Advertisements

ಶಕ್ತಿ ಧಾಮಕ್ಕೆ ಬಂದು ಅಶ್ವಿನಿ ಅವರು ಮಾಡಿದ ಕೆಲಸಕ್ಕೆ ಕಣ್ಣೀರಿಟ್ಟ ಮಕ್ಕಳು.. ಬಡ ಮಕ್ಕಳಿಗೆ ಅಶ್ವಿನಿ ಮಾಡಿದ್ದೇನು ಗೊತ್ತಾ?

Cinema

ಅನಾಥ ಮಕ್ಕಳಿಗೆ ಆಸರೆಯಾದ ಅಶ್ವಿನಿ ಪ್ರಿಯ ಓದುಗರೆ ಮುಗುಳುನಗೆ ಸರ್ದಾರ, ಬಡವರ ಬಂಧು ಎಂದೇ ಹೆಸರಾದ ಪುನೀತ್ ರಾಜಕುಮಾರ ಅವರು ಅಗಲಿ ಇದೀಗ ಎರಡು ತಿಂಗಳುಗಳು ಗತಿಸಿವೆ. ಆದರೆ ಅವರ ಅಭಿಮಾನಿಗಳು ಅವರನ್ನು ಜೀವಂತವಾಗಿಸಿದ್ದಾರೆ. ಅವರನ್ನು ಇದ್ದಾಗ ನೋಡಲು ಹಂಬಲಿಸಿದ ಹೃದಯಗಳು ಇಂದು ಮರುಗುತ್ತಿವೆ. ಅವರ ಸಮಾಧಿಯನ್ನಾದರೂ ನೋಡೋಣ ಎಂದು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಇಂದಿಗೂ ಕಂಠೀರವ ಸ್ಟೇಡಿಯಂನಲ್ಲಿ ಸೇರುತ್ತಿದ್ದಾರೆ. ಅಪ್ಪು ಆ’ತ್ಮ’ಕ್ಕೆ ಶಾಂತಿ ಸಿಗಲಿ, ಮತ್ತೆ ಹುಟ್ಟಿ ಬಾ ಅಪ್ಪು ಎಂದು ಹೇಳುತ್ತಿದ್ದಾರೆ. ಇನ್ನು ಅವರ ಪತ್ನಿ ಅಶ್ವಿನಿ ನೋವುಗಳನ್ನು ನುಂಗಿ ಅಪ್ಪು ಮಾಡುತ್ತಿದ್ದ ಕಾರ್ಯಗಳನ್ನು ಮುಂದುವರಿಸಲು ಕೆಲ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

[widget id=”custom_html-3″]

Advertisements

ಅಪ್ಪು ಅಗಲಿಕೆಯನ್ನು ಕುಟುಂಬ ಮಾತ್ರವಲ್ಲ, ಲಕ್ಷಾಂತರ ಅಭಿಮಾನಿಗಳು, ಆ ಸಾವಿರಾರು ಅನಾಥ ಮಕ್ಕಳು ನೆನೆದು ಈಗಲೂ ಕಣ್ಣೀರು ಹಾಕುತ್ತಿದ್ದಾರೆ. ಅಷ್ಟರಮಟ್ಟಿಗೆ ಅಪ್ಪು ಇವರೆಲ್ಲರ ಪಾಲಿಗೆ ದೇವರಂತ ಆಗಿದ್ದರು. ಈ ನೋವನ್ನು ಅರಿತ ಸಹೃದಯಿ, ಕರುಣಾಳು ಅಪ್ಪು ಧರ್ಮಪತ್ನಿ ಅಶ್ವಿನಿ ಅವರು ಶಕ್ತಿ ಧಾಮಕ್ಕೆ ಮಕ್ಕೆ ಭೇಟಿ ನೀಡಿದ್ದಾರೆ. ಇವರೊಂದಿಗೆ ಶಿವಣ್ಣ ಕೂಡ ಧಾವಿಸಿದ್ದು, ಎಲ್ಲಾ ಅನಾಥ ಮಕ್ಕಳಿಗೂ ಹೊಸಬಟ್ಟೆಗಳನ್ನು ನೀಡಿದರು. ಅವರೆಲ್ಲರಿಗೂ ಸಿಹಿ ತಿನ್ನಿಸಿ, ಅಪ್ಪು ಇಲ್ಲದಿದ್ದರೆ ಏನಾಯ್ತು ನಿಮ್ಮೊಂದಿಗೆ ನಾನು ಶಿವಣ್ಣ ಇದ್ದೇವೆ ಎಂದು ಧೈರ್ಯ ಹೇಳಿದರು.
ಅಪ್ಪು ಅವರು ನಿಮ್ಮನ್ನು ಎಷ್ಟು ಪ್ರೀತಿಸುತ್ತಿದ್ದರೋ ನಾನು ಕೂಡ ನಿಮ್ಮನ್ನು ಅಷ್ಟೇ ಪ್ರೀತಿಸುತ್ತೇನೆ ಎಂದಿದ್ದಾರೆ. ಆ ಮಕ್ಕಳನ್ನು ತಬ್ಬಿ ಮುದ್ದಾಡಿ, ತಮ್ಮ ಎದೆಯಾಳದಲ್ಲಿ ಇರುವ ನೋವನ್ನು ಕಣ್ಣೀರಿನ ಮೂಲಕ ಹೊರಹಾಕಿದ್ದಾರೆ.

[widget id=”custom_html-3″]

ಈ ಮಕ್ಕಳಿಗೆ ಮುಂದೆ ಯಾವ ರೀತಿ ಕುಂದುಕೊ’ರ’ತೆಗಳು ಆಗಬಾರದು. ಅವಶ್ಯಕತೆ ಇರುವುದನ್ನು ಕೂಡಲೇ ಪೂರೈಸುವಂತೆ ಅಲ್ಲಿಯ ಸಿಬ್ಬಂದಿ ವರ್ಗಕ್ಕೆ ತಿಳಿಸಿದ್ದಾರೆ. ಜೊತೆಗೆ 10 ಲಕ್ಷ ರೂಪಾಯಿಯ ಚೆಕ್ಕ್ ನ್ನು ನೀಡಿದ್ದಾರೆ. ಅಪ್ಪು ಅವರ ಧರ್ಮಪತ್ನಿಯಾಗಿ, ದೊಡ್ಮನೆ ಸೊಸೆಯಾಗಿ ಏನು ಮಾಡಬೇಕು ಅದನ್ನೆಲ್ಲ ಮಾಡುತ್ತಿದ್ದಾರೆ. ಮತ್ತೊಮ್ಮೆ ದೊಡ್ಡಮನೆ ಸೊಸೆ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಮೈಸೂರಿನ ಅನಾಥಾಶ್ರಮಕ್ಕೆ ಭೇಟಿ ನೀಡಿದ ಅಶ್ವಿನಿಯವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಇವರ ಈ ಕಾರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮಕ್ಕಳ ನಗುವಿನಲ್ಲಿ ಮತ್ತೆ ಅಪ್ಪು ಊರನ್ನು ನೆನೆದಿದ್ದಾರೆ. ಇವರು ಅಪ್ಪು ತರಾನೇ ಕರುಣಾಮಯಿ. ಹುಟ್ಟಿದ ಮಕ್ಕಳನ್ನೇ ಬೀದಿಯಲ್ಲಿ, ಕಸ, ಕಂಟಿಯಲ್ಲಿ ಬಿಟ್ಟು ಹೋಗುವ ಈ ಕಾಲದಲ್ಲಿ ಸಾವಿರಾರು ಅನಾಥ ಮಕ್ಕಳ ಜವಾಬ್ದಾರಿ ಅಶ್ವಿನಿಯವರು ಹೊತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಶ್ವಿನಿಯವರ ಮಾನವೀಯತೆ ಕುರಿತು ಮೆಚ್ಚುಗೆ ವ್ಯಕ್ತವಾಗುತ್ತಿದೆ.

[widget id=”custom_html-3″]