Advertisements

3 ವರ್ಷಗಳಿಂದ ಈ ವ್ಯಕ್ತಿಯ ಮೇಲೆ ಸೇಡು ತೀರಿಸಿಕೊಳ್ಳಲು ಪ್ರಯತ್ನ ಮಾಡುತ್ತಿದೆ ಈ ಕಾಗೆ.. ಅಷ್ಟಕ್ಕೂ ಈ ವ್ಯಕ್ತಿಯನ್ನು ಕಾಗೆ ದ್ವೇಷಿಸಲು ಕಾರಣವೇನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಸೇಡು ದ್ವೇ’ಷ ಎಂಬುದು ಕೇವಲ ಮನುಷ್ಯನಲ್ಲಿ ಮಾತ್ರ ಇರುವುದಿಲ್ಲ ಪ್ರಾಣಿ ಪಕ್ಷಿಗಳಲ್ಲಿಯೂ ಕೂಡ ಸೇಡು ದ್ವೇ’ಷ ಇರುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.. ಈ ವ್ಯಕ್ತಿಯ ಮೇಲೆ ಮೂರು ವರ್ಷಗಳಿಂದ ಒಂದು ಕಾಗೆ ಹಿಂಬಾಲಿಸಿ ಸೇ’ಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಇದಕ್ಕೂ ಕಾಗೆ ಈ ವ್ಯಕ್ತಿಯ ಮೇಲೆ ಸೇ’ಡು ತೀರಿಸಿಕೊಳ್ಳಲು ಕಾರಣ ಏನು ಎಂದು ತಿಳಿದರೆ ನೀವು ಕೂಡ ಒಂದು ಕ್ಷಣ ಶಾ’ಕ್ ಆಗ್ತೀರಾ.. ನಮ್ಮ ಧಾರ್ಮಿಕ ಕಥೆಗಳಲ್ಲಿ ಪುರಾಣ ಕಥೆಗಳಲ್ಲಿ ಕಾಗೆಯನ್ನು ಶನಿ ದೇವರ ವಾಹನ ಎಂದು ತಿಳಿದಿದ್ದೇವೆ ಇನ್ನೂ ಕಾಗೆಗಳು ನಮ್ಮ ಮೇಲೆ ಕು’ಕ್ಕಿ’ದರೆ ದಾರಿದ್ರ್ಯ ಬರಲಿದೆ ಹಾಗು ಮುಂದೆ ಏನೋ ದೊಡ್ಡ ಗಂ’ಡಾಂ’ತರ ಕಾದಿದೆ ಎಂಬ ನಂಬಿಕೆ ಅನೇಕರಲ್ಲಿ ಇದೆ.

Advertisements

ಆದರೆ ಇಲ್ಲೊಬ್ಬ ವ್ಯಕ್ತಿಯ ಮೇಲೆ ಪದೇ ಪದೇ ಕಾಗೆಯೊಂದು ಆತನನ್ನು ಕು’ಟು’ಕುತ್ತಾ ಸೇಡು ತೀರಿಸಿಕೊಳ್ಳಲು ಮುಂದಾಗುತ್ತದೆ.. ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ಒಂದು ಹಳ್ಳಿಯಲ್ಲಿ. ಶಿವ ಎಂಬ ವ್ಯಕ್ತಿಯ ಮೇಲೆ ಪ್ರತಿದಿನ ಮನೆಯಿಂದ ಹೊರಗಡೆ ಬಂದರೆ ಅವನನ್ನು ಕು’ಟು’ಕುತ್ತಾ ಅವನು ಎಲ್ಲಿಗೆ ಹೋದರೆ ಅಲ್ಲಿಗೆ ಹಿಂಬಾಲಿಸಿಕೊಂಡು ಹೋಗುತ್ತದೆ ಈ ಕಾಗೆ. ಇದರಿಂದಾಗಿ ಶಿವ ಎಂಬ ವ್ಯಕ್ತಿ ಬೆಳಗಿನ ಸಮಯದಲ್ಲಿ ಓಡಾಡುವ ಬದಲು ರಾತ್ರಿ ಸಮಯದಲ್ಲಿ ಮಾತ್ರ ಮನೆಯಿಂದ ಹೊರಬರಲು ನಿರ್ಧಾರವನ್ನು ಮಾಡುತ್ತಾನೆ.. ಹಾಗು ಮನೆಯಿಂದ ಹೊರಗಡೆ ಬಂದಾಗ ಈ ಕಾಗೆಯಿಂದ ತಪ್ಪಿಸಿಕೊಳ್ಳಲು ಶಿವ ತನ್ನ ಕೈಯಲ್ಲಿ ಕೋಲನ್ನು ಸದಾ ಇಟ್ಟುಕೊಂಡಿರುತ್ತಾನೆ.

ಅಷ್ಟಕ್ಕೂ ಈ ವ್ಯಕ್ತಿಯನ್ನು ಕಾಗೆ ದ್ವೇಷಿಸಲು ಕಾರಣವಾದರು ಏನಿರಬಹುದು.. ನಾವು ಕಥೆಗಳಲ್ಲಿ ಅಥವಾ ಸಿನಿಮಾಗಳಲ್ಲಿ ಹಾವುಗಳು ಸೇ’ಡು ತೀರಿಸಿಕೊಳ್ಳುವುದನ್ನು ನೋಡಿರುತ್ತೇವೆ ಅಥವಾ ಕೇಳುತಿರುತ್ತೇವೆ. ಆದರೆ ಕಾಗೆಯ ಸೇ’ಡಿನ ಬಗ್ಗೆ ಎಲ್ಲಿಯೂ ಕೇಳಿರುವುದಿಲ್ಲ.. ಇನ್ನೂ ಈ ಕಾಗೆ ಸೇ’ಡು ತೀರಿಸಿಕೊಳ್ಳಲು ನಿಜವಾದ ಕಾರಣ ಏನೆಂದರೆ ಕಳೆದ ಮೂರು ವರ್ಷಗಳ ಹಿಂದೆ ಈ ಶಿವ ಎಂಬುವ ಮನೆಯ ಮೇಲ್ಬಾಗದಲ್ಲಿ ಕಾಗೆ ಗೂಡು ಕಟ್ಟಿ, ಮೊಟ್ಟೆಗಳನ್ನು ಇಟ್ಟಿತ್ತು.

ಕಿಟಕಿಗಳನ್ನು ಹಬ್ಬಕ್ಕೆ ಕ್ಲೀನ್ ಮಾಡುವಾಗ ಗೊತ್ತಿಲ್ಲದೇ ಗೂಡನ್ನು ಅಲುಗಾಡಿಸಿ ಶಿವ ಅದರಲ್ಲಿದ್ದ ಮೊಟ್ಟೆಗಳನ್ನು ಬೀಳಿಸಿ ಬಿಡುತ್ತಾನೆ.. ಇದನ್ನು ನೋಡಿದ ತಾಯಿ ಕಾಗೆ ತನ್ನ ಮರಿಗಳನ್ನು ಕಳೆದುಕೊಂಡು ಅಂದಿನಿಂದ ಇಂದಿಗೂ ಕೂಡ ಈ ಶಿವ ಎಂಬ ವ್ಯಕ್ತಿಯ ಮೇಲೆ ದಾ’ಳಿ ಮಾಡುತ್ತಲೇ ಬಂದಿದೆ. ಅದಕ್ಕೇ ಹೇಳುವುದು ತಾಯಿಯ ಪ್ರೀತಿ ನಿಷ್ಕಲ್ಮಶವಾದ ಪ್ರೀತಿ ಎಂದು ಇದು ಪ್ರಾಣಿ ಪಕ್ಷಿಗಳಲ್ಲಿಯೂ ಕೂಡ ಇದೆ ಎಂಬುದಕ್ಕೆ ಈ ಘಟನೆ ಒಂದು ಉತ್ತಮ ನಿದರ್ಶನ ಅಲ್ಲವೇ..