Advertisements

ಇಲ್ಲೇ ನೋಡಿ ಶಿವನ ಆತ್ಮ ಲಿಂಗ ಬಿದ್ದ ಜಾಗ! ಯಾವ ಜಾಗ ನೋಡಿ..

Temples

ಪ್ರಿಯ ಓದುಗರೆ ತಪಸ್ಸಿಗೆ ಕುಳಿತ ರಾವಣನ ಭಕ್ತಿಗೆ ಮೆಚ್ಚಿ ಆತ ಕೇಳಿದ ವರದಂತೆ ತನ್ನ ಆತ್ಮಲಿಂಗವನ್ನೇ ರಾವಣನಿಗೆ ನೀಡಿದ ಕಥೆ ನಿಮಗೆ ಗೊತ್ತು. ಅದನ್ನು ಗಣೇಶ ಪಡೆದು ಸಮುದ್ರತೀರದಲ್ಲಿ ಇಟ್ಟದ್ದು ನಿಮಗೆ ಗೊತ್ತು. ಆದರೆ ಯಾಕೆ ಹೀಗೆ ಮಾಡಿದರು? ಇದರ ಉದ್ದೇಶವೇನು? ಇದರ ಇನ್ನೊಂದಿಷ್ಟು ರಹಸ್ಯಗಳು ಏನು ಎಂದು ತಿಳಿಯೋಣ ಬನ್ನಿ. ಶಿವನ ಆತ್ಮಲಿಂಗ ಅತ್ಯಂತ ಶಕ್ತಿಶಾಲಿ ಯಾಗಿತ್ತು. ರಾಕ್ಷಸನಾದ ರಾಮನಿಗೆ ನೀಡಿದ್ದು ದೇವತೆಗಳಿಗೆ ಇಷ್ಟವಾಗಿರಲಿಲ್ಲ. ಇದು ವಿನಾಶಕ್ಕೆ ಕಾರಣವೆಂದು ಅರಿತ ದೇವಾನುದೇವತೆಗಳು ಗಣೇಶನಿಗೆ ಉಪಾಯವೊಂದನ್ನು ರೂಪಿಸಿ, ಭೂಲೋಕಕ್ಕೆ ಕಳಿಸುತ್ತಾರೆ. ಅದರಂತೆ ರಾವಣ ಆತ್ಮಲಿಂಗವನ್ನು ಹಿಡಿದು ಲಂಕೆಗೆ ಹೋಗುತ್ತಿರುತ್ತಾನೆ. ಯಾವುದೇ ಕಾರಣಕ್ಕೂ ಭೂಮಿಗೆ ಈ ಲಿಂಗಾವನ್ನು ಷ್ಪರ್ಶಿಸಬಾರದು ಎಂದು ಹೇಳಿರುತ್ತಾನೆ. ಅದರಂತೆ ರಾವಣ ಸಂಧ್ಯಾವಂದನೆ ಮಾಡುವ ಉದ್ದೇಶದಿಂದ ಸಮುದ್ರ ತೀರದಲ್ಲಿದ್ದ ಬಾಲಕನನ್ನು ಕರೆದು ಆತನ ಕೈಗೆ ಶಿವನ ಆತ್ಮಲಿಂಗವನ್ನು ಇಟ್ಟು ತಾನು ಸಂಧ್ಯಾವಂದನೆಗೆ ಹೋಗುತ್ತಾನೆ.

Advertisements

ಯಾವುದೇ ಕಾರಣಕ್ಕೂ ಭೂಮಿಯ ಮೇಲೆ ಇಡಬಾರದು ಎಂದು ಹೇಳಿರುತ್ತಾರೆ ರಾವಣ. ಆದ್ರೆ ತುಂಬಾ ಹೊತ್ತಾದರೂ ರಾವಣ ಬಾರದ್ದರಿಂದ ಆತ್ಮಲಿಂಗವನ್ನು ನೆಲಕ್ಕೆ ಇಡುತ್ತಾನೆ ಬಾಲಕ. ಈ ಈ ಬಾಲಕ ಬೇರೆ ಯಾರು ಅಲ್ಲ ಗಣೇಶ ಆಗಿರುತ್ತಾನೆ. ಈ ಲಿಂಗವಿಟ್ಟ ಸ್ಥಳವೆ ಮುರುಡೇಶ್ವರವಾಗಿದೆ. ಆತ್ಮಲಿಂಗ ಭೂಸ್ಪರ್ಶ ವಾದದ್ದನ್ನು ಕಂಡ ರಾವಣ ಬಾಲಕನ ಮೇಲೆ ಕುಪಿತ ನಾಗುತ್ತಾನೆ. ಆದರೆ ಬಾಲಕ ಕೈಗೆ ಸಿಗುವುದಿಲ್ಲ. ಈ ಸಿಟ್ಟನ್ನು ಲಿಂಗದ ಮೇಲೆ ಹಾಕಿ ಅದನ್ನು ಭೂಮಿಯಿಂದ ಕೀಳಲು ಹೋಗುತ್ತಾನೆ. ಆದರೆ ಅದು ಒಂದು ಇಂಚು ಕೂಡ ಅಲ್ಲಾಡುವುದಿಲ್ಲ. ಆಗ ಜೋರಾಗಿ ಲಿಂಗವನ್ನು ಕಿತ್ತುತ್ತಾನೆ. ಇದರಿಂದ ಆತ್ಮಲಿಂಗವು ಚೂರಾಗಿ ಮುರುಡೇಶ್ವರದ ಸುತ್ತಲೂ ಬೀಳುತ್ತದೆ. ಹೌದು..

ಗೋಕರ್ಣದಲ್ಲಿ ಬಿದ್ದ ಚೂರಿ ಮುಖ್ಯ ಆತ್ಮಲಿಂಗದ ಭಾಗ. ಇದನ್ನು ಮಹಾಬಲೇಶ್ವರ ಎಂತಲೂ ಕರೆಯುತ್ತಾರೆ. ಹೀಗೆ ಮುರುಡೇಶ್ವರದ ಸುತ್ತಲೂ ಬಿದ್ದ ಆತ್ಮಲಿಂಗದ ಚೂರುಗಳು ಸಜ್ಜೇಶ್ವರ, ಧರೇಶ್ವರ, ಗುಣವಂತೇಶ್ವರ, ಮತ್ತು ಆತ್ಮ ಲಿಂಗಕ್ಕೆ ಹೊದಿಸಿದ ಬಟ್ಟೆ ಮುರುಡೇಶ್ವರದಲ್ಲಿ ಬಿದ್ದಿತ್ತು ಎಂದು ಪುರಾಣಗಳು ಹೇಳುತ್ತವೆ. ಈ ಕಾರಣದಿಂದ ಇಲ್ಲಿ ವಿಶ್ವದ ಅತಿ ದೊಡ್ಡ ಎರಡನೇ ಶಿವನ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಇದನ್ನು ಕಾಶಿನಾಥ ಎಂಬುವವರು ನಿರ್ಮಿಸಿದ್ದಾರೆ.ಇದಕ್ಕೆ ಆರ್. ಎನ್.ಶೆಟ್ಟಿ ಎಂಬ ಉದ್ಯಮಿ ಆರ್ಥಿಕ ಸಹಾಯವನ್ನು ಮಾಡಿದ್ದಾರೆ. ಈ ಪ್ರತಿಮೆಯನ್ನು ಸಮುದ್ರತೀರದಲ್ಲಿ ಸಂಜೆ ಮತ್ತು ಬೆಳಗ್ಗೆ ನೋಡಲು ಮನಮೋಹಕವಾಗಿದೆ. ಮೊದಲು ಬಿದ್ದ ಮಹಾಬಲೇಶ್ವರ ಅಂದ್ರೆ ಈಗಿನ ಮುರುಡೇಶ್ವರ ವಾಗಿದೆ. ಇಲ್ಲಿಗೆ ಖಾಸಗಿ ವಾಹನಗಳ ಮೂಲಕ ಭೇಟಿ ನೀಡಬಹುದಾಗಿದೆ..