Advertisements

ಬಾಗಿಲು ಮುಚ್ಚಿದ ಅಟ್ಲಾಸ್ ಬೈಸಿಕಲ್ ಕಂಪನಿ ! ಇನ್ನು ಮುಂದೆ ಅಟ್ಲಾಸ್ ಸೈಕಲ್ ಕೇವಲ ನೆನಪು ಮಾತ್ರ..

Kannada Mahiti

ಭಾರತದಲ್ಲಿ ಅದೊಂದು ಸೈಕಲ್ ಬ್ರಾಂಡ್ ಇತ್ತು. ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಐಕಾನಿಕ್ ಬ್ರಾಂಡ್ ಸೈಕಲ್ ಆಗಿತ್ತು. ಆದರೆ ಇನ್ನು ಮುಂದೆ ಅಟ್ಲಾಸ್ ಸೈಕಲ್ ದೇಶದ ರಸ್ತೆಗಳಲ್ಲಿ ಕಾಣಿಸುವುದಿಲ್ಲ. ಏಕೆಂದರೆ ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿದ್ದ ಅಟ್ಲಾಸ್ ಕಂಪನಿಯು ತನ್ನ ಕೊನೆಯ ಉತ್ಪಾದನಾ ಘಟಕವನ್ನೂ ಮುಚ್ಚಿದೆ.

Advertisements

ಇನ್ನು ಈ ಅಟ್ಲಾಸ್ ಕಂಪೆನಿಯನ್ನ ಜಾನಕಿ ದಾಸ್ ಕಪೂರ್ ಅವರು ಹರಿಯಾಣದ ಸೋನಿ ಪತ್ ನಲ್ಲಿ ಅಟ್ಲಾಸ್ ಸೈಕಲ್ ಪ್ರಾರಂಭ ಮಾಡಿದ್ದರು. ಈ ಕಂಪೆನಿಯನ್ನ1951ರಲ್ಲಿ ಅಟ್ಲಾಸ್ ಸೈಕಲ್ಸ್ ಹರಿಯಾಣ ಲಿಮಿಟೆಡ್ ಹೆಸರಿನಲ್ಲಿ ಪ್ರಾರಂಭಿಸಲಾಯಿತು. ನೋಡ ನೋಡುತ್ತಿದ್ದಂತೆ ಕೆಲವೇ ವರ್ಷಗಳಲ್ಲಿ ಅಟ್ಲಾಸ್ ಸೈಕಲ್ ಗಳ ಬಗ್ಗೆ ಭಾರತದಾದ್ಯಂತ ಮಾತನಾಡಲು ಶುರುಮಾಡಿದ್ದು ತುಂಬಾ ಫೇಮಸ್ ಆಗುತ್ತಾ ಹೋಯಿತು.

ಅಟ್ಲಾಸ್ ಹಲವಾರು ವರ್ಷಗಳ ಕಾಲ ಬೈಸಿಕಲ್ ಉದ್ಯಮದಲ್ಲಿ ತನ್ನ ಪ್ರಾಭಲ್ಯ ಸಾಧಿಸಿತ್ತು. ಜೊತೆಗೆ ಹೀರೊ ಹಾಗೂ ಎ-ಒನ್ ಬೈಸಿಕಲ್ ಬ್ರಾಂಡ್ ಗಳ ನಡುವೆ ಅಟ್ಲಾಸ್ ಪ್ರಾಬಲ್ಯ ಸಾಧಿಸಿದ್ದು ದೊಡ್ಡ ಸಾಧನೆಯೇ ಸರಿ. ಇನ್ನು 2000 ಇಸವಿಯ ಬಳಿಕ ವಿದೇಶಿ ಉದ್ಯಮಗಳ ಆಮದಿನಿಂದಾಗಿ ಅಟ್ಲಾಸ್ ತುಂಬಾ ಹಿನ್ನಡೆ ಅನುಭವಿಸಿತು.ಇದರ ನಂತರ ಅಟ್ಲಾಸ್ ಸೈಕಲ್ ಕಂಪನಿಗೆ ಹಿನ್ನಡೆಯಿಂದ ಹೊರಬಂದು ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಅಟ್ಲಾಸ್ ಕಂಪನಿಯು ತನ್ನ ಕೊನೆಯ ಉತ್ಪಾದನಾ ಘಟಕದಲ್ಲಿ ಒಂದು ವರ್ಷಕ್ಕೆ 40 ಲಕ್ಷ ಸೈಕಲ್ ಗಳನ್ನ ತಯಾರಿಸುತಿತ್ತು.ಇನ್ನು ಈ ಹಿಂದಯೇ 2014 ಮತ್ತು 2018ರಲ್ಲಿ ಅಟ್ಲಾಸ್ ತನ್ನ ಎರಡು ಬೈಸಿಕಲ್ ಉತ್ಪಾದನಾ ಘಟಕಗಳನ್ನ ಮುಚ್ಚಿದೆ. ಇನ್ನು ಮುಂದೆ ಕೇವಲ ಹಳೆಯ ನೆನಪಾಗಿಯೇ ಉಳಿಯಲಿದೆ ಅಟ್ಲಾಸ್ ಸೈಕಲ್. ಸ್ನೇಹಿತರೆ, ನಮ್ಮ ದೇಶಿಯ ಬ್ರಾಂಡ್ ಗಳು ಮುಚ್ಚಿಹೋಗಲು ನಾವೇ ಕಾರಣ.

ನಾವು ಸ್ವದೇಶಿ ಉತ್ಪನ್ನಗಳನ್ನ ಕೊಂಡರೆ ತಾನೇ ಕಂಪನಿಗಳು ಉಳಿದುಕೊಳ್ಳುವುದು, ಆರ್ಥಿಕವಾಗಿ ದೇಶವೂ ಕೂಡ ಪ್ರಗತಿ ಸಾಧಿಸಲು ಸಾಧ್ಯವಾಗುವುದು. ಹಾಗಾಗಿ ಮೊದಲು ನಾವು ವಿದೇಶಿ ವಸ್ತುಗಳ ವ್ಯಾಮೋಹದಿಂದ ಹೊರಬರಬೇಕಾಗಿದೆ. ಸ್ನೇಹಿತರೆ ನೀವು ಅಟ್ಲಾಸ್ ಸೈಕಲ್ ತುಳಿದಿದ್ದಾರೆ ಅದರ ಬಗೆಗಿನ ನೆನಪುಗಳನ್ನ ಕಾಮೆಂಟ್ ಮಾಡಿ ಹಂಚಿಕೊಳ್ಳಿ..