ಮಕ್ಕಳನ್ನು ಸಾಕೋದು ಅಂದ್ರೆ ಹಾಗೇ ತುಂಬಾ ಜಾಗೃತೆಯಾಗಿರಬೇಕು, ಕೊಂಚ ಅಜಾಗರೂಕತೆಯಿಂದ ಇದ್ರೂ ಆ ದಿನ ಆಕ್ಷಣ ದುರಂತವೇ ಆಗಿ ಹೋಗುತ್ತೆ, ಮಗುವನ್ನು ಸಾಕುವಾಗ ಸಾವಿರ ಕನಸುಗಳನ್ನಿಟ್ಟುಕೊಂಡು, ಸಾಕಷ್ಟು ಪ್ರೀತಿಯಿಂದ ಅತೀ ಹೆಚ್ಚಾದ ಕನಸು ಕಂಡಿರುತ್ತಾರೆ, ಆದ್ರೆ ಒಂದು ಕ್ಷಣ ಮಾಡುವ ಯಡವಟ್ಟು ಅವರ ಎಲ್ಲ ಕನಸನ್ನು ನುಚ್ಚು ನೂರಾಗಿಸುತ್ತೆ,
ಹೌದು ಇಲ್ಲೂ ಸಹ ಅಂತಹದ್ದೇ ಒಂದು ಘ’ಟ’ನೆ ನಡೆದಿದೆ. ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಬೇವಿನಹಳ್ಳಿ ತಾಂಡಾದಲ್ಲಿ ಈ ಘ’ಟ’ನೆ ನಡೆದಿದ್ದು, ಕೇವಲ ಒಂದು ವರ್ಷದ ಎಡು ತಿಂಗಳ ಹಸುಗೂಸು ಉ’ಸಿ’ರು ಚೆಲ್ಲಿದೆ. ಮಗು ಮನುವೀರ್ ಮೃ’ತ ಕಂದಮ್ಮ ಅಂತ ತಿಳಿದುಬಂದಿದೆ.

ಬದುಕಿ ಬಾಳಬೇಕಾದ ಕಂದನೀಗ ಬಾರದ ಲೋಕಕ್ಕೆ ಪಯಣಿಸಿದ್ದು ಹೆತ್ತವರ ಸಂಕಟ ಹೇಳ ತೀರದಾಗಿತ್ತು. ಮನವೀರ್ ನನ್ನು ಪ್ರತಿದಿನ ಮನೆಯಿಂದ ಹೊರಗೆ ಆಟವಾಡಲು ಬಿಡುತ್ತಿದ್ದರು.. ಮನೆಯ ಅಂಗಳದಲ್ಲಿ ಅಕ್ಕಪಕ್ಕದ ಮಕ್ಕಳ ಜೊತೆ ಪ್ರತಿದಿನ ಮನ್ವೀರ್ ಆಟವಾಡುತ್ತಿದ್ದ.. ಅದೇ ರೀತಿ ನಿನ್ನೆ ಸಂಜೆಯೂ ಸಹ ಅಕ್ಕಪಕ್ಕದ ಮಕ್ಕಳ ಜೊತೆ ಆಟವಾಡುತ್ತಿದ್ದ.. ಆದರೆ ಮಕ್ಕಳ ಕೈನಲ್ಲಿ ಏನಿರುತ್ತದೆ ಏನಿರುವುದಿಲ್ಲ ಎಂಬುದನ್ನು ಹೆತ್ತವರು ಗಮನಿಸದಿದ್ದರೆ ಇಂತಹ ಘ’ಟ’ನೆಗಳು ನಡೆಯೋದು ಖಂಡಿತ..

ಗೋಲಿ , ನಾಣ್ಯವನ್ನೆಲ್ಲ ಮಕ್ಕಳು ನುಂಗುವುದು ಗೊತ್ತೇಯಿದೆ, ಹಾಗಾಗಿ ಹೆತ್ತವರು ಸ್ವಲ್ಪ ಯೋಚನೆ ಮಾಡಬೇಕು. ಮನ್ವೀರ್ ಮಕ್ಕಳ ಜೊತೆ ಆಟವಾಡುತ್ತಾ ಗಾಜಿನ ಗೋಲಿಯನ್ನು ಬಾಯಲ್ಲಿ ಹಾಕಿಕೊಂಡು ಕ್ಷಣ ಮಾತ್ರದಲ್ಲಿಯೇ ಅದನ್ನು ನುಂ’ಗಿ’ಬಿಟ್ಟಿದ್ದಾನೆ.. ಇದನ್ನು ನೋಡಿದ ಬೇರೊಬ್ಬ ಬಾಲಕ ವಿಚಾರವನ್ನು ಹೆತ್ತವರಿಗೆ ತಿಳಿಸಿದ್ದಾನೆ.. ಆದರೆ ಅಷ್ಟರಲ್ಲಿ ಕಾಲ ಮಿಂ’ಚಿ ಹೋಗಿತ್ತು. ಹೌದು ಮಗುವನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಸಹ ಹತ್ತು ನಿಮಿಷಗಳಲ್ಲಿಯೇ ಮಗು ಕೊ’ನೆ’ಯುಸಿರೆಳೆದುಬಿಟ್ಟಿತ್ತು..
ಈಗ ಎಷ್ಟು ಗೋಗರೆದರು, ಅತ್ತರೂ , ಆ ಕಂದ ಮತ್ತೆ ಬರಲೇಯಿಲ್ಲ..