Advertisements

ಹಣ, ಒಡವೆ ಇರುವ ಬ್ಯಾಗನ್ನು ಆಟೋದಲ್ಲೇ ಬಿಟ್ಟ ಮಹಿಳೆ.. ನಂತರ ಡ್ರೈವರ್ ಮಾಡಿದ ಕೆಲಸ ಏನು ಗೊತ್ತಾ?

Inspire Kannada Mahiti

ನಾವು ದೊಡ್ಡ ದೊಡ್ಡ ನಗರಗಳಲ್ಲಿ ಮತ್ತೊಂದು ಏರಿಯಾಗೆ ಹೋಗಲು ಸಾಮಾನ್ಯವಾಗಿ ಆಟೋಗಳನ್ನು ಹೆಚ್ಚಾಗಿ ಬಳಸುತ್ತೇವೆ.. ಇನ್ನೂ ಕೆಲವು ಆಟೋದವರು ಕೆಲವೊಂದು ಏರಿಯಾಗೆ ಹೋಗಲು ಮೀಟರ್ ಮೇಲೆ ಒನ್ ಟು ಡಬಲ್ ಮೀಟರ್ ಕೇಳುತ್ತಾರೆ. ಹಾಗು ಕೆಲವು ಆಟೋದವರಂತು ಪ್ರಯಾಣಿಕರಿಗೆ ಕಿ’ರಿ ಕಿ’ರಿ ಮಾಡುತ್ತಾರೆ.. ಇನ್ನೂ ಕೆಲವೊಂದು ಬಾರಿ ನಾವು ಅನಿವಾರ್ಯವಾಗಿ ಅವರು ಕೇಳಿದಷ್ಟು ಹಣದಲ್ಲಿ ನಾವು ಆಟೋದಲ್ಲಿ ಪ್ರಯಾಣ ಮಾಡಬೇಕಾಗುತ್ತದೆ. ಆದರೆ ಎಲ್ಲಾ ಆಟೋ ಡ್ರೈವರ್ ಗಳು ಕೂಡ ಒಂದೇ ರೀತಿ ಇರುವುದಿಲ್ಲ.. ಆಟೋ ಡ್ರೈವರ್ ಗಳಲ್ಲಿ ಕೆಲವರು ತುಂಬಾ ಒಳ್ಳೆಯವರು ಕೂಡ ಇರುತ್ತಾರೆ.

Advertisements

ಇನ್ನೂ ನಾವು ಹೇಳುವ ಈ ಸ್ಟೋರಿಯಲ್ಲಿರುವ ಆಟೋ ಡ್ರೈವರ್ ಬಗ್ಗೆ ಕೇಳಿದರೆ ಈ ಕಾಲದಲ್ಲಿಯೂ ಇಂತಹವರು ಇದ್ದಾರಾ ಎಂದು ಆಶ್ಚರ್ಯ ಪಡುತ್ತೀರಾ. ಇನ್ನೂ ಈ ಘ’ಟನೆ ನಡೆದಿರುವುದು ಚೆನ್ನೈನಲ್ಲಿ.. ಮಾದವಿ ಎನ್ನುವ ಹುಡುಗಿ ತಮ್ಮ ಊರಿನಿಂದ ಬಂದು ಚೆನ್ನೈ ಬಸ್ ಸ್ಟಾಪ್ ನಲ್ಲಿ ಇಳಿಯುತ್ತಾಳೆ. ನಂತರ ಒಂದು ಆಟೋವನ್ನು ಇಡಿದು ತನ್ನ ಬೀದಿ ಕಡೆಗೆ ಹೋಗುತ್ತಾಳೆ.. ರೂಮ್ ಗೆ ಹೋದ ತಕ್ಷಣ ಸ್ವಲ್ಪ ರಿಲ್ಯಾಕ್ಸ್ ಆದ ನಂತರ ತನ್ನ ಮೋಬೈಲ್ ಪೋನ್ ಅನ್ನು ಹುಡುಕುತ್ತಾಳೆ. ಆದರೆ ಅದು ಹ್ಯಾಂಡ್‌ ಬ್ಯಾಗ್ ನಲ್ಲಿ ಇರಬೇಕಲ್ವಾ ಅಂತ ಮನೆಯೆಲ್ಲಾ ಹುಡುಕುತ್ತಾಳೆ.. ಆದರೆ ಹ್ಯಾಂಡ್ ಬ್ಯಾಗ್ ಎಲ್ಲಿಯೂ ಕೂಡ ಕಾಣಿಸೋದಿಲ್ಲ.

ಆಗ ಏನು ಮಾಡಬೇಕು ಎಂದು ತಿಳಿಯದೇ ತುಂಬಾ ಬೇಜಾರಿನಿಂದ ಕಣ್ಣೀರು ಆಕುತ್ತಾ ಕೂತಿರುತ್ತಾಳೆ.. ಆ ಹ್ಯಾಂಡ್ ಬ್ಯಾಗ್ ನಲ್ಲಿ ಕೇವಲ ಮೋಬೈಲ್ ಮಾತ್ರವಲ್ಲದೇ ಹಣ ಚಿನ್ನದ ಸರ ಹಾಗೂ ಮುಖ್ಯವಾದ ಕೆಲವು ಡಾಕ್ಯುಮೆಂಟ್ ಗಳು ಕೂಡ ಇರುತ್ತವೆ. ಅಯ್ಯೋ ಈಗೇನು ಮಾಡುವುದು ದೇವರೆ ಎಂದು ಗೋಳಾಡಿ ಜ್ಞಾಪಿಸಿ ಕೊಳ್ಳುವಾಗ ಯಾರೋ ಬಂದು ಮನೆಯ ಬಾಗಿಲನ್ನು ತಟ್ಟುತ್ತಾರೆ. ಆಗ ಮಾಧವಿ ಬಂದು ಬಾಗಿಲನ್ನು ತೆಗೆಯುತ್ತಾಳೆ.. ಆಗ ಎದುರಿಗೆ ಆಟೋ ಡ್ರೈವರ್ ಹ್ಯಾಂಡ್ ಬ್ಯಾಗ್ ಅನ್ನು ಹಿಡಿದುಕೊಂಡು ನಿಂತಿರುತ್ತಾನೆ.. ಆಗ ಮಾಧವಿ ಆಟೋ ಡ್ರೈವರ್ ಅನ್ನು ನೋಡಿ ಏನು ವಿಷಯ, ನೀನು ಯಾಕೆ ಮತ್ತೆ ಇಲ್ಲಿಗೆ ಬಂದೆ ಎಂದು ಕೆಳುತ್ತಾಳೆ.

ಆಗ ಆಟೋ ಡ್ರೈವರ್ ತಗೋಮ್ಮಾ ನಿನ್ನ ಹ್ಯಾಂಡ್ ಬ್ಯಾಗ್ ಆಟೋದಲ್ಲಿಯೇ ಇತ್ತು ಎಂದು ನೀಡುತ್ತಾನೆ.. ಹ್ಯಾಂಡ್ ಬ್ಯಾಗ್ ತೆಗೆದುಕೊಂಡ ಮಾಧವಿಗೆ ಆನಂದ ಬಾಷ್ವ ಹುಕ್ಕಿ ಬರುತ್ತದೆ. ನಂತರ ಆ ಆಟೋ ಡ್ರೈವರ್ ಇನ್ನು ಮುಂದೆ ವಸ್ತುಗಳ ಮೇಲೆ ನಿಗ ಇರಲಿ ತಾಯಿ ಬಹಳ ಹುಷಾರಾಗಿರಿ ಎಂದು ಹೇಳಿ ಹೊರಡುತ್ತಾನೆ. ಆ ಹುಡುಗಿ ಅಂಕಲ್ ಸ್ವಲ್ಪ ಇರಿ ತುಂಬಾ ಥ್ಯಾಂಕ್ಸ್ ಎಂದು ಧನ್ಯವಾದ ತಿಳಿಸುತ್ತಾ.. ಆಟೋ ಡ್ರೈವರ್ ಕಾಲಿಗೆ ಬೀಳುತ್ತಾಳೆ.. ಸಾಮಾನ್ಯವಾಗಿ ಎಲ್ಲಾ ಆಟೋ ಡ್ರೈವರ್ ಗಳು ಕೂಡ ದಾರಿ ತಪ್ಪಿಸಿ ಕಿ’ರಿ ಕಿ’ರಿ ಮಾಡುವವರೇ ಆಗಿರುವುದಿಲ್ಲ. ಇಂತಹ ಪ್ರಾಮಾಣಿಕ ಆಟೋ ಡ್ರೈವರ್ ಗಳು ಕೂಡ ನಮ್ಮ ಮಧ್ಯೆ ಇದ್ದಾರೆ ಎಂಬುದಕ್ಕೆ ಈ ಘ’ಟನೆಯೇ ಸಾಕ್ಷಿ