Advertisements

ಹಣ, ಚಿನ್ನದ ಒಡವೆ ಇರುವ ಬ್ಯಾಗ್ ಅನ್ನು ಆಟೋದಲ್ಲೇ ಬಿಟ್ಟು ಹೋದ ಮಹಿಳೆ.. ನಂತರ ಡ್ರೈವರ್ ಮಾಡಿದ ಕೆಲಸ ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಆಟೋ ಡ್ರೈವರ್ ಎಂದರೆ ನಮಗೆ ಮೊದಲು ನೆನಪಿಗೆ ಬರುವುದು ಮೀಟರ್ ಮೇಲೆ ಜ್ಯಾಸ್ತಿ ಹಣ ಕೇಳುತ್ತಾರೆ ಅಂತ.. ಅದರಲ್ಲಿಯೂ ಕೆಲವೊಮ್ಮೆ ಅವರು ಕೇಳಿದ ಹಣವನ್ನು ನಾವು ಕೊಡದೇ ಹೋದರೆ ಮಧ್ಯದಲ್ಲಿ ನಿಲ್ಲಿಸಿ ಬಿಡುತ್ತಾರೆ ಎನ್ನುವ ಭಯ ಕೂಡ ಆಗ್ತಾ ಇರುತ್ತೆ.. ಆದರೆ ಇಲ್ಲೊಬ್ಬರು ಆಟೋ ಡ್ರೈವರ್ ಮಾಡಿದ ಕೆಲಸ ನೋಡಿದ್ರೆ ನಿಜಕ್ಕೂ ನೀವು ಶಾ’ಕ್ ಆಗ್ತೀರಾ.. ಈ ಕಾಲದಲ್ಲಿಯೂ ಸಹ ಇಂತಹವರು ಇದ್ದಾರಾ ಎಂದು ಅನಿಸುತ್ತದೆ..

Advertisements

ಈ ಘ’ಟನೆ ನಡೆದಿರುವುದು ಚೆನ್ನೈನಲ್ಲಿ.. ಮಾನವಿ ಎಂಬ ಹುಡುಗಿ ತನ್ನ ಊರಿನಿಂದ ಬಂದು ಚೆನ್ನೈನಲ್ಲಿ ಇಳಿಯುತ್ತಾರೆ‌.. ನಂತರ ಆಟೋಗಾಗಿ ಕಾಯುತ್ತಿರುತ್ತಾರೆ.. ಇದೇ ಸಮಯಕ್ಕೆ ಒಂದು ಆಟೋ ಬರುತ್ತಿರುತ್ತದೆ.. ಆಗ ಮಾನವಿ ಆಟೋವನ್ನು ನಿಲ್ಲಿಸಿ ಪಿಜಿ ಕಡೆಗೆ ಹೋಗುತ್ತಾರೆ.. ನಂತರ ಆಟೋ ಡ್ರೈವರ್ ಮಾನವಿಯವರನ್ನು ಪಿಜಿಯಲ್ಲಿ ಬಿಟ್ಟು ಮೀಟರ್ ಹಣವನ್ನು ಪಡೆದು ಹೊರಟು ಹೋಗುತ್ತಾರೆ.. ನಂತರ ಮಾನವಿ ತನ್ನ ರೂಮಿಗೆ ಹೋಗಿ ಸ್ವಲ್ಪ ಸಮಯ ವಿಶ್ರಾಂತಿ ಪಡೆದು ತನ್ಮ ಮೊಬೈಲ್ ಅನ್ನು ಹುಡುಕುತ್ತಾರೆ.. ಆದರೆ ರೋಮಿನಲ್ಲಿ ಎಲ್ಲಿಯೂ ಕೂಡ ಸಿಗಲಿಲ್ಲ.. ಯೋಚನೆ ಮಾಡುತ್ತಾ ಹ್ಯಾಂಡ್ ಬ್ಯಾಗ್ ನಲ್ಲಿ ಪೋನ್ ಇರಬಹುದು ಎಂದುಕೊಂಡು ಹ್ಯಾಂಡ್ ಬ್ಯಾಗ್ ಹುಡುಕುತ್ತಾರೆ..

ಆಗ ಹ್ಯಾಂಡ್ ಬ್ಯಾಗ್ ಕೂಡ ಎಲ್ಲಿಯೂ ಸಿಗೋದಿಲ್ಲ.. ಆಗ ಮಾನವಿ ಏನು ಮಾಡಬೇಕೆಂದು ತಿಳಿಯದೇ ಸುಮ್ಮನೆ ಕೂತು ಕಣ್ಣೀರು ಹಾಕುತ್ತಾರೆ.. ಏಕೆಂದರೆ ಹ್ಯಾಂಡ್ ಬ್ಯಾಗ್ ನಲ್ಲಿ ಮೊಬೈಲ್ ಮಾತ್ರವಲ್ಲದೇ ಹಣ, ಚಿನ್ನದ ಸರ, ಜೊತೆಗೆ ಒಂದು ಎಟಿಮ್ ಕಾರ್ಡ್ ಕೂಡ ಇರುತ್ತದೆ.. ಹೀಗಾಗಿ ಎಲ್ಲವೂ ಕಳೆದುಕೊಂಡೆ ಎಂದು ಜೋರಾಗಿ ಅಳುತ್ತಾ ಕೂತಿರುವಾಗ ಯಾರೋ ಬಂದು ಬಾಗಿಲನ್ನು ಬಡಿಯುವ ಶಬ್ದವಾಗುತ್ತದೆ.. ನಂತರ ಯಾರೆಂದು ಹೋಗಿ ಬಾಗಿಲನ್ನು ತೆಗೆದು ನೋಡಿದಾಗ ಆಟೋ ಡ್ರೈವರ್ ಕೈಯಲ್ಲಿ ಹ್ಯಾಂಡ್ ಬ್ಯಾಗ್ ಹಿಡಿದುಕೊಂಡು ನಿಂತಿರುತ್ತಾರೆ.. ಆಗ ಅಟೋ ಡ್ರೈವರ್ ತಗೊಮ್ಮಾ ನಿನ್ನ ಹ್ಯಾಂಡ್ ಬ್ಯಾಗ್ ನನ್ನ ಅಟೋದಲ್ಲೇ ಬಿಟ್ಟಿದ್ದೆ ಮಧ್ಯ ದಾರಿಯಲ್ಲಿ ಹಿಂದೆ ನೋಡಿದಾಗ ನಿನ್ನ ಹ್ಯಾಂಡ್ ಬ್ಯಾಗ್ ಕಾಣಿಸಿತು ಮತ್ತೆ ಇದನ್ನು ಕೊಡಲು ಬಂದೆ.. ಎಲ್ಲವೂ ಸರಿಯಾಗಿ ಇದೆಯಾ ನೋಡಿಕೊ ಎಂದು ಆಟೋ ಡ್ರೈವರ್ ಹೇಳುತ್ತಾರೆ..

ಇದನ್ನು ನೋಡಿ ಮಾನವಿ ತುಂಬಾ ಸಂತೋಷ ಪಡುತ್ತಾಳೆ.. ಊರು ಬಿಟ್ಟು ಇನ್ನೊಂದು ಊರಿಗೆ ಹೋಗುತ್ತಿರಾ ಇಂತಹ ವಿಷಯಗಳಲ್ಲಿ ಜಾಗೃತರಾಗಿ ಇರಬೇಕು ಎಂದು ಡ್ರೈವರ್ ಹೇಳಿ ಹೊರಡಲು ಸಿದ್ದವಾದಾಗ ಮಾನವಿ ಆಟೋ ಡ್ರೈವರ್ ಕಾಲಿಗೆ ನಮಸ್ಕಾರ ಮಾಡುತ್ತಾಳೆ.. ಆಗ ಆಟೋ ಡ್ರೈವರ್ ಇದೇನು ಬೇಡಮ್ಮ ಎಂದು ಹೊರಟು ಹೋಗುತ್ತಾರೆ.. ನಂತರ ಈ ಘ’ಟನೆಯನ್ನು ಮಾನವಿ ಜಾಲತಾಣದಲ್ಲಿ ಶೇರ್ ಮಾಡಿಕೊಂಡು ಆಟೋ ಡ್ರೈವರ್ ಗೆ ಧನ್ಯವಾದವನ್ನು ತಿಳಿಸುತ್ತಾರೆ.. ಆಟೋ ಡ್ರೈವರ್ ಗಳು ಎಂದ ತಕ್ಷಣ ದಾರಿ ತಪ್ಪಿಸುವವರು, ಯಾಮಾರಿಸುವವರು, ಅನ್ನುವ ಭಾವನೆ ಇದ್ದವರು ಈಗಲೇ ಬಿಟ್ಟುಬಿಡಿ.. ಅವರಲ್ಲೂ ಕೂಡ ಇಂತಹವರು ಇರುತ್ತಾರೆ ಎನ್ನುವುದಕ್ಕೆ ಈ ನೈಜ ಘ’ಟನೆಯೇ ದೊಡ್ಡ ಸಾಕ್ಷಿ.. ಸ್ನೇಹಿತರೆ ಈ ನೈಜ ಘ’ಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..