Advertisements

ಆಟೋದಲ್ಲಿ ಬಿಟ್ಟು ಹೋದ 80 ಸಾವಿರವನ್ನ ಮರಳಿಸಿದ ಆಟೋ ಡ್ರೈವರ್ ಗೆ ಆ ಮಹಿಳೆ ಕೊಟ್ಟಿದ್ದೇನು ಗೊತ್ತಾ !

Inspire Kannada Mahiti

ಸ್ನೇಹಿತರೇ, ಈಗಿನ ಕಾಲದಲ್ಲಿ ಪ್ರಾಮಾಣಿಕತೆ ಅನ್ನೋದನ್ನ ದುರ್ಬಿನು ಹಾಕೊಂಡು ಹುಡುಕಿದ್ರೂ ಸಿಗೋದಿಲ್ಲ. ಆದರೆ ಪ್ರಾಮಾಣಿಕತೆ ಇರುವವರು ಇಲ್ಲವೆಂದೇನಿಲ್ಲ. ಆದರೆ ಅಂತಹವರು ಲಕ್ಷಕ್ಕೆ ಒಬ್ಬರು ಮಾತ್ರ ಅಂತ ಹೇಳಿದ್ರೆ ತಪ್ಪಾಗೊದಿಲ್ಲಾ. ಇನ್ನು ಅಂತಹ ಲಿಸ್ಟ್ ನಲ್ಲಿ ನಾವು ಹೇಳಲು ಹೊರಟಿರುವ ಈ ವ್ಯಕ್ತಿ ಕೂಡ ಸೇರಿದ್ದಾನೆ. ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದರೂ ಪ್ರಾಮಾಣಿಕತೆಯಲ್ಲಿ ಈತ ಶ್ರೀಮಂತ. ಸಾಮಾನ್ಯವಾಗಿ ಆಟೋದಲ್ಲಿ ಬಂದು ಹೋಗುವಾಗ ಕೆಲವರು ತಮ್ಮ ವಸ್ತುಗಳನ್ನ ಮರೆತು ಹೋಗಿಬಿಡುತ್ತಾರೆ. ಅದರಲ್ಲಿ ಹಣ ಇರಬಹುದು, ಇಲ್ಲವೇ ಬೆಲೆ ಬಾಳುವ ವಸ್ತುಗಳು ಇನ್ನಿತರೇ ದಾಖಲೆಗಳು ಕೂಡ ಆಗಿರಬಹುದು.

Advertisements

ಇಂತಹ ಸಂದರ್ಭದಲ್ಲಿ ಹೀಗೆ ಪ್ರಯಾಣಿಕರು ಬಿಟ್ಟು ಹೋದದ್ದನ್ನ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆಯುವವರು ತುಂಬಾನೇ ಕಡಿಮೆ. ಆದರೆ ಇಲ್ಲೊಬ್ಬರು ಮಹಿಳೆ ಆಟೋದಲ್ಲಿ ಪ್ರಯಾಣ ಮಾಡಿದ್ದು, ಇಳಿಯುವ ವೇಳೆ ತನ್ನ ಬ್ಯಾಗನ್ನ ಆಟೋದಲ್ಲೇ ಮರೆತು ಬಿಟ್ಟು ಹೋಗಿದ್ದಾರೆ. ಸರಳಾ ನಂಬೂದರಿ ಎಂಬ ಮಹಿಳೆ ಮುಂಬೈನಲ್ಲಿನ ಚೆಂಚೂರ್ ನಲ್ಲಿ ಇಂಗ್ಲಿಷ್ ಶಾಲೆಯೊಂದನ್ನ ನಡೆಸುತ್ತಿದ್ದಾರೆ. ಹೀಗೆ ಒಂದು ದಿನ ಆಕೆ ಶಾಲೆ ಮುಗಿದ ಕೂಡಲೇ, ತಾನು ಅಲ್ಲಿಂದ ದೂರದಲ್ಲಿ ಪಾರ್ಕ್ ಮಾಡಿದ್ದ ಕಾರಿನ ಬಳಿ ಹೋಗಲು ಆಟೋವನ್ನ ಕರೆಯುತ್ತಾರೆ. ಆಟೋದಲ್ಲಿ ಕುಳಿತು ಕಾರಿನ ಬಳಿ ಹೋದ ಆಕೆ ಆಟೋ ಡ್ರೈವರ್ ಗೆ ಆಟೋ ಚಾರ್ಜ್ ನ್ನ ಕೊಟ್ಟು ತನ್ನ ಕಾರನ್ನ ಹತ್ತುತ್ತಾಳೆ.

ಹೀಗೆ ಸ್ವಲ್ಪ ದೂರ ಕಾರಿನಲ್ಲಿ ಹೋಗುತ್ತಿದ್ದ ಹಾಗೇ, ತಾನು ಆಟೋದಲ್ಲಿ ತನ್ನ ಬ್ಯಾಗ್ ನ್ನ ಮರೆತಿರುವುದು ನೆನಪಿಗೆ ಬರುತ್ತದೆ. ಇನ್ನು ಆ ಬ್ಯಾಗ್ ನಲ್ಲಿ ಮನೆಯ ಬೀಗ, ಕ್ರೆಡಿಟ್, ಡೆಬಿಟ್ ಕಾರ್ಡ್ ಗಳು, ಪಾನ್ ಕಾರ್ಡ್ ಸಹಿತ ಬರೋಬ್ಬರಿ 80 ಸಾವಿರ ನಗದು ಹಣ ಕೂಡ ಇರುತ್ತದೆ. ತಾನು ಬ್ಯಾಗ್ ನ್ನ ಆಟೋದಲ್ಲೇ ಬಿಟ್ಟಿರುವೆ ಎಂದು ಗೊತ್ತಾದ ಕೂಡಲೇ ತಾನು ಇಳಿದ್ದಿದ ಜಾಗದ ಬಳಿ ಹೋಗಿ ನೋಡುತ್ತಾಳೆ ಅಲ್ಲಿ ಆಟೋ ಇರೋದಿಲ್ಲ. ಬಳಿಕ ಅಲ್ಲೇ ಇದ್ದ ಪಾನ್ ಶಾಪ್ ಅಂಗಡಿಯವನ ಬಳಿ ಆಟೋದ ಕುರಿತು ಕೇಳಲಾಗಿ ಆಕೆಗೆ ಯಾವುದೇ ವಿವರಗಳು ದೊರಕುವುದಿಲ್ಲ. ಇನ್ನೇನು ಕೊನೆಗೆ ಬೇರೆ ದಾರಿಯಿಲ್ಲದೇ ಇನ್ನೇನು ಪೋಲಿಸ್ ಕಂ’ಪ್ಲೇಂಟ್ ಕೊಡಬೇಕು ಅನ್ನುವಷ್ಟರಲ್ಲಿ ಅಲ್ಲಿಗೆ ಬಂದ ಆ ಆಟೋ ಚಾಲಕ ಆಕೆಗೆ ಬ್ಯಾಗ್ ನ್ನ ಹಿಂದಿರುಗಿಸಿ ಹೋಗಿಬಿಟ್ಟ.

ಇದನ್ನ ಕಂಡು ಶಾಕ್ ಆಗಿದ್ದ ಆ ಮಹಿಳೆ ಆಟೋ ಚಾಲಕನ ವಿವರಗಳನ್ನ ತಿಳಿದುಕೊಳ್ಳಲಿಲ್ಲ. ಇನ್ನು ವಾಪಾಸ್ ಸಿಕ್ಕ ತನ್ನ ಬ್ಯಾಗ್ ನ್ನ ತೆರೆದು ನೋಡಿದಾಗ ಎಲ್ಲವೂ ಸರಿಯಾಗಿತ್ತು. ಬಳಿಕ ಪ್ರಮಾಣಿಕತೆ ಮೆರೆದ ಆತನ ಬಗ್ಗೆ ತಿಳಿದುಕೊಳ್ಳುವ ಎಲ್ಲಾ ರೀತಿಯ ಪ್ರಯತ್ನ ಮಾಡಿದ ಆ ಮಹಿಳೆ ಕೊನೆಗೆ ಹೇಗೋ ಆತನ ಬಗ್ಗೆ ವಿವರಗಳನ್ನ ತಿಳಿದುಕೊಂಡಿದ್ದು, ಆ ಆಟೋ ಚಾಲಕನ ಹೆಸರು ಅಮಿತ್ ಗುಪ್ತಾ ಎಂದು ತಿಳಿಯಿತು. ಬಳಿಕ ಆತನನ್ನ ಕಾಂಟಾಕ್ಟ್ ಮಾಡಿ ಶಾಲೆಗೇ ಕರೆಸಿ ಆತನ ಪ್ರಾಮಾಣಿಕತೆಯನ್ನ ಮೆಚ್ಚಿದಲ್ಲದೆ ಆತನಿಗೆ ಹತ್ತು ಸಾವಿರ ಹಣವನ್ನ ಬಹುಮಾನವಾಗಿ ನೀಡಿದ್ರು. ಜೊತೆಗೆ ಆತ ಆರ್ಥಿಕ ಸಂಕಷ್ಟ ಪರಿಸ್ಥಿತಿಯಲ್ಲಿದ್ದಾನೆ ಎಂದು ತಿಳಿದು ಆಟೋ ಚಾಲಕನ ಇಬ್ಬರು ಮಕ್ಕಳಿಗೆ ತಮ್ಮ ಶಾಲೆಯಲಿ ಉಚಿತ ಶಿಕ್ಷಣ ಸೌಲಭ್ಯ ನೀಡುವುದಾಗಿ ಹೇಳಿದ್ರು. ನೋಡಿ ಪ್ರಾಮಾಣಿಕತೆಗೆ ಸಿಕ್ಕ ಪ್ರತಿಫಲ ಹೇಗಿದೆ ಅಂತ..ಆಟೋ ಚಾಲಕನ ನಿಯತ್ತು ಆತನ ಮಕ್ಕಳ ಭವಿಷ್ಯದ ಬದಲಾವಣೆಗೆ ಕಾರಣವಾಯಿತು ಅಲ್ಲವೇ..