Advertisements

ಅಪ್ಪು ಪತ್ನಿ ಅಶ್ವಿನಿ ಎಷ್ಟು ಓದಿದ್ದಾರೆ! ಅವರು ಎಲ್ಲಿನವರು ಗೊತ್ತಾ? ಇವರ ಬಗ್ಗೆ ಸಾಕಷ್ಟು ಜನಕ್ಕೆ ಗೊತ್ತಿಲ್ಲ..

Cinema

ಪ್ರಿಯ ಓದುಗರೇ ಅಪ್ಪು ಅಗಲಿಕೆಯನ್ನು ಇಂದಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜೊತೆಗಿರದ ಜೀ’ವ ಎಂದಿಗಿಂತ ಜೀವಂತ ಎನ್ನುವ ಅವರ ಮಾತು ನಿಜ. ಅವರು ಮಾಡಿದ ಅದೆಷ್ಟೋ ಪುಣ್ಯದ ಕೆಲಸಗಳಿಂದ ಇಂದಿಗೂ ನಮ್ಮೊಳಗೆ ಜೀ’ವಂತವಾಗಿದ್ದಾರೆ. ಅವರು ಪ್ರೀತಿಸಿ ವಿವಾಹವಾದರೂ, ಇಲ್ಲಿಯವರೆಗೂ ಒಂದೇ ಒಂದು ದಿನ ಕೂಡಾ ಜ’ಗ’ಳವಾಡಿಲ್ಲ. ಹೆಂಡತಿಯೊಂದಿಗೆ ಮನಸ್ತಾಪಗಳು ಇಲ್ಲ. ಮನೆಯ ಸದಸ್ಯರೊಂದಿಗೆ ಎಷ್ಟು ಪ್ರೀತಿಯಿಂದ ಇದ್ದರೋ ಅಷ್ಟೇ ಪ್ರೀತಿಯಿಂದ ಹೊರಗಿನವರೊಂದಿಗೆ ಇದ್ದರು. ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದ ಅಪ್ಪು ಅವರನ್ನು ಅಭಿಮಾನಿಗಳು ಮುಗುಳುನಗೆ ಸರ್ದಾರ ಎಂದು ಕರೆದಿದ್ದರು. ಅದೆಷ್ಟು ನೋವುಗಳನ್ನು ನಗುವಿನಲ್ಲಿ ಅಡಗಿಸಿದವರು ನಮ್ಮ ನಿಮೆಲ್ಲರ ಅಪ್ಪು. ಇದೀಗ ಅವರ ಮ’ರ’ಣ ನಂತರ ಜಾಲತಾಣದಲ್ಲಿ ಅವರ ಪತ್ನಿ ಅಶ್ವಿನಿಯವರ ಅಕೌಂಟ್ ಅನ್ನು ಓಪನ್ ಮಾಡಿ ಕ್ರಿಯಾಶೀಲರಾಗಿದ್ದಾರೆ. ಹೌದು ಇಲ್ಲಿಯವರೆಗೂ ಸಾಮಾಜಿಕ ಜಾಲತಾಣದಲ್ಲಿ ಅಶ್ವಿನಿ ಅವರ ಅಕೌಂಟೇ ಇರಲಿಲ್ಲ. ಪುನೀತ್ ಅವರ ಕಾರ್ಯಗಳನ್ನು, ಅವರ ಆಸೆಗಳನ್ನು ಈಡೇರಿಸಲು, ಅಭಿಮಾನಿಗಳನ್ನು ಸಂತೈಸಲೆಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

[widget id=”custom_html-3″]

Advertisements

ಇದೀಗ ಅಭಿಮಾನಿಗಳು ದೊಡ್ಮನೆ ಸೊಸೆ ಹಾಗೂ ಪುನೀತ್ ರಾಜಕುಮಾರ್ ಅವರ ಧರ್ಮಪತ್ನಿ ಅಶ್ವಿನಿಯವರ ಶಿಕ್ಷಣ ಏನಾಗಿದೆ? ಎಂದು ಚರ್ಚಿಸುತ್ತಿದ್ದಾರೆ. ದೊಡ್ಮನೆ ಸೊಸೆ ಎಂದರೆ ಸುಮ್ನೆನಾ.. ಅವರ ಮನೆಯ ಸೊಸೆಯಾಗುವುದಕ್ಕೆ ಪುಣ್ಯವಿರಬೇಕು. ಈ ಪುಣ್ಯ ಪುನೀತ್ ರಾಜಕುಮಾರ್ ಅವರ ಅಶ್ವಿನಿ ಅವರಿಗೆ ಲಭಿಸಿದೆ. ಇನ್ನು ಅಶ್ವಿನಿಯವರ ಶಿಕ್ಷಣದ ಬಗ್ಗೆ ಹೇಳುವುದಾದರೆ, ಅವರು ಮೂಲತಃ ಮಂಗಳೂರಿನವರು. ಅಶ್ವಿನಿಯವರ ತಂದೆ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿದ್ದವರು. ಮಂಗಳೂರಿನಿಂದ ಬೆಂಗಳೂರಿಗೆ ಟ್ರಾನ್ಸ್ಫರ್ ಆದ ನಂತರ ಬೆಂಗಳೂರಿನಲ್ಲಿಯೇ ನೆಲೆಸಿದರು. ಇನ್ನು ತಾಯಿ ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ನಿವೃತ್ತಿ ಹೊಂದಿದ್ದಾರೆ. ಇವರ ಮುದ್ದಿನ ಮಗಳೇ ಅಶ್ವಿನಿ. ಇವರು ಅತಿ ಸರಳ ಮತ್ತು ಸಜ್ಜನಿಕೆಯ ಹೆಣ್ಣುಮಗಳು ಆಗಿದ್ದವರು. ಇದಕ್ಕೆ ಏನೋ ಅಪ್ಪು ಅವರು ಅಶ್ವಿನಿ ಅವರನ್ನು ನೋಡಿದ ಕೂಡಲೇ ಇಷ್ಟಪಟ್ಟಿದ್ದು. ಅವರನ್ನು ಪ್ರೀತಿಸಿ ವಿವಾಹವಾಗಿದ್ದು.

[widget id=”custom_html-3″]

ಅಶ್ವಿನಿಯವರು ಗ್ರಾಜುಯೇಷನ್ ಮುಗಿಸಿದ್ದಾರೆ. ಆದರೆ ಯಾವುದರಲ್ಲಿ ಎನ್ನುವುದರ ಬಗ್ಗೆ ನಿಖರ ಮಾಹಿತಿ ಇಲ್ಲ. ಜೊತೆಗೆ ಫ್ಯಾಶನ್ ಡಿಸೈನಿಂಗ್ ಕೋರ್ಸ್ ಮುಗಿಸಿದ್ದಾರೆ. ಸದ್ಯಕ್ಕೆ ಕಾಸ್ಟ್ಯೂಮ್ ಡಿಸೈನರ್ ಹಾಗೂ ಪಿಆರ್ಕೆ ಸಂಸ್ಥೆಯ ನಿರ್ಮಾಪಕಿಯಾಗಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಇದು ಅಪ್ಪು ಅವರ ಕನಸು ಕೂಡಾ ಆಗಿತ್ತು. ಇದು ಈಗ ಪತ್ನಿ ಅಶ್ವಿನಿಯವರ ಹೆಗಲ ಮೇಲಿದೆ. ಪುನೀತ್ ಅವರ ಕನಸನ್ನು ಈಡೇರಿಸುವದೇ ಅವರ ಗುರಿಯಾಗಿದೆ. ಅಪ್ಪು ಅವರು ಕಂಡ ಅಷ್ಟು ಕನಸುಗಳನ್ನು ಈಡೇರಿಸುವುದು ಇವರ ಪ್ರಮುಖ ಗುರಿಯಾಗಿದೆ. ಪತಿ ತೋರಿದ ದಾರಿಯನ್ನೇ ಇದೀಗ ಪತ್ನಿ ಅಶ್ವಿನಿ ಅವರು ಅನುಸರಿಸುತ್ತಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ನಾವೆಲ್ಲರೂ ಅವರನ್ನು ಹಾರೈಸೋಣ. ಅವರ ಎಲ್ಲ ಕಾರ್ಯಗಳಿಗೂ ಶುಭವಾಗಲಿ. ನೀವು ಕೂಡ ಅಶ್ವಿನಿಯವರ ಕಾರ್ಯಗಳಿಗೆ ಶುಭಹಾರೈಸಿ..

[widget id=”custom_html-3″]