಸಾಧ್ಯ. ಪುನೀತ್ ರಾಜ್‍ಕುಮಾರ್ ಅವರ ಕುಟುಂಬ, ಆರ್.ಕೆ ಪ್ರೊಡಕ್ಷನ್ ಅಥವಾ ಮತ್ಯಾವುದೇ ವಿಷಯಗಳನ್ನು, ಸುದ್ದಿಗಳನ್ನು ತಿಳಿಸಬೇಕಾದ ಕಾರಣ ಅಶ್ವಿನಿ‌ ಫೇಸ್ ಬುಕ್ ಪುಟವೊಂದನ್ನು ತರೆದಿದ್ದಾರೆ. ಇನ್ನು ಆ ಪುಟಕ್ಕೆ ಪುನೀತ್ ಅವರ ಫೋಟೊ‌ ಹಾಕಿದ್ದು ಮೊದಲ‌ ಪೋಸ್ಟ್ ನಲ್ಲೆ‌ ಅಭಿಮಾನಿಗಳು ಅಪ್ಪು‌ಮೇಲೆ ಇಟ್ಟ ಪ್ರೀತಿ ಅಭಿಮಾನಕ್ಕೆ ಹಾಗೂ ಅಪ್ಪು ಅಗಲಿದಾಗ ಕುಟುಂಬಕ್ಕೆ‌‌ ಬೆಂಬಲವಾಗಿ ನಿಂತಿದಕ್ಕೆ‌ ಕೃತಜ್ಞತೆ ತಿಳಿಸಿದ್ದಾರೆ. ರಾಜ್ ಕುಟುಂಬದ ರಾಘಣ್ಣ, ಶಿವಣ್ಣ, ಯುವರಾಜ್ ಸೇರಿದಂತೆ ಕುಟುಂಬದ ಎಲ್ಲಾ ಸದಸ್ಯರು ಈ ಪುಟವನ್ನು ಹಂಚಿಕೊಂಡಿದ್ದು ಅಧಿಕೃತ ಪುಟವೆಂದು ತಿಳಿಸಿದ್ದಾರೆ. ರಾಘಣ್ಣ, ಶಿವಣ್ಣ, ಯುವರಾಜ್ ಬೆಂಬಲದಂತೆ ಈ ನಿರ್ಧಾರಕ್ಕೆ ಬಂದಿದ್ದಾರೆ. ಇ ನ್ನು ಅಭಿಮಾನಿಗಳು ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರ ಕುರಿತಾದ ಮಾಹಿತಿಗಳಿಗಾಗಿ‌ ಈ‌ ಪುಟವನ್ನು‌ ಫೋಲೊ ಮಾಡಬಹುದಾಗಿದೆ.. ಒಟ್ಟಿನಲ್ಲಿ ಅಶ್ವಿನಿ ಪುನೀತ್ ರವರ ಜವಾಬ್ದಾರಿಯನ್ನು ಹೊರಲು ಮುಂದಾಗಿದ್ದು ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ..