Advertisements

ಇದು ನಕಲಿ ಯುಗ.. ಒಂದು ಬಾರಿ ನಿಮ್ಮ ಅಸ್ತಿ ಪತ್ರಗಳು ಅಸಲಿಯೊ ಅಥವಾ ನಕಲಿಯೋ ಅನ್ನೋದನ್ನ ನೀವೆ ಪರೀಕ್ಷೆ ಮಾಡಿಕೊಳ್ಳಿ! ಮಾಡೋದು ಹೇಗೆ ನೋಡಿ..

Kannada Mahiti

ಪ್ರಿಯ ಓದುಗರೇ ಇತ್ತೀಚಿನ ದಿನಗಳಲ್ಲಿ ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳುವುದು, ನ’ಕ’ಲಿ ಆಸ್ತಿ ಪತ್ರ ನೀಡಿ ಜನರಿಗೆ ಮೋಸ ಮಾಡುವಂತಹ ಒಂದು ದೊಡ್ಡದಾದ ಜಾಲವೇ ಇದೆ.. ಅಸಲಿ ಪತ್ರಗಳ ಮುಖಕ್ಕೆ ಹೊಡೆದಂತೆ ಈ ನಕಲಿ ಪತ್ರಗಳು ರೆಡಿಯಾಗಿರುತ್ತವೆ. ಇವು ನೋಡಲು ಸೇಮ್ ಟು ಸೇಮ್ ಇರುವುದರಿಂದ ಅಸಲಿ ಯಾವುದು? ನಕಲಿ ಯಾವುದು ಎಂದು ತಿಳಿಯುವುದಿಲ್ಲ. ಹಾಗಾದರೆ ತಿಳಿಯುವುದು ಹೇಗೆ ಅಂತೀರಾ? ಇದು ಹೇಗೆ ಅಂತ ನಾವು ನಿಮಗೆ ತಿಳಸ್ತೀವಿ ಸ್ಟೋರಿನ ಕೊನೆಯವರೆಗೂ ಓದಿ. ಆಸ್ತಿ ಪತ್ರ ಅಸಲಿಯೋ ನಕಲಿಯೋ ಎಂದು ತಿಳಿಯಲು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಇದ್ದರೆ ಕಂಪ್ಯೂಟರನಲ್ಲಿ ಗೂಗಲ್ ಓಪನ್ ಮಾಡಿ.

[widget id=”custom_html-3″]

ಅಲ್ಲಿ ನೀವು ಕಾವೇರಿ ಆನ್ಲೈನ್ ಎಂದು ಟೈಪ್ ಮಾಡಿ ,ನಂತರ ಅದನ್ನು ಸರ್ಚ್ ಮಾಡಬೇಕು. ಕೆಳಗಡೆ ನಿಮಗೆ ಒಂದು ವೆಬ್ಸೈಟ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ಆಗ ಒಂದು ಪುಟ ತೆರೆದುಕೊಳ್ಳುತ್ತದೆ. ನೀವು ರಿಜಿಸ್ಟರ್ ಮಾಡಿಕೊಂಡಿದ್ದರೆ ಯೂಸರ್ ನೇಮ್ ಪಾಸ್ವರ್ಡ್ ಅನ್ನು ಹಾಕಿ ಲೋಗಿನ್ ಆಗಿ. ಹೊಸದಾಗಿ ರಿಜಿಸ್ಟರ್ ಆಗುವುದಿದ್ದರೆ ನೀವು ರಿಜಿಸ್ಟ್ರೇಷನ್ ನೀವ್ ಯೂಸರ್ ಮೇಲೆ ಕ್ಲಿಕ್ ಮಾಡಬೇಕು.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಅಲ್ಲಿ ಕೇಳುವ ಮಾಹಿತಿಯನ್ನು ತುಂಬಬೇಕು. ನಂತರ ನಿಮಗೆ ಪಾಸ್ವರ್ಡ್ ಸಿಗುತ್ತದೆ.ಅದನ್ನು ತೆಗೆದುಕೊಂಡು ಮತ್ತೆ ಮೆನ್ ಪೇಜ್ ಗೆ ಬಂದು ಲಾಗಿನ್ ಆಗಬೇಕು. ಲಾಗಿನ್ ಆದ ನಂತರ ನಿಮ್ಮ ಮೊಬೈಲ್ಗೆ ಒಂದು ಓಟಿಪಿ ಬರುತ್ತದೆ. ಅದನ್ನು ಹಾಕಿ ಲಾಗಿನ್ ಆದಾಗ ನಿಮಗೆ ಕಾವೇರಿ ಆನ್ಲೈನ್ ಸರ್ವಿಸ್ ನ ಎಲ್ಲ ಮಾಹಿತಿಗಳು ಕಾಣಿಸಿಕೊಳ್ಳುತ್ತವೆ. ಅಲ್ಲಿ ನೀವು ಸರ್ವಿಸಸ್ ಎನ್ನುವುದು ಇರುತ್ತದೆ ಅದರ ಕೆಳಗಡೆ ಆನ್ಲೈನ್ ಸಿಸಿ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಕೆಲವು ಮಾಹಿತಿಯನ್ನು ಕೇಳುತ್ತದೆ. ನೀವು ನಿಮ್ಮ ಬಳಿ ಇರುವ ಯಾವುದಾದರೂ ರಿಜಿಸ್ಟ್ರೇಷನ್ ಆಗಿರುವ ನಕಲು ಪ್ರತಿಯನ್ನು ತೆಗೆದುಕೊಂಡು ಅಲ್ಲಿ ಕೇಳುವ ಮಾಹಿತಿಯನ್ನು ತುಂಬೀರಿ. ನಂತರ ಅಲ್ಲಿ ಮೊದಲು ಡಾಕ್ಯುಮೆಂಟ್ ರಿಜಿಸ್ಟ್ರೇಷನ್ ಎಂಬುದನ್ನು ಆಯ್ಕೆ ಮಾಡಿಕೊಂಡು, ನಿಮ್ಮ ಜಿಲ್ಲೆ ಮತ್ತು ತಾಲೂಕನ್ನು ಆಯ್ಕೆ ಮಾಡಿಕೊಳ್ಳಿ. ನಂತರ ಡಾಕ್ಯುಮೆಂಟ್ ನಂಬರ್ ಹಾಕಿ ರಿಜಿಸ್ಟರ್ ಮಾಡಿಕೊಂಡ ದಿನ ನಿಮಗೆ ಆ ನಂಬರ್ ಕೊಟ್ಟಿರುತ್ತಾರೆ.

[widget id=”custom_html-3″]

ಆ ನಂಬರ್ ಹಾಕಬೇಕು. ನಂತರ ಬುಕ್ 1 ಆಯ್ಕೆ ಮಾಡಿಕೊಳ್ಳಬೇಕು. ನಂತರ ನೀವು ರಿಜಿಸ್ಟ್ರೇಷನ್ ಮಾಡಿಕೊಂಡ ವರ್ಷವನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ. ಆಗ ನಿಮಗೆ ರಿಜಿಸ್ಟ್ರೇಷನ್ ಪ್ರತಿ ಕಾಣಿಸುತ್ತದೆ.ಅದನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು ಅಥವಾ ಪ್ರಿಂಟ್ ತೆಗೆದುಕೊಳ್ಳಬಹುದು. ನಂತರ ನಿಮ್ಮ ಬಳಿ ಈಗಾಗಲೇ ಇರುವ ರಿಜಿಸ್ಟ್ರೇಷನ್ ಪತ್ರವನ್ನು ಮತ್ತು ಇದನ್ನು ತುಲನೆ ಮಾಡಿ ನೋಡಬಹುದು. ಇದರಿಂದ ಯಾವುದೇ ರೀತಿ ಮೋಸ ಹೋಗುವುದಕ್ಕೆ ಅವಕಾಶ ಇರುವುದಿಲ್ಲ. ಈ ರೀತಿಯಾಗಿ ರಿಜಿಸ್ಟರ್ ಇಲಾಖೆಯಲ್ಲಿ ನೋಂದಣಿ ಆಗಿರುವ ಕರಪತ್ರ ಆಸ್ತಿ ಪತ್ರ ಅಥವಾ ಸೇಲ್ ಡೀಡ್ ಗಳನ್ನೂ ಅವು ನಕಲಿಯೋ ಅಥವಾ ಅಸಲಿಯೋ ಎಂಬುದನ್ನು ಗುರುತು ಹಿಡಿಯಬಹುದಾಗಿದೆ. ಈ ರೀತಿಯಾಗಿ ನಿಮ್ಮ್ ಆಸ್ತಿ ಪಾತ್ರಗಳು ಅಸಲಿಯೋ ನಕಲಿತೋ ಎಂದು ಸುಲಭವಾಗ ತಿಳಿಯಬಹುದು. ಒಂದು ವೇಳೆ ಇದನ್ನು ಆಪರೇಟ್ ಮಾಡುವ ವಿಧಾನ ನಿಮಗೆ ತಿಳಿಯದಿದ್ದರೆ ಗೊತ್ತಿರುವವರನ್ನು ಪಕ್ಕದಲ್ಲಿ ಕುಡಿಸಿ ಕೊಳ್ಳುವುದು ಉತ್ತಮ.

[widget id=”custom_html-3″]