ನಮಸ್ತೆ ಸ್ನೇಹಿತರೆ, 70. 80 ರ ದಶಕದಲ್ಲಿ ಬಾಲನಟಿಯಾಗಿ ಮಿಂಚಿದ ಬೇಬಿ ಇಂದಿರಾ.. ಕನ್ನಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಬಹುತೇಕವಾಗಿ ಬೇಬಿ ಇಂದಿರಾ ಅವರು ನಟಿಸಿರುವ ಎಲ್ಲಾ ಮಕ್ಕಳ ಚಿತ್ರಗಳು ಗೆಲುವು ಕಂಡಿದೆ.. ಅಂದಿನ ಕಾಲದ ಮಕ್ಕಳ ಚಿತ್ರಗಳು ವೀಕ್ಷಕರಿಗೆ ತುಂಬಾ ಮನರಂಜನೆ ಕೊಡುತ್ತಿತ್ತು. ಹಲವಾರು ಮಕ್ಕಳ ಚಿತ್ರದಲ್ಲಿ ಬೇಬಿ ಇಂದಿರಾ ಕಾಣಿಸಿಕೊಂಡಿದ್ದಾರೆ.. ಡಾ.ರಾಜ್ ಕುಮಾರ್ ಹಾಗೂ ಭಾರತಿ ವಿಷ್ಣುವರ್ಧನ್ ಅವರ ಜನ್ಮ ರಹಸ್ಯ ಎನ್ನುವ ಸಿನಿಮಾ ಮೂಲಕ ಬಾಲ ನಟಿಯಾಗಿ ರಂಗಪ್ರವೇಶಿಸಿದ ನಟಿ ಎಂದರೆ ಅದು ಬೇಬಿ ಇಂದಿರಾ.

ನಂತರ ಪುಟಾಣಿ ಏಜೆಂಟ್, ಸಿಂಹದ ಮರಿ ಸೈನ್ಯ, ಮಕ್ಕಳ ಭಾಗ್ಯ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.. ಡಾ.ರಾಜ್ ಕುಮಾರ್, ವಿಷ್ಣುವರ್ಧನ್ ಮುಂತಾದ ನಟರೊಂದಿದೆ ಬೇಬಿ ಇಂದಿರಾ ನಟಿಸಿದ್ದಾರೆ. ಕನ್ನಡದ ಹಲಾವರು ಸಿನಿಮಾಗಳಲ್ಲಿ ನಟಿಸಿದ ಬೇಬಿ ಇಂದಿರಾ ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಹಿಂದಿ ಚಿತ್ರಗಳಲ್ಲಿಯೂ ಅಭಿನಯಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.. 1984 ರಲ್ಲಿ ತೆರೆಕಂಡ ಅರ್ಜುನ್ ಸರ್ಜಾ ನಾಯಕ ನಟರಾಗಿ ನಟಿಸಿರುವಂತಹ ಮಳೆ ಬಂತು ಮಳೆ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು.

ಇನ್ನೂ ತಮಿಳು ಚಿತ್ರರಂಗದಲ್ಲಿ ಬಾಲ ನಟನಾಗಿ ನಟಿಸಿದ್ದ ಮಾಸ್ಟರ್ ಶ್ರೀದರ್ ಎಂಬುವವರನ್ನ ಬೇಬಿ ಇಂದಿರಾ ಮದುವೆಯಾದರು.. ಈ ದಂಪತಿಗೆ ಪ್ರಶಾಂತ್ ಹಾಗೂ ರಕ್ಷಿತ್ ಎಂಬ ಇಬ್ಬರು ಗಂಡು ಮಕ್ಕಳು ಇದ್ದಾರೆ. ಮಾಸ್ಟರ್ ಶ್ರೀದರ್ ಅವರು 2013 ರ ತಮ್ಮ 60 ನೇ ವಯಸ್ಸಿನಲ್ಲಿ ಇಹಲೋಕವನ್ನು ತ್ಯಜಿಸುತ್ತಾರೆ.. ಸುಮಾರು 50 ವರ್ಷ ದಾಟಿರುವ ಬೇಬಿ ಇಂದಿರಾ ತಮ್ಮ ಮಕ್ಕಳ ಜೊತೆ ಚೆನ್ನೈ ನಲ್ಲಿ ನೆಲೆಸಿದ್ದಾರೆ.