Advertisements

ನೀರಿಗಾಗಿ ಪರದಾ’ಡುತ್ತಿದ್ದ ಊರಿಗೆ ನೀರು ತರಲು.. ಈ ಹುಡುಗಿ ದೊಡ್ಡ ಬೆಟ್ಟವನ್ನೇ ಏನು ಮಾಡಿದಳು! ಅಂತ ನೋಡಿದ್ರೆ ನಿಜಕ್ಕೂ ಆಶ್ಚರ್ಯ..

Inspire Kannada Mahiti

ನಮಸ್ತೆ ಸ್ನೇಹಿತರೆ, ಮಧ್ಯ ಪ್ರದೇಶದ ರಾಜ್ಯದಲ್ಲಿ ಒಂದು ಹಳ್ಳಿ ಇದೆ.. ಅದರ ಹೆಸರು ಆಗ್ರೋದ ಗ್ರಾಮ, ಈ ಊರಿನಲ್ಲಿ 1400 ಜನ ವಾಸವಿದ್ದಾರೆ.. ಈ ಊರಿನ ಸುತ್ತಮುತ್ತ ಭಾವಿಗಳು ಹಾಗೂ ಒಂದು ಕೆರೆ ಇದೆ.. ಮಳೆಗಾಲದಲ್ಲಿ ಈ ಊರಿನ ಜನರಿಗೆ ಕುಡಿಯಲು ಹಾಗೂ ವ್ಯವಸಾಯ ಮಾಡಲು ನೀರಿನ ಸಮಸ್ಯೆ ಇಲ್ಲಾ.. ಆದರೆ ಬೇಸಿಗೆ ಬಂದರೆ ಸಾಕು ನೀರಿಗಾಗಿ ಆಹಾಕರ. ಬಾವಿಗಳು ಬತ್ತಿ ಹೋಗುತ್ತವೆ.. ಕೆರೆಗಳು ಖಾಲಿಯಾಗುತ್ತವೆ. ಮನೆಗೆ, ಕುಡಿಯೋದಕ್ಕೆ ಮತ್ತು ವ್ಯವಸಾಯಕ್ಕೆ ಯಾವುದಕ್ಕೂ ನೀರು ಸಿಗಲ್ಲ. ಆದರೆ ಇವರಿಗೆ ಒಂದು ಆಶಾ ಕಿರಣ ಇದೆ.. ಅದೇನೆಂದರೆ ಗ್ರಾಮದ ಪಕ್ಕದಲ್ಲಿರುವ ಬೆಟ್ಟಗಳು.

Advertisements

ಈ ಬೆಟ್ಟಗಳಿಂದ ವರ್ಷ ಪೂರ್ತಿ ನೀರು ಹರಿದು ಬರುತ್ತದೆ.. ಆದರೆ ಆ ನೀರು ಬೆಟ್ಟಗಳ ಆಚೆ ಇರುವ ನದಿಗೆ ಸೇರುತ್ತದೆ. ಹಾಗಾಗಿ ಬೆಟ್ಟಗಳಿಂದ ಹರಿದು ಬರುವ ನೀರನ್ನ ಊರಿನ ನೀರಿಗೆ ಕನೆಕ್ಟ್ ಮಾಡಿದ್ರೆ.. ಈ ಗ್ರಾಮಕ್ಕೆ ಯಾವುದೇ ನೀರಿನ ಸಮಸ್ಯೆ ಇರೋದಿಲ್ಲ. ಆದ್ರೆ ಬೆಟ್ಟಗಳಿಂದ ಹರಿಯುವ ನೀರನ್ನ ಊರಿಗೆ ತರೋದು ಬೆಟ್ಟದಷ್ಟು ಕಷ್ಟ ಯಾಕೆಂದರೆ ಒಂದು ಬೆಟ್ಟ ಅಡ್ಡ ಇದೆ.. ಈ ಬೆಟ್ಟವನ್ನು ಅಗೆದು ಹಳ್ಳಿಗೆ ನೀರು ತರೋದು ಈ ಗ್ರಾಮದ ಜನರ ಎಷ್ಟೋ ವರ್ಷಗಳ ಕನಸಾಗಿತ್ತು.. ಆದರೆ ಇದನ್ನ ಮಾಡಲು ಅರಣ್ಯ ಇಲಾಖೆ ಅವಕಾಶ ಕೊಡದ ಕಾರಣ ಎಲ್ಲರೂ ಸುಮ್ಮನಾಗಿದ್ದರು.

ಆದರೆ ನೀರಿಗಾಗಿ ಪರದಾಡಿ ಬೇಸತ್ತ 19 ವರ್ಷದ ಬಬೀತಾ ಎನ್ನುವ ಹುಡುಗಿ ಕೊನೆಗೂ ದೈರ್ಯವನ್ನು ಮಾಡಿಯೇ ಬಿಟ್ಟರು.. ಪ್ರತಿದಿನ ಅರಣ್ಯ ಇಲಾಖೆಗಳ ಸುತ್ತ ತಿರುಗಾಡಿದ ಬಬಿತಾ ತಮ್ಮ ಕಷ್ಟವನ್ನು ಅವರಿಗೆ ಮನವರಿಕೆ ಮಾಡಿ ಕೊನೆಗೂ ಅರಣ್ಯ ಇಲಾಖೆಯಿಂದ ಪರ್ಮೀಷನ್ ತಂದುಬಿಟ್ಟರು. ಪರ್ಮೀಷನ್ ತಂದಮೇಲೆ ಹಳ್ಳಿಯ ಪುರುಷ ಸಿಂಹಗಳು ಸುಮ್ಮನೆ ಇದ್ದುಬಿಟ್ಟರು.. ಆಗ ತನ್ನ ಹನ್ನೆರಡು ಜನ ಗೆಳೆಯತಿಯರ ತಂಡ ಕಟ್ಟಿಕೊಂಡ ಬಬಿತಾ ಬೆಟ್ಟ ಅಗೆಯಲು ಆರಂಭಿಸಿದರು.

ನಂತರ ಹಳ್ಳಿಯ 200 ಮಹಿಳೆ ಸೇರಿಕೊಂಡರು.. ಮನೆಯ ಎಲ್ಲಾ ಕೆಲಸ ಮುಗಿದ ಮೇಲೆ ಬೆಟ್ಟದ ಕೆಲಸ ಇಡಿಯುತ್ತಿದ್ದ ಮಹಿಳೆಯರು ಸುಮಾರು 18 ತಿಂಗಳುಗಳ ಕಾಲ ಕಷ್ಟ ಪಟ್ಟು ಅರ್ಧ ಕಿಲೋಮೀಟರ್ ಉದ್ದದ ಬೆಟ್ಟವನ್ನು ಅಗೆದು ಕೊನೆಗೆ ಬೆಟ್ಟಗಳಿಂದ ಹರಿಯುವ ನೀರನ್ನ ಊರಿಗೆ ತರುವಲ್ಲಿ ಯಶಸ್ವಿಯಾಗಿಯೇ ಬಿಟ್ಟರು.. ಬೆಟ್ಟದಷ್ಟು ಕಷ್ಟವನ್ನು ಬಗೆ ಹರಿಸಿದ 19 ವರ್ಷದ ಬಬಿತಾಳ ಧೈರ್ಯವನ್ನು ಮೆಚ್ಚಲೇಬೇಕು.. ಬಬಿತಾ ಹಾಗೂ 200 ಮಹಿಳೆಯರ ಆತ್ಮ ಸ್ಥೈರ್ಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.